ಹೆಣ್ಣು ಮಕ್ಕಳಿಗೆ ರೋಟರಿಯಿಂದ ಸೈಕಲ್‌ ವಿತರಣೆ

| Published : Feb 25 2024, 01:49 AM IST

ಸಾರಾಂಶ

ಮಾಗಡಿ: ರೋಟರಿ ಸೆಂಟ್ರಲ್ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಕೊಂಡು ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಎಂದು ರೋಟರಿ ತಾಲೂಕು ಅಧ್ಯಕ್ಷ ಪ್ರಭಾಕರ್ ಹೇಳಿದರು.

ಮಾಗಡಿ: ರೋಟರಿ ಸೆಂಟ್ರಲ್ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಕೊಂಡು ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಎಂದು ರೋಟರಿ ತಾಲೂಕು ಅಧ್ಯಕ್ಷ ಪ್ರಭಾಕರ್ ಹೇಳಿದರು.

ತಾಲೂಕಿನ ಮಾಡಬಾಳ್ ಸರ್ಕಾರಿ ಪ್ರೌಢಶಾಲೆ ಹೆಣ್ಣು ಮಕ್ಕಳಿಗೆ ರೋಟರಿ ಮಾಗಡಿ ಸೆಂಟ್ರಲ್ ವತಿಯಿಂದ ಉಚಿತ ಸೈಕಲ್ ವಿತರಿಸಿ ಮಾತನಾಡಿದ ಅವರು, ತಾವು ದುಡಿದ ಹಣದಲ್ಲಿ ಸಮಾಜ ಮುಖಿ ಕೆಲಸಗಳಿಗೆ ಅಲ್ಪ ಮೊತ್ತವನ್ನಾದರೂ ವಿನಿಯೋಗಿಸಬೇಕು. ಸರ್ಕಾರ ಪ್ರೌಢಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಕೆಲವು ವರ್ಷಗಳಿಂದ ನಿಲ್ಲಿಸಿದೆ. ಗ್ರಾಮೀಣ ಹೆಣ್ಣು ಮಕ್ಕಳಿಗೆ ರೋಟರಿಯಿಂದ ರಾಮನಗರ ಜಿಲ್ಲೆಯಲ್ಲಿ 120 ಸೈಕಲ್‌ಗಳ ವಿತರಣೆ ಮಾಡಲಾಗುತ್ತಿದೆ ಎಂದು ಪ್ರಭಾಕರ್ ತಿಳಿಸಿದರು.

ಸರ್ಕಾರಿ ಶಾಲೆಗಳಲಿ ಬಹುತೇಕ ಶೌಚಾಲಯ ಸಮಸ್ಯೆಯಿದ್ದು ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಶೌಚಾಲಯಗಳ ನಿರ್ಮಾಣ ಮಾಡುತ್ತಿದೆ. ಪಟ್ಟಣದ ಕಲ್ಯಾಗೇಟ್‌ ಹಿರಿಯ ಪ್ರಾಥಮಿಕ ಶಾಲೆಗೆ ಸುಸಜ್ಜಿತ 2 ಶೌಚಾಲಯ ಕಟ್ಟಿಸಿಕೊಡಲಾಗಿದೆ. ಜೊತೆಗೆ ವಿವಿಧ ಶಾಲೆಗಳಿಗೆ ಡೆಸ್ಕ್ ವಿತರಣೆ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುತ್ತದೆ ಎಂದರು.

ಈ ವೇಳೆ ರೋಟರಿ ಖಜಾಂಚಿ ಪ್ರಸಾದ್, ಸದಸ್ಯರಾದ ಸುಧೀಂದ್ರ, ಮೂರ್ತಿ, ವೇಣುಗೋಪಾಲ್, ಡಾ.ಮಂಜುನಾಥ್, ಪ್ರಸಾದ್, ಅಶ್ವಥ್, ಲಕ್ಷ್ಮೀನಾರಾಯಣ್, ಮುಖ್ಯಶಿಕ್ಷಕ ರಂಗಸ್ವಾಮಿ, ಶಾಲಾ ಮುಖ್ಯಶಿಕ್ಷಕಿ ಮುಕಾಂಬಿಕ ಹೆಗಡೆ, ವಿಜ್ಞಾನ ಶಿಕ್ಷಕಿ ಪ್ರತಿಭಾ, ಗಣಿತ ಶಿಕ್ಷಕ ಜಯರಾಂ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಫೋಟೊ 24ಮಾಗಡಿ2 :

ಮಾಗಡಿ ತಾಲೂಕಿನ ಮಾಡಬಾಳ್ ಸರ್ಕಾರಿ ಪ್ರೌಢಶಾಲೆಯ ಹೆಣ್ಣು ಮಕ್ಕಳಿಗೆ ರೋಟರಿ ಮಾಗಡಿ ಸೆಂಟ್ರಲ್ ವತಿಯಿಂದ ಉಚಿತ ಸೈಕಲ್ ವಿತರಣೆ ಮಾಡಲಾಯಿತು.