ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಅಂತರಳ್ಳಿ ನಿವಾಸಿ, ನಿವೃತ್ತಿ ಮುಖ್ಯ ಶಿಕ್ಷಕ ಎ.ಎಸ್.ದೇವರಾಜ್ ತಮ್ಮ 38ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ದಳವಾಯಿ ಕೋಡಿಹಳ್ಳಿಯ ವೃದ್ಧರಿಗೆ ಬಟ್ಟೆಗಳನ್ನು ನೀಡಿದರು.ನಿವೃತ್ತಿ ಮುಖ್ಯ ಶಿಕ್ಷಕ ಎ.ಎಸ್.ದೇವರಾಜ್ ಮತ್ತು ಪತ್ನಿ ಸಿದ್ದಮ್ಮರ 38ನೇ ವರ್ಷದ ವಿವಾಹ ಮಹೋತ್ಸವ ಆಚರಣೆ ನಂತರ ವೃದ್ಧರಿಗೆ ಬಟ್ಟೆ ನೀಡಿ ಮಾತನಾಡಿ, ಅದ್ಧೂರಿಯಾಗಿ ಕೇಕ್ ಕತ್ತರಿಸಿಕೊಂಡು ಹಣ ವೆಚ್ಚ ಮಾಡುವುದಕ್ಕಿಂತ ಇಂಥ ನಿರ್ಗತಿಕರಿಗೆ ಅವಶ್ಯಕತೆ ಇರುವಂತ ಬಟ್ಟೆಗಳನ್ನು ನೀಡಿರುವುದು ನಮಗೆ ತೃಪ್ತಿ ತಂದಿದೆ ಎಂದರು.
ನಾನು ಲಯನ್ಸ್ ಕ್ಲಬ್‌ನಲ್ಲಿ ಸದಸ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪ್ರತಿದಿನ ನಮ್ಮ ಸಂಸ್ಥೆಯಿಂದ ಹಸಿವು ನಿವಾರಣೆ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ, ಅದೇ ರೀತಿ ಇಂದು ಸಹ ನಮ್ಮ ವಿವಾಹ ವಾರ್ಷಿಕೋತ್ಸವ ಅಂಗವಾಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 50 ಜನರಿಗೆ ಊಟದ ವ್ಯವಸ್ಥೆ ಹಾಗೂ ಸಿಹಿ ಹಂಚಿ ನನ್ನ ವಿವಾಹ ಮಹೋತ್ಸವ ಆಚರಿಸಿಕೊಂಡಿದ್ದೇನೆ ಎಂದರು.ಸಂಸ್ಥೆಯಲ್ಲಿ ಇರುವ ಸದಸ್ಯರು ಹಾಗೂ ಗ್ರಾಮದ ಯಾರೇ ಸದಸ್ಯರಾಗಲಿ. ಅವರ ಹುಟ್ಟುಹಬ್ಬವಾಗಲಿ ಅಥವಾ ವಿವಾಹ ಮಹೋತ್ಸವವಾಗಲಿ ತಂದೆ ತಾಯಿಯರ ಸವಿ ನೆನಪಿಗಾಗಲಿ ಹಸಿವು ನಿವಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೀವು ಸಹ ಕೈಜೋಡಿಸಬಹುದು ಎಂದರು.
ಈ ವೇಳೆ ಲಯನ್ಸ್ ಕಬ್ಬಿನ ಅಧ್ಯಕ್ಷರಾದ ಎನ್.ಕೆ.ಕುಮಾರ್, ಎಚ್.ಆರ್.ಪದ್ಮನಾಭ, ಡಿ.ಎಲ್. ಮಾದೇಗೌಡ, ಎ.ಟಿ. ಶ್ರೀನಿವಾಸ್, ಬಿ.ಸಿ.ಬಸವರಾಜು, ಮನೋಹರ, ಶಿವರಾಜು, ಡಾ. ಶಂಸುದ್ದೀನ್ ಮತ್ತು ಇತರರು ಇದ್ದರು. ಪದ್ಮ ಪ್ರಶಸ್ತಿ - 2025 ರ ನಾಮ ನಿರ್ದೇಶನಕ್ಕೆ ಅರ್ಜಿ ಆಹ್ವಾನಮಂಡ್ಯ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪದ್ಮ ಪ್ರಶಸ್ತಿ - 2025 ಕ್ಕೆ ಸಂಬಂಧಿಸಿದಂತೆ ನಾಮ ನಿರ್ದೇಶನಗಳು ಹಾಗೂ ಶಿಫಾರಸ್ಸುಗಳು 2024 ರ ಮೇ 5 ರಿಂದ ಪ್ರಾರಂಭವಾಗಿದ್ದು, ಪದ್ಮ ಪ್ರಶಸ್ತಿಗೆ ನಾಮ ನಿರ್ದೇಶನ ಹಾಗೂ ಶಿಫಾರಸ್ಸುಗಳ ಸ್ವೀಕೃತಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ಸೆಪ್ಟೆಂಬರ್ 15 ರಂದು ನಾಮ ನಿರ್ದೇಶನಗಳು ಹಾಗೂ ಶಿಫಾರಸ್ಸುಗಳ ಸ್ವೀಕೃತಿಗೆ ಅಂತಿಮವಾಗಿರುತ್ತ. ಯಾವುದೇ ಬೇಧ - ಭಾವವಿಲ್ಲದೇ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ಜೀವಮಾನ ಸಾಧನೆಗೈದಿರುವ ಅರ್ಹ ವ್ಯಕ್ತಿಗಳು ನೇರವಾಗಿ https://awards.gov.in ನಲ್ಲಿ ನಾಮ ನಿರ್ದೇಶನ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಮಂಡ್ಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))