ಮೂರ್ನಾಡ್ ಗ್ರಾ.ಪಂ.ನಿಂದ ಅಂಗನವಾಡಿ ಕೇಂದ್ರಗಳಿಗೆ ಸಾಮಗ್ರಿಗಳ ವಿತರಣೆ

| Published : Jul 09 2025, 12:17 AM IST / Updated: Jul 09 2025, 12:18 AM IST

ಮೂರ್ನಾಡ್ ಗ್ರಾ.ಪಂ.ನಿಂದ ಅಂಗನವಾಡಿ ಕೇಂದ್ರಗಳಿಗೆ ಸಾಮಗ್ರಿಗಳ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ 12 ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮೂಲಭೂತ ಸೌಲಭ್ಯಗಳಾದ ಕೌದಿ, ಕಂಬಳಿ, ಬಕೆಟ್, ಹ್ಯಾಂಡ್ ವಾಶ್, ಬ್ಲಿಚಿಂಗ್ ಪೌಡರ್, ಚಾಪೆ, ಮಗ್, ಪೀನಾಯಿಲ್, ಪೊರಕೆ ಪರಿಕರಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಕಾಂತೂರು ಮೂರ್ನಾಡ್ ಗ್ರಾಮ ಪಂಚಾಯಿತಿ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಲಭ್ಯಗಳನ್ನು ವಿತರಿಸಲಾಯಿತು.ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ 12 ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮೂಲಭೂತ ಸೌಲಭ್ಯಗಳಾದ ಕೌದಿ, ಕಂಬಳಿ, ಬಕೆಟ್, ಹ್ಯಾಂಡ್ ವಾಶ್, ಬ್ಲಿಚಿಂಗ್ ಪೌಡರ್, ಚಾಪೆ, ಮಗ್, ಪೀನಾಯಿಲ್, ಪೊರಕೆ ಪರಿಕರಗಳನ್ನು ವಿತರಿಸಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಅಧ್ಯಕ್ಷತೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರೇಖಾ, ಸದಸ್ಯರಾದ ವಿಜಯಲಕ್ಷ್ಮೀ, ಈರ ಸುಬ್ಬಯ್ಯ, ಅಪ್ಪಚಂಡ ಮೀನಾಕ್ಷಿ ದೇವಯ್ಯ, ಪುಷ್ಪಲತಾ, ಪುಷ್ಪ ಸೋಮಣ್ಣ, ದಿವ್ಯ ನಿಂಗಪ್ಪ, ಕೃಷ್ಣಪ್ಪ, ಯಶ್ವಿನ್ ಪೊನ್ನಪ್ಪ, ರಾಜೇಶ್ ರೀತ, ಲತಾ, ಶೃತಿ, ಸುಂದರಿ, ಸೌಮ್ಯ, ಸತೀಶ್, ಮೂಡೇರ ಅಶೋಕ, ಅವರೇಮಾದಂಡ ಅನಿಲ್, ಸುಜಾತ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಮೌಳಿ, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಅಂಗನವಾಡಿ ಕಾರ್ಯಕರ್ತೆಯರಾದ ಜಯಂತಿ ಬಿ.ಬಿ., ಚೈತ್ರ, ಪ್ರಮೀಳಾ, ಗೌರಿ, ಕುಸುಮ, ಭವ್ಯ, ಗೀತಾ, ಉಮಾವತಿ, ಸಮೀರಾ, ಜಯಶ್ರೀ, ಗಿರಿಜಾಬಾಯಿ, ಭವಾನಿ ಉಪಸ್ಥಿತರಿದ್ದರು.