ಧನುರ್ಮಾಸದಲ್ಲಿ ವಿಶೇಷವಾಗಿ ಚಳಿ ಇರುತ್ತದೆ. ಚಳಿಯ ತೀವ್ರತೆ ಎಷ್ಟಿರುತ್ತದೆ ಎಂದರೆ ಚಳಿಯನ್ನು ತಾಳಲಾರದೆ ರಾತ್ರಿ ವೇಳೆ ಮನುಷ್ಯ ತನ್ನ ದೇಹವನ್ನು ಬಿಲ್ಲಿನಂತೆ ಬಾಗಿಸಿ ಮಲಗುತ್ತಾನೆ. ಮುದುರಿಕೊಳ್ಳುತ್ತಾನೆ ಆದ್ದರಿಂದಲೇ ಈ ಮಾಸಕ್ಕೆ ಧನುರ್ಮಾಸ ಎಂದು ಕರೆಯುತ್ತಾರೆಂಬ ಪ್ರತೀತಿ ಇದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಧನುರ್ಮಾಸ ಪ್ರಾಕೃತಿಕ ಬದಲಾವಣೆಯ ವೈಶಿಷ್ಟ್ಯವಾಗಿದ್ದು ಚಳಿಯ ತೀವ್ರತೆ ಹೆಚ್ಚಿರುತ್ತದೆ ಎಂದು ಪಿಎಸ್ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಡೀನ್ ಡಾ.ಶಿವಕುಮಾರ್ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದ ಅರಳಿಕಟ್ಟೆ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಾಲಯ ವೃತ್ತದಲ್ಲಿ ಡಿಸಿ ಕಚೇರಿ ವಾಕಿಂಗ್ ವಾಯು ವಿಹಾರಿಗಳ ಪ್ರಾಧ್ಯಾಪಕರ ತಂಡ ಆಯೋಜಿಸಿದ್ದ ಧನುರ್ಮಾಸ ಪ್ರಯುಕ್ತ ವಿಶೇಷ ಪೂಜೆ ಮತ್ತು ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಧನುರ್ಮಾಸದಲ್ಲಿ ವಿಶೇಷವಾಗಿ ಚಳಿ ಇರುತ್ತದೆ. ಚಳಿಯ ತೀವ್ರತೆ ಎಷ್ಟಿರುತ್ತದೆ ಎಂದರೆ ಚಳಿಯನ್ನು ತಾಳಲಾರದೆ ರಾತ್ರಿ ವೇಳೆ ಮನುಷ್ಯ ತನ್ನ ದೇಹವನ್ನು ಬಿಲ್ಲಿನಂತೆ ಬಾಗಿಸಿ ಮಲಗುತ್ತಾನೆ. ಮುದುರಿಕೊಳ್ಳುತ್ತಾನೆ ಆದ್ದರಿಂದಲೇ ಈ ಮಾಸಕ್ಕೆ ಧನುರ್ಮಾಸ ಎಂದು ಕರೆಯುತ್ತಾರೆಂಬ ಪ್ರತೀತಿ ಇದೆ ಎಂದರು.ಶಾಸ್ತ್ರಗಳ ಪ್ರಕಾರ ಮಾನವರಿಗೆ ಒಂದು ವರ್ಷ- ದೇವತೆಗಳಿಗೆ ಒಂದು ದಿನ, ಧನುರ್ಮಾಸವು ದೇವತೆಗಳ ಪ್ರಭಾತ ಕಾಲ, ಈ ಕಾಲದಲ್ಲಿ ದೇವತೆಗಳು ಎಚ್ಚರಗೊಂಡು ಭಕ್ತರ ಪ್ರಾರ್ಥನೆಗೆ ಶೀಘ್ರ ಪ್ರತಿಕ್ರಿಯಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಕಾರ್ಯಕ್ರಮದಲ್ಲಿ ವಾಯುವಿಹಾರಿಗಳಿಗೆ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ ನಡೆಯಿತು.ಡಿ.೨೨-೨೩ರಂದು ಗುರುವಂದನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮಂಡ್ಯಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್, ಶಂಕರ ಸೇವಾ ಪ್ರತಿಷ್ಠಾನದಿಂದ ಜಗದ್ಗುರು ಶ್ರೀವಿದುಶೇಖರ ಭಾರತೀ ಸನ್ನಿದಾನಂಗಳವರ ಸಾನ್ನಿಧ್ಯದಲ್ಲಿ ಡಿ.೨೨ರಂದು ಗುರುವಂದನಾ ಕಾರ್ಯಕ್ರಮವನ್ನು ಶ್ರೀವಿದ್ಯಾಗಣಪತಿ ದೇವಾಲಯದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಸಿ.ಕೆ.ನರಸಿಂಹಸ್ವಾಮಿ ಹೇಳಿದರು.
ಶೃಂಗೇರಿ ಶಾರದಾ ಪೀಠದ ಶ್ರೀಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀವಿದುಶೇಖರ ಭಾರತೀ ಸನ್ನಿದಾನಂಗಳವರು ಡಿ.೨೨ರಂದು ಸಂಜೆ ೬ ಗಂಟೆಗೆ ನಗರಕ್ಕೆ ಆಗಮಿಸುವರು. ಮಹಾವೀರ ವೃತ್ತದಿಂದ ವಿ.ವಿ.ರಸ್ತೆ ಮೂಲಕ ಶ್ರೀವಿದ್ಯಾಗಣಪತಿ ದೇವಸ್ಥಾನಕ್ಕೆ ಪೂರ್ಣಕುಂಭ ಸ್ವಾಗತ, ವೇದಘೋಷ, ಭಜನೆ, ನಾದಸ್ವರದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಗುವುದು. ಜಗದ್ಗುರುಗಳಿಂದ ಕೈಲಾಸೇಶ್ವರ ಹಾಗೂ ನವಗ್ರಹ ದೇವರ ದರ್ಶನ ಮತ್ತು ಆರತಿ ದಂಪತಿಗಳಿಂದ ಧೂಳಿ ಪೂಜೆ, ಫಲ ಸಮರ್ಪಣೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಡಿ.೨೩ರಂದು ಬೆಳಗ್ಗೆ ೯.೩೦ಕ್ಕೆ ಶಂಕರಮಠಕ್ಕೆ ಆಗಮಿಸುವ ಶ್ರೀಗಳು ಶ್ರೀರತ್ನ ಗಣಪತಿ, ಶ್ರೀ ಚಂದ್ರಮೌಳೇಶ್ವರ, ಶ್ರೀ ಶಾರದಾಂಬೆಗೆ ಆರತಿ ನೆರವೇರಿಸುವರು. ಶಂಕರಸೇವಾ ಪ್ರತಿಷ್ಠಾನದ ಟ್ರಸ್ಟಿಗಳಿಂದ ಫಲ ಸಮರ್ಪಣೆ ಮಾಡಲಾಗುವುದು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಗಣೇಶ್, ರಾಘವೇಂದ್ರ, ಚಂದ್ರಶೇಖರ್, ಶಂಕರನಾರಾಯಣ ಶಾಸ್ತ್ರಿ, ಕಶ್ಯಪ್ ಇದ್ದರು.