ಸಾರಾಂಶ
ಹಿರೇಕೆರೂರು:ಮಾಜಿ ಸಚಿವರಾದ ಬಿ.ಸಿ. ಪಾಟೀಲರವರ ಜನ್ಮದಿನಾಚರಣೆ ನಿಮಿತ್ತ ಶುಕ್ರವಾರ ತಾಲೂಕಿನ ಆಲದಗೇರಿ ಗ್ರಾಮದ ಪ್ರಾಥಮಿಕ ಶಾಲೆ ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಮಕ್ಕಳಿಗೆ ಹಣ್ಣು,ಬ್ರೆಡ್ ವಿತರಿಸಿದರು. ಗ್ರಾಮದ ಬಿ.ಸಿ. ಪಾಟೀಲ ಅಭಿಮಾನಿ ಡಾ, ಮಂಜುನಾಥ ಚಲವಾದಿ ಮಾತನಾಡಿ, ಬಿ.ಸಿ. ಪಾಟೀಲ್ ಅವರು ಶಾಸಕರಾಗಿ, ಮಂತ್ರಿಗಳಾಗಿ ಹಲವು ಸಾರ್ವಜನಿಕ ಉತ್ತಮ ಕಾರ್ಯಗಳನ್ನು ಮಾಡಿದ್ದು ರಸ್ತೆ ನಿರ್ಮಾಣ, ನೀರಾವರಿ ಯೋಜನೆ, ಶಾಲೆ-ವಸತಿ ನಿಲಯಗಳು, ಆಸ್ಪತ್ರೆ, ಸಮುದಾಯ ಭವನ, ಮಿನಿ ವಿಧಾನಸೌಧ, ಅಗ್ನಿಶಾಮಕ, ಪೊಲೀಸ್ ಠಾಣೆ ಕಟ್ಟಡಗಳ ನಿರ್ಮಾಣ, ವಿದ್ಯುತ್ ಘಟಕಗಳ ಸ್ಥಾಪನೆ ಹಾಗೂ ಸಾವಿರಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಹಿರೇಕೆರೂರು ತಾಲೂಕಿನ ಧೀಮಂತ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು. ಗ್ರಾಪಂ ಸದಸ್ಯರು ಹಾಗೂ ಬಿಜೆಪಿಯ ಮುಖಂಡರಾದ ಕುಬೇರಪ್ಪ ಗೌಡರ ಮಾತನಾಡಿ, ಹಿರೇಕೆರೂರಿನ ಭಗೀರಥರಾದ ಬಿ.ಸಿ. ಪಾಟೀಲರವರು ಸದಾ ಪ್ರಜೆಗಳ ಚಿಂತಕರಾಗಿ ಅಧಿಕಾರ ಇರಲಿ, ಇಲ್ಲದಿರಲಿ. ಜನಸೇವೆಯಲ್ಲಿ ತೊಡಗಿರುತ್ತಾರೆ, ಅವರು ಮಾತು ನೀಡಿದಂತೆ ಹಿರೇಕೆರೂರು ತಾಲೂಕನ್ನು ಮದುವಣಗಿತ್ತಿಯಂತೆ ಶೃಂಗರಿಸಿ ಜನರ ಹೃದಯದಲ್ಲಿ ನೆಲೆಸಿದ್ದಾರೆ ಎಂದರು. ಈ ವೇಳೆ ಮುಖಂಡರಾದ ಯಮನಪ್ಪ ತಳವಾರ, ಬಸಪ್ಪ ಮ ಮಾಸಣಗಿ, ವಿರುಪಾಕ್ಷಿ ಬೇಲೂರು, ನಾಗರಾಜ ಮಾಸಣಗಿ, ಲಕ್ಷ್ಮಣ ಹುಲ್ಲತ್ತಿ, ತನ್ವೀರ್ ಸಾಬ್ ರಟ್ಟಿಹಳ್ಳಿ, ಕಾಂತೇಶ್ ಗೋಣೆರ, ಹೇಗ್ಗಪ್ಪ ಜೋಗೇರ ಮುಂತಾದವರು ಉಪಸ್ಥಿತರಿದ್ದರು,
;Resize=(128,128))
;Resize=(128,128))
;Resize=(128,128))