ಬಸವೇಶ್ವರ ನವಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸಿ ಮಕ್ಕಳಿಗೆ ಕೇಕ್ ಹಾಗೂ ಬಾಳೆ ಹಣ್ಣು ವಿತರಿಸಿ

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲಾ ಪಂಚಾಯ್ತಿ ಹಾಗೂ ಎಂಡಿಎ ಮಾಜಿ ಅಧ್ಯಕ್ಷರು ಆದ ಕೆ. ಮರೀಗೌಡ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ವಿವಿಧ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಆಚರಿಸಿದರು.

ಕೆ. ಮರೀಗೌಡ ಅವರು ವಿವೇಕಾನಂದನಗರ ವೃತ್ತದ ಬಳಿ ಇರುವ ಶ್ರೀ ಶನಿದೇವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ತುಳಿದಾಸಪ್ಪ ಹೆರಿಗೆ ಆಸ್ಪತ್ರೆಯಲ್ಲಿ ಕೆರೆಹುಂಡಿ ಮಹೇಶ್ ಅವರಿಂದ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಡಾ. ಅನುರಾಧ ಇದ್ದರು.

ನಂತರ ಶ್ರೀರಾಂಪುರದಲ್ಲಿರುವ ಶ್ರೀ ಬಸವೇಶ್ವರ ನವಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸಿ ಮಕ್ಕಳಿಗೆ ಕೇಕ್ ಹಾಗೂ ಬಾಳೆ ಹಣ್ಣು ವಿತರಿಸಿ ವಯಕ್ತಿಕವಾಗಿ ಧನ ಸಹಾಯ ಮಾಡಿದರು. ಇದೇ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಮಾಕಿ ಮರೀಗೌಡರು ಕೆ. ಮರೀಗೌಡರನ್ನು ಅಭಿನಂದಿಸಿದರು.

ಬಂಬೂಬಜಾರ್ ನಲ್ಲಿರುವ ಅಂಧ ಮಕ್ಕಳ ಶಾಲೆಯಲ್ಲಿ ಕಲ್ಲಂಗಡಿ ಹಣ್ಣು ಕತ್ತರಿಸುವ ಮೂಲಕ ಮಕ್ಕಳಿಗೆ ಹೋಳಿಗೆ ಊಟ ಬಡಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ರಾಮಕೃಷ್ಣನಗರ ಜಿ. ಬ್ಲಾಕ್ ನಲ್ಲಿ ಕಾಂಗ್ರೆಸ್ ಮುಖಂಡ ಬಿ. ರವಿ ನೇತೃತ್ವದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನು ಈ ವರ್ಷ ಹುಟ್ಟುಹಬ್ಬ ಆಚರಿಸುವುದು ಬೇಡವೆಂದು ನಿರ್ಧರಿಸಿದ್ದೆ, ಆದರೆ ಅಭಿಮಾನಿಗಳು, ಕಾರ್ಯಕರ್ತರ ಒತ್ತಾಯದಿಂದ ಸ್ನೇಹಿತರೆಲ್ಲಾ ಸೇರಿಕೊಂಡು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ನನಗೆ ಅಭಿನಂದಿಸಿ ಆಶೀರ್ವದನಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹಾದೇವ, ಮಾಜಿ ಸದಸ್ಯ ಜವರಪ್ಪ, ತಾಪಂ ಮಾಜಿ ಅಧ್ಯಕ್ಷ ಸಿ.ಎಂ. ಸಿದ್ದರಾಮೇಗೌಡ, ಮಾರ್ಬಳ್ಳಿ ಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಬಿ.ಎಂ. ನಟರಾಜ್, ಕೇರ್ಗಳ್ಳಿ ಸಹಕಾರ ಸಂಘದ ಅಧ್ಯಕ್ಷ ಮಹಾದೇವ, ಹಿನಕಲ್ ಹೊನ್ನಪ್ಪ, ನಾಡನಹಳ್ಳಿ ರವಿ, ಮಣಿಯಯ್ಯ, ಹಿನಕಲ್ಉದಯ್, ಧನಗಳ್ಳಿ ಬಸವರಾಜು, ಅರಸನಕೆರೆ ಸ್ವಾಮಿ, ಕೆರೆಹುಂಡಿ ಮಹೇಶ್, ಸೋಮಶೇಖರ್, ಡಿ. ಸಾಲುಂಡಿ ಚಂದ್ರ, ಶಿಂಷಾ ದಿನೇಶ್, ವೆಂಕಟಯ್ಯ, ರಾಜು, ಆರೀಫ್, ಓಲೆಸಿದ್ದು, ಬಿ. ಗುರುಸ್ವಾಮಿ, ಹೊಸಹುಂಡಿ ರಘು, ಬೋರೇಗೌಡ ಹಾಗೂ ನೂರಾರು ಅಭಿಮಾನಿಗಳು ಹಾಜರಿದ್ದರು.