ಎಪಿಎಂಸಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

| Published : Nov 06 2025, 01:15 AM IST

ಸಾರಾಂಶ

ಹಮಾಲಿ ಕಾರ್ಮಿಕರು ಸಮಾಜದ ಅವಿಭಾಜ್ಯ ಅಂಗ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಕಾರ್ಮಿಕರ ಮುಖದಲ್ಲಿ ಸಂತಸ ಮೂಡುವಂತೆ ಟ್ರಸ್ಟ್‌ ಸಹಾಯ ಹಸ್ತ ಚಾಚಿದೆ. ಕಾರ್ಮಿಕರ ಪರಿಶ್ರಮವೇ ಸಮಾಜದ ಬೆಳವಣಿಗೆಯ ಆಧಾರ ಕಾರ್ಮಿಕರು. ಅವರ ಮಕ್ಕಳ ಶಿಕ್ಷಣ,ಸಾಮಾಜಿಕ ಭದ್ರತೆಗಾಗಿ ಕೂಡಾ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಹುಟ್ಟು ಹಬ್ಬದ ಅಂಗವಾಗಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬುಧವಾರ ಸಂಜೆ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕಾರ್ಯನಿರ್ವಹಿಸುವ ಹಮಾಲಿ ಕಾರ್ಮಿಕರಿಗೆ ದಿನಸಿ ಸಾಮಾನುಗಳ ಕಿಟ್ ಹಾಗೂ ಚಳಿಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬ್ಲಾಂಕೆಟ್ ವಿತರಿಸಲಾಯಿತು.

ನಂತರ ನಗರದ ನಿಮ್ಮಾಕಲಕುಂಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಉಚಿತ ಅಡುಗೆ ಕೊಠಡಿ ನಿರ್ಮಿಸಿ ಶಾಲೆಗೆ ಸಮರ್ಪಿಸಿದರು. ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ನೀಡುತ್ತಿರುವ ನಿರಂತರ ಸೇವೆ ಜನಪ್ರಿಯತೆ ಗಳಿಸಿದ್ದು ಇಂದಿನ ಕಾರ್ಯಕ್ರಮದಲ್ಲಿ ಕಿಟ್‌ಗಳನ್ನು ಸ್ವೀಕರಿಸಿದ ಕಾರ್ಮಿಕರು ಸಂದೀಪ್ ರೆಡ್ಡಿ ಅವರಿಗೆ ಆಶೀರ್ವದಿಸಿದರು.

ಸಮಾಜದ ಅವಿಭಾಜ್ಯ ಅಂಗಈ ಸಂದರ್ಭದಲ್ಲಿ ಮಾತನಾಡಿದ ಸಂದೀಪ್ ಬಿ.ರೆಡ್ಡಿ, ಹಮಾಲಿ ಕಾರ್ಮಿಕರು ಸಮಾಜದ ಅವಿಭಾಜ್ಯ ಅಂಗ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಕಾರ್ಮಿಕರ ಮುಖದಲ್ಲಿ ಸಂತಸ ಮೂಡುವಂತೆ ನಮ್ಮಿಂದಾದ ಸಹಾಯ ಹಸ್ತ ಚಾಚಿದ್ದೇವೆ. ಕಾರ್ಮಿಕರ ಪರಿಶ್ರಮವೇ ಸಮಾಜದ ಬೆಳವಣಿಗೆಯ ಆಧಾರ ಕಾರ್ಮಿಕರು. ಅವರ ಮಕ್ಕಳ ಶಿಕ್ಷಣ,ಸಾಮಾಜಿಕ ಭದ್ರತೆಗಾಗಿ ಕೂಡಾ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ ಎಂದರು.ಈ ಸಂದರ್ಭದಲ್ಲಿ ಹರ್ಷ,ಸುಹಾಸ್,ಶಶಿ ಕುಮಾರ್,ರಘು,ಸಂದೀಪ್ ಸ್ಯಾಂಡಿ,ನಾಗೇಶ್,ಯುನುಸ್ ಮತ್ತಿತರರು ಇದ್ದರು.