ವಿಕಲಚೇತನ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

| Published : Mar 10 2024, 01:48 AM IST

ಸಾರಾಂಶ

ವಿಜಯಪುರ: ನಗರದ ವೈದ್ಯಕೀಯ ಭವನ ಫಂಕ್ಷನ್ ಹಾಲ್‌ನಲ್ಲಿ ಯುಥ್ 4 ಜಾಬ್ಸ್ ಫೌಂಡೇಷನ್, ಗ್ರಾಸ್ ರೂಟ್ಸ್ ಅಕಾಡೆಮಿ ವತಿಯಿಂದ ಒಂದು ತಿಂಗಳು ಉದ್ಯೋಗ ತರಬೇತಿ ಪಡೆದ 120 ವಿಕಲಚೇತನ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ, ಬುಕ್ಸ್ ಮತ್ತು ಬ್ಯಾಗ್ ವಿತರಿಸಲಾಯಿತು.

ವಿಕಲಚೇತನರ ಹಾಗೂ ಹಿರಿಯ ನಾಗಕರಿಕರ ಸಬಲೀಕರಣ ಇಲಾಖೆ ಕಲ್ಯಾಣಧಿಕಾರಿ ರಾಜಶೇಖರ ದಯವಾಡಿ, 43 ವಿಕಲಚೇತನ ಅಭ್ಯರ್ಥಿಗಳಿಗೆ ಉದ್ಯೋಗವನ್ನು ಕೊಡಿಸಲಾಗಿದೆ.12 ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗದ ಬಗ್ಗೆ ತರಬೇತಿ ನೀಡಲಾಗಿದೆ. ಸಾಲ ಸೌಲಭ್ಯ ಒದಗಿಸಿ ಅವರ ಜೀವನ ಮಟ್ಟವನ್ನು ಉತ್ತಮಗೊಳಿಸಲಾಗಿದೆ. ಯುಥ್ 4 ಜಾಬ್ಸ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ಸ್ವರಾಜ್ ಎಬಿಲಿಟಿ ಎಂಬ ಅತಿ ದೊಡ್ಡ ಜಾಬ್ಸ್ ಪೋರ್ಟಲ್ ಲಾಂಚ್ ಮಾಡಿದೆ. ಇದರಲ್ಲಿ ವಿಕಲಚೇತನ ಅಭ್ಯರ್ಥಿಗಳು ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು. ಇದರಿಂದ ಉದ್ಯೋಗ ಪಡೆಯಲು ಸುಲಭವಾಗುತ್ತದೆ ಎಂದರು.

ಎಂಆರ್‌ಡಬ್ಲ್ಯೂ ತಾಲೂಕಾಧಿಕಾರಿ ರವಿ ರಾಠೋಡ, ಶ್ರವಣ್ ಕುಮಾರ್, ಎಚ್.ಆರ್.ಸುಧಾ, ಶರೀಫ್ ನದಾಫ್, ಅಲ್ತಾಫ್ ದೇಸಾಯಿ, ಸೋಬಿಯ ಮರ್ತುರ್, ನಿಮಿಷ ಆಚಾರ್ಯ, ವಿನೋದ್ ಖೆಡ್, ಮಲ್ಲಪ್ಪ ಮುಂತಾದವರು ಇದ್ದರು.