ಹಿಂದೆ ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್‌ಗಳಲ್ಲಿ ಆಲೂಗೆಡ್ಡೆ ಬೆಳೆ ಬೆಳೆಯಲಾಗುತ್ತಿತ್ತು. ಆದರೆ ಅಂಗಮಾರಿ ರೋಗ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಇಂದು ಆಲೂಗಡ್ಡೆ ಬೆಳೆಯುವ ಪ್ರದೇಶಗಳು ಬಹಳಷ್ಟು ಕುಂಠಿತಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಭರವಸೆ ನೀಡುವ ಬದಲು ಕೇವಲ ಮೇಳ ಆಯೋಜನೆ ಮಾಡಿ ಕೈತೊಳೆದುಕೊಳ್ಳುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಆಲೂಗಡ್ಡೆ ಮೇಳದ ನಂತರ ಕೆಲ ರೈತರಲ್ಲಿ ಮತ್ತೆ ಆಲೂಗೆಡ್ಡೆ ಬೆಳೆಯುವ ಆಸಕ್ತಿ ಮೂಡಿದೆ. ಈ ಉತ್ಸಾಹವನ್ನು ಉಳಿಸಬೇಕಾದರೆ ಮುಂದಿನ ದಿನಗಳಲ್ಲಿ ತೋಟಗಾರಿಕೆ ಇಲಾಖೆ ಮೂಲಕವೇ ದೃಢೀಕೃತ, ಗುಣಮಟ್ಟದ ಬಿತ್ತನೆ ಆಲೂಗಡ್ಡೆಗಳನ್ನು ರೈತರಿಗೆ ವಿತರಣೆ ಮಾಡಬೇಕು ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಬಿತ್ತನೆ ಆಲೂಗಡ್ಡೆಯನ್ನು ಇಲಾಖೆ ವತಿಯಿಂದ ರೈತರಿಗೆ ಮೋಸವಾಗದಂತೆ ದೃಢೀಕರಣ ಮಾಡಿ ವಿತರಣೆ ಮಾಡಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕಳೆದ ಎರಡು ದಿನಗಳ ಹಿಂದೆ ಇವರು ಆಲೂಗಡ್ಡೆ ಬಿತ್ತನೆ ಬೀಜದ ಮೇಳ ಮಾಡಲಿಲ್ಲ. ಈ ಬಗ್ಗೆ ಹೆಚ್ಚಿನ ವಿಚಾರ ಹೇಳುತ್ತಾರೆ ಕೇಳೋಣ ಎಂದು ರೈತರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ನಾವು ಬಿತ್ತನೆ ಬೀಜ ಎಂದೂ ಕೊಡ ಬರುವುದಿಲ್ಲ ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಸರ್ಟಿಫೀಕೆಟ್ ಕೊಟ್ಟಿದ್ದಾರೆ. ಬೀಜದ ಮೇಳ ಎಂದು ಏಕೆ ಹೇಳಬೇಕು, ರೈತರ ದಿಕ್ಕು ಏಕೆ ತಪ್ಪಿಸಬೇಕು ಎಂದು ಪ್ರಶ್ನಿಸಿದರು. ಇದನ್ನು ಚರ್ಚೆ ಮಾಡಲೆಂದು ನಾವು ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಬಂದು ದಡದಡನೆ ವಾಪಸ್ ಹೋದರೇ ನಮಗೆ ಏನು ಅರ್ಥವೆ ಆಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಲೂಗಡ್ಡೆ ಮೇಳದಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಆಲೂಗಡ್ಡೆ ಬೆಳೆಗೆ ಉತ್ತೇಜನ ನೀಡುವಂತಹ ಯಾವುದೇ ತಾಂತ್ರಿಕ ಸಲಹೆ, ಸೂಚನೆಗಳು ಮೇಳದಲ್ಲಿ ದೊರಕಿಲ್ಲ. ಉಸ್ತುವಾರಿ ಸಚಿವರು ಕೆಲ ಹೊತ್ತು ಮಾತನಾಡುವುದಕ್ಕೂ ಸಮಯ ನೀಡದೇ ನೇರವಾಗಿ ಮಾತನಾಡಿ ಹೊರಟುಹೋದರು. ರೈತರು ಹಾಗೂ ರೈತ ಮುಖಂಡರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳುವ ಅವಕಾಶವೇ ಸಿಗಲಿಲ್ಲ. ಇಂತಹ ಮೇಳಗಳಿಂದ ರೈತರಿಗೆ ಲಾಭವೇನು ಎಂದು ಪ್ರಶ್ನಿಸಿದರು.ಹಿಂದೆ ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್‌ಗಳಲ್ಲಿ ಆಲೂಗೆಡ್ಡೆ ಬೆಳೆ ಬೆಳೆಯಲಾಗುತ್ತಿತ್ತು. ಆದರೆ ಅಂಗಮಾರಿ ರೋಗ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಇಂದು ಆಲೂಗಡ್ಡೆ ಬೆಳೆಯುವ ಪ್ರದೇಶಗಳು ಬಹಳಷ್ಟು ಕುಂಠಿತಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಭರವಸೆ ನೀಡುವ ಬದಲು ಕೇವಲ ಮೇಳ ಆಯೋಜನೆ ಮಾಡಿ ಕೈತೊಳೆದುಕೊಳ್ಳುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಆಲೂಗಡ್ಡೆ ಮೇಳದ ನಂತರ ಕೆಲ ರೈತರಲ್ಲಿ ಮತ್ತೆ ಆಲೂಗೆಡ್ಡೆ ಬೆಳೆಯುವ ಆಸಕ್ತಿ ಮೂಡಿದೆ. ಈ ಉತ್ಸಾಹವನ್ನು ಉಳಿಸಬೇಕಾದರೆ ಮುಂದಿನ ದಿನಗಳಲ್ಲಿ ತೋಟಗಾರಿಕೆ ಇಲಾಖೆ ಮೂಲಕವೇ ದೃಢೀಕೃತ, ಗುಣಮಟ್ಟದ ಬಿತ್ತನೆ ಆಲೂಗಡ್ಡೆಗಳನ್ನು ರೈತರಿಗೆ ವಿತರಣೆ ಮಾಡಬೇಕು.ಯಾವುದೇ ಕಾರಣಕ್ಕೂ ಕಳಪೆ ಬಿತ್ತನೆ ವಸ್ತು ವಿತರಣೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಂಗಮಾರಿ ರೋಗ ಸೇರಿದಂತೆ ಇತರೆ ರೋಗಗಳಿಂದ ಅಥವಾ ಪ್ರಕೃತಿ ವೈಪರೀತ್ಯದಿಂದ ಆಲೂಗೆಡ್ಡೆ ಬೆಳೆ ನಾಶವಾದಲ್ಲಿ, ಇಲಾಖೆ ವತಿಯಿಂದಲೇ ತಕ್ಷಣ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು. ಇದರಿಂದ ರೈತರಿಗೆ ನಷ್ಟದ ಭೀತಿ ಕಡಿಮೆಯಾಗುತ್ತದೆ ಹಾಗೂ ಮತ್ತೆ ಆಲೂಗಡ್ಡೆ ಬೆಳೆಯಲು ಧೈರ್ಯ ಬರುತ್ತದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ರೈತ ಮುಖಂಡರಾದ ಪದ್ಮಪ್ರಭು, ಸುರೇಶ್, ಆಲೂರು ತಾಲೂಕು ಅಧ್ಯಕ್ಷ ಮನು, ಲಕ್ಷ್ಮಣ ಇತರರು ಉಪಸ್ಥಿತರಿದ್ದರು.