ಭಾರತೀನಗರ ರೋಟರಿ ಸಂಸ್ಥೆಯಿಂದ ತೆಂಗಿನ ಸಸಿ ವಿತರಣೆ

| Published : Aug 26 2024, 01:30 AM IST

ಸಾರಾಂಶ

ರೈತರು ಪ್ರಸ್ತುತ ದಿನದಲ್ಲಿ ತೆಂಗು ಬೆಳೆ ನಂಬಿ ಲಕ್ಷಾಂತರ ರು. ಹಣ ಗಳಿಸುತ್ತಿದ್ದಾರೆ. ಕೊಬ್ಬರಿ, ಎಳೆನೀರು ಮತ್ತು ತೆಂಗಿನ ಕಾಯಿಗೆ ಇಂದು ಬೇಡಿಕೆ ಇದೆ. ಹಾಗಾಗಿ 2 ಸಾವಿರಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ವಿತರಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ರೋಟರಿ ಸಂಸ್ಥೆಯಿಂದ ತೆಂಗಿನ ಸಸಿ ವಿತರಣೆ ಸೇರಿದಂತೆ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ರೋಟರಿ ಸಹಾಯಕ ಪಾಲಕ ಬಿ.ವಿ.ಮಧುಸೂಧನ್ ತಿಳಿಸಿದರು.

ಸಮೀಪದ ಮೆಣಸಗೆರೆ ಗ್ರಾಮದಲ್ಲಿ ರೋಟರಿ ಭಾರತೀನಗರ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ಲಕ್ಷ ಕಲ್ಪವೃಕ್ಷ ಕಾರ್ಯಕ್ರಮದಲ್ಲಿ ಮಾತನಾಡಿ, ತೆಂಗಿನ ಸಸಿಗಳನ್ನು ಮಕ್ಕಳಂತೆ ಬೆಳೆಸಿದರೆ ಅವುಗಳು ನಮ್ಮನ್ನು ನಂತರದ ದಿನಗಳಲ್ಲಿ ಸಾಕುತ್ತವೆ. ಹಾಗಾಗಿ ಪ್ರತಿಯೊಬ್ಬರೂ ತೆಂಗಿನ ಸಸಿಗಳನ್ನು ಹಾಳು ಮಾಡದೇ ಬೆಳೆಸಬೇಕು ಎಂದು ಸಲಹೆ ನೀಡಿದರು.

ರೋಟರಿ ಸಂಸ್ಥೆ 3192 ಜಿಲ್ಲಾಪಾಲಕ ವಿ.ಶ್ರೀನಿವಾಸ್‌ಮೂರ್ತಿ ಮಾತನಾಡಿ, ರೈತರಿಗೆ ಉಚಿತವಾಗಿ ತೆಂಗಿನ ಸಸಿ ಹಾಗೂ ವೃಕ್ಷ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ಜಿಲ್ಲಾದ್ಯಂತ ಮಾಡುತ್ತಿದ್ದೇವೆ ಎಂದರು.

ರೋಟರಿ ಭಾರತೀನಗರ ಸೆಂಟ್ರಲ್ ಅಧ್ಯಕ್ಷ ಎಸ್.ಕೆ.ಶಶಿಕುಮಾರ್ ಮಾತನಾಡಿ, ರೈತರು ಪ್ರಸ್ತುತ ದಿನದಲ್ಲಿ ತೆಂಗು ಬೆಳೆ ನಂಬಿ ಲಕ್ಷಾಂತರ ರು. ಹಣ ಗಳಿಸುತ್ತಿದ್ದಾರೆ. ಕೊಬ್ಬರಿ, ಎಳೆನೀರು ಮತ್ತು ತೆಂಗಿನ ಕಾಯಿಗೆ ಇಂದು ಬೇಡಿಕೆ ಇದೆ. ಹಾಗಾಗಿ 2 ಸಾವಿರಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ವಿತರಿಸಿದ್ದೇವೆ ಎಂದು ಹೇಳಿದರು.

ತೇಗ, ರಕ್ತಚಂದನ, ಮಹಾಗನಿ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಗಿಡಗಳನ್ನು ಪರಿಸರ ಸಂರಕ್ಷಣೆಯ ಜೊತೆಗೆ ಜೀವ ನಿರ್ವಹಣೆಯಾಗುತ್ತದೆ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ವ್ಯವಸಾಯ ಮಂಡಳಿ ನಿರ್ದೇಶಕ ಅಕ್ಷಯ್‌ ಮಲ್ಲಪ್ಪ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ವಲಯ ಅರಣ್ಯಾಧಿಕಾರಿ ಶೈಲೇಂದ್ರಕುಮಾರ್, ರೋಟರಿ ಸಂಸ್ಥೆ ಪದಾಧಿಕಾರಿಗಳಾದ ಎ.ಸುರೇಶ್, ಬಾಲಾಜಿ ನಾನಾಬಾಲ, ಉಪಾಧ್ಯಕ್ಷ ಎಚ್.ಮರಿಸ್ವಾಮಿ, ಶಿವಮ್ಮ, ಡಾ.ಸೌಮ್ಯ, ಶಿವರತ್ನಮಣಿ, ಮರಿಚನ್ನೇಗೌಡ, ಕುಮಾರ್‌ರಾಜು, ಶಿವರಾಮೇಗೌಡ, ಕೆಂಪೇಗೌಡ, ಶಿವಲಿಂಗಯ್ಯ, ತೈಲಪ್ಪ, ನಾದೋಸಿ ಸೇರಿ ರೋಟರಿ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.