ಭಗವಾನ್‌ ಗೌತಮ ಬುದ್ಧ ಜಯಂತಿ ನಿಮಿತ್ತ ಅರಳಿ ಸಸಿ ವಿತರಣೆ

| Published : May 13 2025, 11:47 PM IST

ಭಗವಾನ್‌ ಗೌತಮ ಬುದ್ಧ ಜಯಂತಿ ನಿಮಿತ್ತ ಅರಳಿ ಸಸಿ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಪಂಚಕ್ಕೆ ಶಾಂತಿ ಮಂತ್ರ ಸಾರಿದ ಮಹಾನ್ ವ್ಯಕ್ತಿ ಭಗವಾನ್ ಬುದ್ಧರ ಅಹಿಂಸಾ ಮಾರ್ಗವನ್ನು ಜೀವನದಲ್ಲಿ ಅನುಸರಿಸಿದರೆ ಪ್ರತಿಯೊಬ್ಬರ ಬಾಳಲ್ಲೂ ನೆಮ್ಮದಿ, ಸುಖ, ಶಾಂತಿ ಹಾಗೂ ತಾಳ್ಮೆ ನೆಲಸುತ್ತದೆ. ಭಗವಾನ್ ಬುದ್ಧರ ವಿಚಾರಧಾರೆಗಳು ಸರ್ವಕಾಲಿಕವಾಗಿವೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಬೋರಾಪುರ ಗ್ರಾಮದಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಭಗವಾನ್ ಬುದ್ಧ ಜಯಂತಿ ಅಂಗವಾಗಿ ಅರಳಿ ಸಸಿಗಳನ್ನು ನೆಡಲಾಯಿತು.

ಬಿಎಸ್ಪಿ ತಾಲೂಕು ಅಧ್ಯಕ್ಷ ಶಂಕರ್ ಮಾತನಾಡಿ, ಪ್ರಪಂಚಕ್ಕೆ ಶಾಂತಿ ಮಂತ್ರ ಸಾರಿದ ಮಹಾನ್ ವ್ಯಕ್ತಿ ಭಗವಾನ್ ಬುದ್ಧರ ಅಹಿಂಸಾ ಮಾರ್ಗವನ್ನು ಜೀವನದಲ್ಲಿ ಅನುಸರಿಸಿದರೆ ಪ್ರತಿಯೊಬ್ಬರ ಬಾಳಲ್ಲೂ ನೆಮ್ಮದಿ, ಸುಖ, ಶಾಂತಿ ಹಾಗೂ ತಾಳ್ಮೆ ನೆಲಸುತ್ತದೆ ಎಂದು ಅಭಿಪ್ರಾಯಪಟ್ಟರು.

ಬಿಎಸ್ಪಿ ತಾಲೂಕು ಉಸ್ತುವಾರಿ ಎಚ್.ಎಚ್.ಸ್ವಾಮಿ ಮಾತನಾಡಿ, ಭಗವಾನ್ ಬುದ್ಧರ ವಿಚಾರಧಾರೆಗಳು ಸರ್ವಕಾಲಿಕವಾಗಿವೆ. ಬುದ್ಧರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಈ ವೇಳೆ ಮುಖಂಡರಾದ ಕೃಷ್ಣಪ್ಪ, ಲೋಕೇಶ್, ಗೋಪಾಲ್‌ಸ್ವಾಮಿ, ಸುಬ್ರಹ್ಮಣ್ಯ ಇದ್ದರು.

ಗೌತಮ ಬುದ್ಧ ಮಹಾನ್ ದಾರ್ಶನಿಕ: ಡಾ.ಸ್ಮಿತಾರಾಮು

ಮದ್ದೂರು: ಗೌತಮ ಬುದ್ಧ ಮಹಾನ್ ದಾರ್ಶನಿಕ. ಲೋಕಕ್ಕೆ ಶಾಂತಿ, ಅಹಿಂಸೆಯ ಮಹತ್ವವನ್ನು ಬೋಧಿದ ಮಹಾನ್ ವ್ಯಕ್ತಿ ಎಂದು ತಹಸೀಲ್ದಾರ್ ಡಾ.ಸ್ಮಿತಾರಾಮು ಬಣ್ಣಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ತಾಲೂಕು ಆಡಳಿತ ವತಿಯಿಂದ ನಡೆದ ಗೌತಮ ಬುದ್ಧ ಜಯಂತಿಯಲ್ಲಿ ಮಾತನಾಡಿ, ಸಿದ್ಧಾರ್ಥ ಎನ್ನುವ ರಾಜವಂಶದ ಕುಡಿ ಸಕಲ ವೈಭೋಗವನ್ನು ತ್ಯಜಿಸಿ ಜ್ಞಾನೋದಯ ಪಡೆದು ಗೌತಮ ಬುದ್ಧನಾಗಿ ಪ್ರಪಂಚಕ್ಕೆ ಶಾಂತಿ ಮಂತ್ರ ಸಾರಿದ ಮಹಾನ್ ವ್ಯಕ್ತಿ ಎಂದು ಪ್ರಶಂಸಿದರು.

ಈ ವೇಳೆ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಮುಖ್ಯಾಧಿಕಾರಿ ಮೀನಾಕ್ಷಿ, ತಾಪಂ ಇಒ ರಾಮಲಿಂಗಯ್ಯ, ಬಿಇಒ ಧನಂಜಯ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಮುಖಂಡರಾದ ಆತಗೂರು ಲಿಂಗಯ್ಯ, ಡಿ.ಸಿ.ಮಹೇಂದ್ರ, ಚಂದ್ರಶೇಖರ್ ಇದ್ದರು.

ಇಂದು ಒಡತ ತುಡಿತಕ್ಕೆ ಕೇಡು ಪುಸ್ತಕ ಬಿಡುಗಡೆ

ಕನ್ನಡಪ್ರಭ ವಾರ್ತೆ ಮಂಡ್ಯ

ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮೇ ೧೪ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಡಿಎಚ್‌ಒ ಕಚೇರಿ ಆವರಣದಲ್ಲಿರುವ ಜೆ.ಎಲ್. ಜವರೇಗೌಡ ಸಭಾಂಗಣದಲ್ಲಿ ಒಡತ ತುಡಿತಕ್ಕೆ ಕೇಡು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ ಸಂಚಾಲಕ ಜನಾರ್ಧನ್ ತಿಳಿಸಿದರು.ಒಡಲ ತುಡಿತಕ್ಕೆ ಕೇಡು ಹೆಣ್ಣು ಭ್ರೂಣ ಹತ್ಯೆ- ಒಂದು ಅಧ್ಯಯನ ಪುಸ್ತಕವು ಎರಡನೇ ಬಾರಿಗೆ ಬಿಡುಗಡೆಗೊಳ್ಳುತ್ತಿದೆ. ಜಿಲ್ಲಾಧಿಕಾರಿ ಡಾ.ಕುಮಾರ ಕಾರ್ಯಕ್ರಮ ಉದ್ಘಾಟಿಸುವರು, ಡಿಹೆಚ್‌ಓ ಡಾ.ಕೆ.ಮೋಹನ್ ಅಧ್ಯಕ್ಷತೆ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತ ನಾಯಕಿ ಸುನಂದಾ ಜಯರಾಂ ಪುಸ್ತಕ ಬಿಡುಗಡೆ ಮಾಡುವರು. ಅಕ್ಕ ಮಹಾದೇವಿ ಮಹಿಳಾ ವಿವಿ ವಿಶೇಷ ಅಧಿಕಾರಿ ಎಚ್.ಎಂ.ಹೇಮಲತಾ ಪುಸ್ತಕ ಕುರಿತು ಮಾತನಾಡುವರು. ವಿಶೇಷ ಆಹ್ವಾನಿತರಾಗಿ ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ವಿಮೋಚನ ಮಹಿಳಾ ಸಂಘಟನೆ ಕಾರ್ಯದರ್ಶಿ ಸಲಿನ್ ಸುಗುಣ, ಪುಸ್ತಕದ ಲೇಖಕ ಡಾ.ಮಂಜುನಾಥ ಅದ್ದೆ ಭಾಗವಹಿಸುವರು ಎಂದರು.

ವೇದಿಕೆಯ ರಮಾನಂದ, ಸಲಿನ್ ಸುಗುಣ, ವಿನೋಧ, ಶಿಲ್ಪ, ಇಂಪನ ಗೋಷ್ಠಿಯಲ್ಲಿದ್ದರು.