ಬಾಗಲಕೋಟೆ: ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪಿಯುಐಡಿಗೆ ಸಂಬಂಧಿಸಿದ ಸಂತ್ರಸ್ತರಿಗೆ 118 ಇ-ಖಾತಾ ಉತಾರೆಗಳನ್ನು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಶುಕ್ರವಾರ ವಿತರಿಸಿದರು.
ಬಾಗಲಕೋಟೆ: ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪಿಯುಐಡಿಗೆ ಸಂಬಂಧಿಸಿದ ಸಂತ್ರಸ್ತರಿಗೆ 118 ಇ-ಖಾತಾ ಉತಾರೆಗಳನ್ನು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಶುಕ್ರವಾರ ವಿತರಿಸಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಇ-ಖಾತಾ ಉತಾರೆಗಳನ್ನು ವಿತರಿಸಿ ಮಾತನಾಡಿದ ಅವರು, ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಇ-ಖಾತಾ ಉತಾರೆಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರಿಗೆ ಇ-ಖಾತಾ ಉತಾರೆಗಳನ್ನು ವಿತರಿಸಲಾಗುವುದು. ಈ ಮೂಲಕ ಅರ್ಹ ಸಂತ್ರಸ್ತರಿಗೆ ದಾಖಲೆಗಳನ್ನು ಒದಗಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಾಧಿಕಾರವು ಬದ್ದವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಬಿಟಿಡಿಎ ಮುಖ್ಯ ಅಭಿಯಂತರ ಚಂದ್ರಹಾಸ ಬಂಡಿ, ಅಭಿಯಂತರರ ಕಚೇರಿಯ ತಾಂತ್ರಿಕ ಸಹಾಯಕ ರವಿ ಕೋಮಾರ, ಕಾರ್ಯಾಲಯದ ಎನ್.ಬಿ.ಅಂಕದ, ಬಸವೇಶ್ವರ ಬ್ಯಾಂಕ್ ನಿರ್ದೇಶಕ ಶ್ರೀನಿವಾಸ ಬಳ್ಳಾರಿ ಇತರರು ಇದ್ದರು.