ಶ್ರೀಶೈಲ ಪಾದಯಾತ್ರಿಗಳಿಗೆ ಔಷಧಿ ವಿತರಣೆ

| Published : Mar 25 2024, 12:47 AM IST

ಸಾರಾಂಶ

ಮಹಾಲಿಂಗಪುರ: ಕಂಬಿ ಹೊತ್ತು ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಪಾದಯಾತ್ರೆ ಹೋಗುವ ಭಕ್ತರಿಗೆ ಕೈಕಾಲು ನೋವು, ಮೈಕೈ ನೋವು ನಿವಾರಕ ಔಷಧಿ ವಿತರಿಸುವ ಮೂಲಕ ನಗರದ ಔಷಧಿ ವ್ಯಾಪಾರಿಗಳು ತಮ್ಮ ಭಕ್ತಿ ಸಮರ್ಪಣೆ ಮಾಡಿದರು.

ಮಹಾಲಿಂಗಪುರ: ಕಂಬಿ ಹೊತ್ತು ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಪಾದಯಾತ್ರೆ ಹೋಗುವ ಭಕ್ತರಿಗೆ ಕೈಕಾಲು ನೋವು, ಮೈಕೈ ನೋವು ನಿವಾರಕ ಔಷಧಿ ವಿತರಿಸುವ ಮೂಲಕ ನಗರದ ಔಷಧಿ ವ್ಯಾಪಾರಿಗಳು ತಮ್ಮ ಭಕ್ತಿ ಸಮರ್ಪಣೆ ಮಾಡಿದರು.

ಈ ವೇಳೆ ಡಾ. ಎ.ಆರ್‌ ಬೆಳಗಲಿ ಔಷಧ ವಿತರಣೆಗೆ ಚಾಲನೆ ಕೊಟ್ಟರು. ವೈದ್ಯರಾದ ಮಾರುತಿ ಮೇದಾರ, ಉಮೇಶ ಪತ್ತಾರ, ಆದರ್ಶ ಕೌಜಲಗಿ, ರೇವನೇಶ ಮಾರಾಪುರ, ಔಷಧ ವ್ಯಾಪಾರಸ್ಥ ಮಹಾಂತೇಶ ತೀರಕನ್ನವರ, ಶ್ರೀಶೈಲ್ ಹಿಪ್ಪರಗಿ, ಅನಿಲ್ ಉಳ್ಳಾಗಡ್ಡಿ, ರಾಜು ಬಡಿಗೇರ, ಬಸವರಾಜ್ ಶಿರೋಳ, ರಾಜಕುಮಾರ ಬಿದರಿ, ಪ್ರಭು ಬ್ಯಾಳಿ, ಸುದೀಪ್ ಹಿಪ್ಪರಗಿ, ಬಸವರಾಜ ಸಂಗಾನಟ್ಟಿ, ರಾಜು ನಂಡೆಪ್ಪನವರ, ಸಿದ್ದು ಕೊಣ್ಣೂರ, ಬಸವರಾಜ ಕೊಣ್ಣೂರಮಠ. ವಿಜಯಪುರದ ಶ್ವೇತಾ ಫಾರ್ಮ, ಜಮಖಂಡಿಯ ಪದ್ಮಾವತಿ ಫಾರ್ಮ, ಬನಹಟ್ಟಿಯ ರಾಠಿ ಫಾರ್ಮ ಇದ್ದರು.