ಉತ್ತಮ ಅಂಕ ಪಡೆದ ಸರ್ಕಾರಿ ಶಾಲಾ ಮಕ್ಕಳಿಗೆ ಬುಕ್ಸ್‌ ವಿತರಣೆ

| Published : Jul 05 2024, 12:50 AM IST

ಉತ್ತಮ ಅಂಕ ಪಡೆದ ಸರ್ಕಾರಿ ಶಾಲಾ ಮಕ್ಕಳಿಗೆ ಬುಕ್ಸ್‌ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬಡ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿತು ಉತ್ತಮ ಅಂಕಗಳನ್ನು ಪಡೆದ ೧೧ ಮಕ್ಕಳಿಗೆ ಅವರು ಮುಂದಿನ ತರಗತಿಗಳಿಗೆ ಬೇಕಾಗುವ ನೋಟ್‌ಬುಕ್‌, ಬ್ಯಾಗ್‌, ಪೆನ್‌ ಇತರೆ ಸಾಮಾನುಗಳನ್ನು ನೀಡಿ ಅವರಿಗೆ ಇನ್ನು ಹೆಚ್ಚಿನ ಅಂಕಗಳನ್ನು ಪಡೆಯಲು ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಪಟ್ಟಣದ ಬಡ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿತು ಉತ್ತಮ ಅಂಕಗಳನ್ನು ಪಡೆದ ೧೧ ಮಕ್ಕಳಿಗೆ ಅವರು ಮುಂದಿನ ತರಗತಿಗಳಿಗೆ ಬೇಕಾಗುವ ನೋಟ್‌ಬುಕ್‌, ಬ್ಯಾಗ್‌, ಪೆನ್‌ ಇತರೆ ಸಾಮಾನುಗಳನ್ನು ನೀಡಿ ಅವರಿಗೆ ಇನ್ನು ಹೆಚ್ಚಿನ ಅಂಕಗಳನ್ನು ಪಡೆಯಲು ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗಿದೆ ಎಂದು ಭಾರತೀಯ ಮಾನವಧಿಕಾರ ಪರಿಷತ್ ಮುಖಂಡ ರಾಜು ಕುಲಕರ್ಣಿ ಹೇಳಿದರು.

ಪಟ್ಟಣದ ನಾಗಾವಿ ಗೊಶಾಲೆಯಲ್ಲಿ ನಾಗಾವಿ ಸೇವಾ ಪ್ರತಿಷ್ಟಾನ, ಭಾರತೀಯ ಮಾನವಧಿಕಾರ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉತ್ತಮ ಅಂಕಗಳಿಸಿದ ಮಕ್ಕಳಿಗೆ ಪುರಸ್ಕರಿಸಿ ಮಾತನಾಡಿದ ಅವರು ಅನೇಕ ಮಕ್ಕಳು ತಮ್ಮ ಕೌಟುಂಬಿಕದಲ್ಲಿ ಇರುವ ಆರ್ಥಿಕ ಪರಿಸ್ಥಿತಿಯಿಂದ ಶಾಲೆಗಳಿಗೆ ಹೊಗದೇ ವಿದ್ಯಾಭ್ಯಾಸದಿಂದ ವಂಚಿತರಾಗಿದ್ದರು ಅಂತಹ ಉತ್ತಮ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತಮ್ಮ ವಿದ್ಯಾಭ್ಯಾಸಕ್ಕೆ ಬೇಕಾಗುವ ನೋಟ್‌ಬುಕ್‌, ಬ್ಯಾಗ್‌ ಸೇರಿದಂತೆ ಸಾಮಗ್ರಿಗಳನ್ನು ನೀಡುವದರ ಮೂಲಕ ಅವರ ಶಿಕ್ಷಣ ವಂಚಿತರಾಗದಂತೆ ಮಾಡಿದ ತೃಪ್ತಿ ಆಗಿದೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುವದು ಎಂದರು.

ಗೊಶಾಲೆ ಅಧ್ಯಕ್ಷರು ಹಾಗು ಪುರಸಭೆ ಸದಸ್ಯ ರಮೇಶ ಬೊಮ್ಮನಳ್ಳಿ ಮಾತನಾಡಿ ರಾಜು ಕುಲ್ಕರ್ಣಿಯವರು ಸ್ವಯಂ ಪ್ರೇರಿತರಾಗಿ ಶಿಕ್ಷಣದಿಂದ ವಂಚಿತರಾಗುತ್ತಿರುವ ೧೧ ಮಕ್ಕಳನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿರುವದು ತುಂಬಾ ಶ್ಲಾಘನೀಯವಾಗಿದೆ ಇಂತಹ ದಾನಿಗಳು ಹೆಚ್ಚಾಗಿ ಬಡ ಮಕ್ಕಳಿಗೆ ಇಂತಹ ಪುರಸ್ಕಾರ ಮಾಡಬೇಕು. ನಮ್ಮ ಗೊಶಾಲೆ ವತಿಯಿಂದಲೂ ಇಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು.

ಚಿತ್ತಾಪುರ ಪಿಎಸ್‌ಐ, ನಾಗಾವಿ ಗೊಶಾಲೆ ಸದಸ್ಯರು, ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ನಯನಾ ನಾಗೇಂದ್ರ ನಿರೂಪಿಸಿದರು. ಸುಷ್ಮೀತಾ ಗುಂಡಪ್ಪ ಸ್ವಾಗತಿಸಿದರು.