ಮಡಿಕೇರಿ ತಾಲೂಕಿನ ಒಟ್ಟು 35 ವಾತ್ಸಲ್ಯ ಕುಟುಂಬಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಯೋಜನೆಯ ಚೆಂಬು ಗ್ರಾಮದ ವಾತ್ಸಲ್ಯ ಫಲಾನುಭವಿಗಳಾದ ದೇವಕಿ ಹಾಗೂ ಲೀಲಾ ಅವರಿಗೆ ಹೇಮಾವತಿ ವಿ. ಹೆಗ್ಗಡೆ ಅವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ಹಣ್ಣು ಹಂಪಲು ವಿತರಣೆ ಮಾಡಿ ಯೋಗ ಕ್ಷೇಮ ವಿಚಾರಿಸಿದರು.ಮಡಿಕೇರಿ ತಾಲೂಕಿನ ಒಟ್ಟು 35 ವಾತ್ಸಲ್ಯ ಕುಟುಂಬಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಈ ಸಂದರ್ಭ ತಾಲೂಕಿನ
ಯೋಜನಾಧಿಕಾರಿ ಪುರುಷೋತ್ತಮ ಜ್ಞಾನವಿಕಾಸ ಸಮನ್ವಯಾಧಿಕಾರಿ ಹಾಗೂ ಸೇವಾಪ್ರತಿನಿಧಿ ಉಪಸ್ಥಿತರಿದ್ದರು.