ಸಾರಾಂಶ
ವೀಡಿಯೋದಲ್ಲಿ ಬೈಲೂರಿನ ಮನೆ ಮನೆಯಲ್ಲಿ ರಂಗೋಲಿ ಹಾಕಿ, ದೀಪ ಬೆಳಗಿ ಮಂತ್ರಾಕ್ಷತೆಯನ್ನು ವಿತರಿಸುತ್ತಿರುವುದು ಕಾಣಬಹುದು. ಸುಮಾರು ಐವತ್ತಕ್ಕೂ ಹೆಚ್ಚು ರಂಗೋಲಿಗಳನ್ನು ಬಿಡಿಸಿದ್ದು, ರಸ್ತೆಗಳಲ್ಲಿ ಭಜನೆ ಮಾಡುತ್ತಾ ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಸಾಗುವ ದೃಶ್ಯ ವೀಡಿಯೋದಲ್ಲಿದೆ
ಕನ್ನಡಪ್ರಭ ವಾರ್ತೆ ಕಾರ್ಕಳತಾಲೂಕಿನ ಎಲ್ಲಡೆ ರಾಮಮಂದಿರದ ಮಂತ್ರಾಕ್ಷತೆ ವಿತರಣೆ ನಡೆಯುತ್ತಿದೆ. ಆದರೆ ಬೈಲೂರಿನಲ್ಲಿ ಮಾತ್ರ ವಿಶೇಷ, ವಿಭಿನ್ನವಾಗಿ ಮಂತ್ರಾಕ್ಷತೆ ವಿತರಣೆ ನಡೆಯುತ್ತಿದ್ದು, ಈ ವಿಡಿಯೋ ದೇಶದ ಗಮನ ಸೆಳೆದಿದೆ.
ಲವಿನ್ ಕೋಟ್ಯಾನ್ ಎಂಬವರು ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.ವೀಡಿಯೋದಲ್ಲಿ ಬೈಲೂರಿನ ಮನೆ ಮನೆಯಲ್ಲಿ ರಂಗೋಲಿ ಹಾಕಿ, ದೀಪ ಬೆಳಗಿ ಮಂತ್ರಾಕ್ಷತೆಯನ್ನು ವಿತರಿಸುತ್ತಿರುವುದು ಕಾಣಬಹುದು. ಸುಮಾರು ಐವತ್ತಕ್ಕೂ ಹೆಚ್ಚು ರಂಗೋಲಿಗಳನ್ನು ಬಿಡಿಸಿದ್ದು, ರಸ್ತೆಗಳಲ್ಲಿ ಭಜನೆ ಮಾಡುತ್ತಾ ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಸಾಗುವ ದೃಶ್ಯ ವೀಡಿಯೋದಲ್ಲಿದೆ.ವಿನೂತನವಾಗಿ ಮಂತ್ರಾಕ್ಷತೆ ವಿತರಣೆ ಮಾಡಬೇಕೆಂದು ಯೊಜನೆ ರೂಪಿಸಿದ್ದೆವು. ಈ ವೀಡಿಯೋ ಈ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವುದು ಖುಷಿ ತಂದಿದೆ. ಶತಮಾನಗಳ ಕನಸು ನನಸಾಗುತ್ತಿರುವುದು ಹೆಮ್ಮೆಯ ವಿಚಾರ.। ಮಹೇಶ್ ಶೆಣೈ ಬೈಲೂರು, ಕಾರ್ಯಕ್ರಮ ರುವಾರಿ