ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ ವಿತರಣೆ

| Published : Jun 14 2024, 01:04 AM IST

ಸಾರಾಂಶ

ಇಂದಿನ ದಿನದಲ್ಲಿ ಹುಟ್ಟು ಹಬ್ಬದ ಹೆಸರಿನಲ್ಲಿ ಸಾವಿರಾರು ರುಪಾಯಿ ವ್ಯರ್ಥವಾಗಿ ಖರ್ಚು ಮಾಡುತ್ತಾರೆ ಅದರ ಬದಲು ಅದೇ ಹಣವನ್ನು ಸಾರ್ವಜನಿಕ ಕೆಲಸಗಳಿಗೆ ಬಳಸುವುದು ಉತ್ತಮ ಎಂದು ಸಮಾಜ ಸೇವಕಿ ರಾಣಿ ಬುಕ್ಕೆಗಾರ ಹೇಳಿದರು.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಇಂದಿನ ದಿನದಲ್ಲಿ ಹುಟ್ಟು ಹಬ್ಬದ ಹೆಸರಿನಲ್ಲಿ ಸಾವಿರಾರು ರುಪಾಯಿ ವ್ಯರ್ಥವಾಗಿ ಖರ್ಚು ಮಾಡುತ್ತಾರೆ ಅದರ ಬದಲು ಅದೇ ಹಣವನ್ನು ಸಾರ್ವಜನಿಕ ಕೆಲಸಗಳಿಗೆ ಬಳಸುವುದು ಉತ್ತಮ ಎಂದು ಸಮಾಜ ಸೇವಕಿ ರಾಣಿ ಬುಕ್ಕೆಗಾರ ಹೇಳಿದರು.

ಅವರು ಅಫಜಲ್ಪುರದ ಪಟ್ಟಣದಲ್ಲಿ ಭರವಸೆ ಬೆಳಕು ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥೆ ಸೌಮ್ಯ ಪಟ್ನೆ ಅವರ ಹುಟ್ಟುಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪೆನ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ ನಾವು ದುಡಿದು ಬಂದಿದ್ದರಲ್ಲೇ ಸ್ವಲ್ಪ ಹಣದಲ್ಲಿ ಪುಸ್ತಕ, ಪೆನ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಶಾಲಾಮಕ್ಕಳಿಗೆ ನೀಡುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದರ ಜೊತೆಗೆ ಮಕ್ಕಳು ಸಹ ತಮ್ಮ ಮುಂದಿನ ದಿನದಲ್ಲಿ ಇಂತಹ ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸಬಹುದಾಗಿದೆ ಎಂದು ಹೇಳಿದರು.

ಹುಟ್ಟು ಹಬ್ಬ ಆಚರಿಸಿಕೊಂಡ ಭರವಸೆ ಬೆಳಕು ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥೆ ಸೌಮ್ಯ ಪಟ್ನೆ ಮಾತನಾಡಿ ನನ್ನ ಸಮಾಜ ಸೇವೆ ಗುರುತಿಸಿ ನನ್ನ ಸ್ನೇಹಿತರು ಸಮಾಜ ಸೇವೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲು ತಮ್ಮೆಲ್ಲರ ಸಹಾಯ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ನಾಗೇಶ ವೈಜನಾಥ ಮೇತ್ರೆ ಮಲ್ಲಿಕಾರ್ಜುನ ಬಟಗೇರಿ, ಮಮತಾ,ಅಜೀತ, ಗಂಗಾಧರ, ಸೊಂದುಸಾಬ ಬಾಗವಾನ ಸೇರಿದಂತೆ ವಿದ್ಯಾರ್ಥಿಗಳಿದ್ದರು.