16 ಸಾವಿರ ಜೋಡಿ ಕಸದ ಡಬ್ಬಿಗಳ ವಿತರಣೆ

| Published : Jul 21 2025, 12:00 AM IST

ಸಾರಾಂಶ

ಮಧುಗಿರಿಯನ್ನು ಸ್ವಚ್ಛ ಸುಂದರವನ್ನಾಗಿಸುವ ನಿಟ್ಟಿನಲ್ಲಿ 60 ಲಕ್ಷಕ್ಕೂ ಅಧಿಕ ವೆಚ್ಚದ ವಿವಿಧ ಯಂತ್ರೋಪಕರಣಗಳು ಮತ್ತು 16 ಸಾವಿರ ಜೋಡಿ ಕಸದ ಡಬ್ಬಿಗಳನ್ನು ನಗರದ ನಾಗರಿಕರಿಗೆ ಎಂಎಲ್‌ಸಿ ಆರ್‌.ರಾಜೇಂದ್ರ ವಿತರಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಮಧುಗಿರಿಯನ್ನು ಸ್ವಚ್ಛ ಸುಂದರವನ್ನಾಗಿಸುವ ನಿಟ್ಟಿನಲ್ಲಿ 60 ಲಕ್ಷಕ್ಕೂ ಅಧಿಕ ವೆಚ್ಚದ ವಿವಿಧ ಯಂತ್ರೋಪಕರಣಗಳು ಮತ್ತು 16 ಸಾವಿರ ಜೋಡಿ ಕಸದ ಡಬ್ಬಿಗಳನ್ನು ನಗರದ ನಾಗರಿಕರಿಗೆ ಎಂಎಲ್‌ಸಿ ಆರ್‌.ರಾಜೇಂದ್ರ ವಿತರಿಸಿದರು.

ಪುರಸಭೆ ಕಚೇರಿ ಆವರಣದಲ್ಲಿ ಭಾನುವಾರ ನಡೆದ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, 27 ಲಕ್ಷ ರು.ವೆಚ್ಚದಲ್ಲಿ ಪ್ರತಿ ಮನೆ ಮನೆಗೂ ತ್ಯಾಜ್ಯ ವಸ್ತು ಬೇರ್ಪಡಿಸುವ ಪುರಸಭೆ ವಾಹನಕ್ಕೆ ಹಸಿರು ಮತ್ತು ಹಳದಿ ಬಣ್ಣದ ಎರಡು ಕಸದ ಡಬ್ಬಿಗಳ ವಿತರಣೆ ಮಾಡಲಾಗಿದೆ. 15 ನೇ ಹಣಕಾಸು ಅನುದಾನದಲ್ಲಿ 7.97 ಲಕ್ಷ ರು. ವೆಚ್ಚದಲ್ಲಿ ಪುರಸಭಾ ವ್ಯಾಪ್ತಿಯಲ್ಲಿನ ರಸ್ತೆಗಳನ್ನು ಸ್ವಚ್ಛಗೊಳಿಸುವ ಯಂತ್ರ, ಸ್ವಚ್ಛ ಭಾರತ್‌ ಮಿಷನ್‌ ಅಡಿ 21.71ಲಕ್ಷ ವೆಚ್ಚದ ಮನೆ ಮನೆ ಮುಂದೆ ತೆರಳಿ ಕಸ ಸಂಗ್ರಹಿಸುವ ಮೂರು ಮಿನಿ ಟಿಪ್ಪರ್‌ ವಾಹನಗಳು 4.11 ಲಕ್ಷ ರು.ವೆಚ್ಚದಲ್ಲಿ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸುರಕ್ಷಾ ಸಮವಸ್ತ್ರಗಳನ್ನು ಇದೇ ವೇಳ ವಿತರಿಸಲಾಯಿತು.

ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿ, ಮಧುಗಿರಿಯನ್ನು ಕ್ಲಿನ್‌ ಸಿಟಿ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸಚಿವ ಕೆ.ಎನ್.ರಾಜಣ್ಣ ಮತ್ತು ಎಂಎಲ್‌ಸಿ ಆರ್‌.ರಾಜೇಂದ್ರ ಶ್ರಮದಿಂದಾಗಿ ಮಧುಗಿರಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ ಮುಂದಿನ ದಿನಗಳಲ್ಲಿ ಪಟ್ಟಣದ ಚಿತ್ರಣವೇ ಬದಲಾಗಲಿದೆ ಎಂದರು.

ಪುರಸಭೆ ಸದಸ್ಯರುಗಳಾದ ಎಂ.ವಿ.ಗೋವಿಂದರಾಜು,ಎಂ.ಶ್ರೀಧರ್.ಮಂಜುನಾಥ್ ಆಚಾರ್‌, ತಿಮ್ಮರಾಯಪ್ಪ, ಕೆಪಿಸಿಸಿ ಮೆಂಬರ್ ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ನಾಗೇಶ್‌ ಬಾಬು, ನಾಮಿನಿ ಸದಸ್ಯರಾದ ಗುಂಡಣ್ಣ, ನರಸಿಂಹಮೂರ್ತಿ, ರಂಗರಾಜು, ಮಾಜಿ ಅಧ್ಯಕ್ಷ ಕೆ.ಪ್ರಕಾಶ್‌, ಮುಖಂಡರಾದ ಎಂ.ವಿ.ಮಂಜುನಾಥ್‌, ಚೀಫ್ ಆಫೀಸರ್ ಎಸ್.ಸುರೇಶ್‌, ಪರಿಸರ ಅಭಿಯಂತರ ಫಿರೋಜ್‌ ಇದ್ದರು.