ರೋಟರಿ ಗ್ರೀನ್ ವೇ ಯಿಂದ ಅಂಗನವಾಡಿ ಮಕ್ಕಳಿಗೆ ಪರಿಕರ ವಿತರಣೆ

| Published : Aug 15 2025, 01:00 AM IST

ರೋಟರಿ ಗ್ರೀನ್ ವೇ ಯಿಂದ ಅಂಗನವಾಡಿ ಮಕ್ಕಳಿಗೆ ಪರಿಕರ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ರೋಟರಿ ಗ್ರೀನ್ ವೇ ಸಂಸ್ಥೆಯ ವತಿಯಿಂದ ತಾಲೂಕಿನ ಗೌಡಹಳ್ಳಿ ಗ್ರಾಮದ ೧ ನೇ ಅಂಗನವಾಡಿ ಕೇಂದ್ರಕ್ಕೆ ಚೇರ್ ಹಾಗೂ ಲೇಖನ ಪರಿಕರಗಳನ್ನು ನೀಡಲಾಯಿತು.

ಯಳಂದೂರು: ತಾಲೂಕು ರೋಟರಿ ಗ್ರೀನ್ ವೇ ಸಂಸ್ಥೆಯ ವತಿಯಿಂದ ತಾಲೂಕಿನ ಗೌಡಹಳ್ಳಿ ಗ್ರಾಮದ ೧ ನೇ ಅಂಗನವಾಡಿ ಕೇಂದ್ರಕ್ಕೆ ಚೇರ್ ಹಾಗೂ ಲೇಖನ ಪರಿಕರಗಳನ್ನು ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ವೈ.ಜಿ. ನಿರಂಜನಸ್ವಾಮಿ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಗೌಡಹಳ್ಳಿ ಅಂಗನವಾಡಿ ಕೇಂದ್ರದ ಎಲ್‌ಕೆಜಿ ಮಕ್ಕಳಿಗೆ ಚೇರ್, ಸ್ಲೇಟ್ ಸೇರಿದಂತೆ ಇತರೆ ಲೇಖನ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೇಂದ್ರಗಳಿಗೂ ಇದನ್ನು ನೀಡುವ ಉದ್ದೇಶವಿದೆ. ಇದರೊಂದಿಗೆ ಸಂಸ್ಥೆಯ ವತಿಯಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಆರೋಗ್ಯ ಶಿಬಿರಗಳು, ರಕ್ತದಾನ ಸೇರಿದಂತೆ ಇತರೆ ಕೆಲಸಗಳನ್ನು ಮಾಡಲಾಗುವುದು ಎಂದರು.ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು, ಖಜಾಂಚಿ ರವಿ, ಡಾ. ಸಾಗರ್, ವಿಜಿ, ನಟರಾಜು, ವೈ.ಬಿ. ಶಿವಕುಮಾರ್, ರುದ್ರಯ್ಯ ಸೇರಿದಂತೆ ಇತರರು ಇದ್ದರು.