ಗೌಡಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಜರ್ಕಿನ್‌ ವಿತರಣೆ

| Published : Aug 10 2024, 01:30 AM IST

ಸಾರಾಂಶ

ಗೌಡಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಉದ್ಯಮಿ ಯುವರಾಜ್ ಶೇಖರ್ ರವರು ಮಕ್ಕಳಿಗೆ ನೀಡಿದ ಜರ್ಕಿನ್ ಕೊಡುಗೆಯಾಗಿ ನೀಡಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಸರ್ಕಾರಿ ಶಾಲೆಯ ಮಕ್ಕಳಲ್ಲಿ ಗಟ್ಟಿ ಮನಸ್ಥಿತಿ ಇರುತ್ತದೆ. ಅವರು ಯಾವ ಸಮಸ್ಯೆ ಬಂದರೂ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸೋಮವಾರಪೇಟೆ ರೈತ ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ತಿಳಿಸಿದರು.

ಅವರು ಗುರುವಾರ ಗೌಡಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಉದ್ಯಮಿ ಯುವರಾಜ್ ಶೇಖರ್ ರವರು ಮಕ್ಕಳಿಗೆ ನೀಡಿದ ಜರ್ಕಿನ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಗಳು ಉಳಿವಿಗಾಗಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಇಲ್ಲಿನ ಮಕ್ಕಳು ಅನೇಕ ಕಲೆ ಚಟುವಟಿಕೆಗಳಿಂದ ಕೂಡಿರುತ್ತಾರೆ. ದೇಶದಲ್ಲಿ ಪ್ರತಿಯೊಬ್ಬರೂ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಮಕ್ಕಳು ಉತ್ತಮ ಕೌಶಲ್ಯ ಭರಿತ ಶಿಕ್ಷಣವನ್ನು ಕಲಿತು ದೇಶಕ್ಕೆ ಉತ್ತಮ ಪ್ರಜೆಗಳಾಗಿ ಎಂದು ಹಾರೈಸಿದರು. ಶಾಲೆಯ ಹಳೆ ವಿದ್ಯಾರ್ಥಿ ಮತ್ತು ಗೌಡಳ್ಳಿ ಜೆಡಿಎಸ್ ಮುಖಂಡ ಕೂಗೂರು ಸಂದೀಪ್ ಮಾತನಾಡಿ ನಮಗೆ ವಿದ್ಯೆ ನೀಡಿದ ಶಾಲೆಯನ್ನು ಎಂದಿಗೂ ಮರೆಯಬಾರದು. ಆ ಶಾಲೆಗಳನ್ನು ಉಳಿಸಿ ಮತ್ತಷ್ಟು ಅಭಿವೃದ್ಧಿಪಡಿಸುವ ಜವಾಬ್ದಾರಿ ಹಳೆ ವಿದ್ಯಾರ್ಥಿಗಳಲ್ಲಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿ ಕಿಬೆಟ್ಟ ಮಂಜು ಭಟ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂತೋಷ್, ಸಿಆರ್‌ಪಿ ದೇವರಾಜೇಗೌಡ, ಮುಖ್ಯ ಶಿಕ್ಷಕಿ ಚಂದ್ರಕಲಾ ಭಾಗವಹಿಸಿದ್ದರು.