ಊರುಗೋಲು, ಹಣ್ಣು ಹಂಪಲು ವಿತರಣೆ

| Published : Nov 05 2025, 12:45 AM IST

ಸಾರಾಂಶ

ಸೋಮವಾರಪೇಟೆ ಗೋಲ್ಡ್‌ ವತಿಯಿಂದ ಕಾರ್ಯಕ್ರಮವನ್ನು ನಡೆಸಿ ಹಣ್ಣು ಹಂಪಲು ವಿತರಿಸಲಾಯಿತು.

ಕನ್ನಡಪ್ರಭವಾರ್ತೆ, ಸೋಮವಾರಪೇಟೆ

ವಿಶ್ವ ವೃದ್ದರ ದಿನದ ಅಂಗವಾಗಿ ತಾಲೂಕಿನ ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಕಾರ್ಯಕ್ರಮವನ್ನು ನಡೆಸಿ ವೃದ್ಧರಿಗೆ ಊರುಗೋಲು ಮತ್ತು ಹಣ್ಣು ಹಂಪಲನ್ನು ವಿತರಿಸಲಾಯಿತು.ಈ ಸಂದರ್ಭ ಕ್ಲಬ್ ಅಧ್ಯಕ್ಷೆ ತನ್ಮಯೀ ಪ್ರವೀಣ್, ಉಪಾಧ್ಯಕ್ಷೆ ಲತಾ ಮಂಜು, ಕಾರ್ಯದರ್ಶಿ ಸುವಿನಾ ಕೃಪಾಲ್, ಪ್ರಮುಖರಾದ ವನಿತಾ ಜಯರಾಮ್, ಶೋಭಾ ರಾಘು, ನಂದಿತಾ ವಿರೇಂದ್ರ ಹಾಗೂ ಆಸ್ಪತ್ರೆಯ ವೈದ್ಯರಾದ ಸುಪರ್ಣಾ ಕೃಷ್ಣಾನಂದ ಇದ್ದರು.