ಸಾರಾಂಶ
ರಾಮನಗರ: ನಗರದ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ರೋಟರಿ ಇನ್‌ಟ್ರಾಕ್ಟ್ ಕ್ಲಬ್‌ನ ಮಕ್ಕಳು ಶನಿವಾರ ನಂದಗೋಕುಲ ವೃದ್ಧಾಶ್ರಮಕ್ಕೆ ಭೇಟಿ ನೀಡಿ ವಯೋವೃದ್ಧರ ಯೋಗಕ್ಷೇಮ ವಿಚಾರಿಸಿ, ಎರಡು ಡೈನಿಂಗ್ ಟೇಬಲ್‌ಗಳನ್ನು ಹಾಗೂ 2 ಸಾವಿರ ನಗದು ನೀಡಿದರು.

ಮಕ್ಕಳ ಸೇವಾ ಮನೋಭಾವನೆ ಶ್ಲಾಘಿಸಿ ಆಶ್ರಮದ ಮುಖ್ಯಸ್ಥ ಲೋಕೇಶ್, ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಆಗ ಪೋಷಕರಿಗೆ ಒಳ್ಳೆಯ ಮಕ್ಕಳಾಗಿ, ಕಷ್ಟದಲ್ಲಿರುವ ಜನರ ನೆರವಿಗೆ ನಿಲ್ಲುತ್ತಾರೆ. ವಯೋವೃದ್ಧರಿಗೆ ನೆರವು ಕಲ್ಪಿಸಿರುವ ಮಕ್ಕಳ ಕಾರ್ಯ ಇತರರಿಗೂ ಮಾದರಿಯಾಗಿದೆ ಎಂದರು.ಸಂಸ್ಥೆ ಕಾರ್ಯದರ್ಶಿ ಅಲ್ತಾಫ್ ಅಹಮ್ಮದ್ ಮಾತನಾಡಿ, ಮಕ್ಕಳಲ್ಲಿ ವೃದ್ಧರನ್ನು ಗೌರವಿಸುವ ಮನೋಭಾವ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ನಮ್ಮ ಸಂಸ್ಥೆಯ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಕ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಡಾ.ಶಾಜಿಯಾ ಮಾತನಾಡಿ, ವೃದ್ಧರು ದೇವರ ಸಮಾನ, ವೃದ್ಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಅವರ ಆರೋಗ್ಯ ವಿಚಾರಿಸಿ ಮನೋಸ್ಥೈರ್ಯ ನೀಡಿದರು.ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಲತಾ ಆನಂದ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
11ಕೆಆರ್ ಎಂಎನ್ 1.ಜೆಪಿಜಿರಾಮನಗರದ ಹೋಲಿ ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ರೋಟರಿ ಇನ್ ಟ್ರಾಕ್ಟ್ ಕ್ಲಬ್ ನ ಮಕ್ಕಳು ನಂದಗೋಕುಲ ವೃದ್ಧಾಶ್ರಮಕ್ಕೆ ಡೈನಿಂಗ್ ಟೇಬಲ್ ಗಳನ್ನು ನೀಡಿದರು.