ಸಾರಾಂಶ
ಬ್ರಿಮ್ಸ್ ಆಸ್ಪತ್ರೆಯ ಎನ್‌ಆರ್‌ಸಿ ವಾರ್ಡ್‌ನಲ್ಲಿ ನ.15 ರಿಂದ 29 ರವರೆಗೆ ಜಿಲ್ಲೆಯಾದ್ಯಾಂತ ಜರುಗುತ್ತಿರುವ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಹಾಗೂ SAANS ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಬೀದರ್: ಒಂದರಿಂದ ಐದು ವರ್ಷದ ಮಕ್ಕಳು ಅತಿಸಾರ ಭೇದಿಯಿಂದ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದು, ಇದನ್ನು ನಿವಾರಿಸುವ ಸಲುವಾಗಿ 5 ವರ್ಷದೊಳಗಿನ ಎಲ್ಲಾ ಮಕ್ಕಳ ತಾಯಂದಿರಿಗೆ ಓಆರ್‌ಎಸ್ ಪೊಟ್ಟಣವನ್ನು ಮನೆ-ಮನೆಗೆ ತೆರಳಿ ವಿತರಿಸಲಾಗುತ್ತಿದೆ ಎಂದು ಜಿಪಂ ಸಿಇಓ ಶಿಲ್ಪಾ ಎಂ. ತಿಳಿಸಿದರು.
ಬ್ರಿಮ್ಸ್ ಆಸ್ಪತ್ರೆಯ ಎನ್‌ಆರ್‌ಸಿ ವಾರ್ಡ್‌ನಲ್ಲಿ ನ.15 ರಿಂದ 29 ರವರೆಗೆ ಜಿಲ್ಲೆಯಾದ್ಯಾಂತ ಜರುಗುತ್ತಿರುವ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಹಾಗೂ SAANS ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಓಆರ್‌ಎಸ್ ಚಿಕಿತ್ಸೆಯ ವಿಧಾನ, ಓಆರ್‌ಎಸ್ ದ್ರಾವಣ ತಯಾರಿಸುವ ಕ್ರಮ ಹಾಗೂ ಭೇದಿಯಾದಲ್ಲಿ ಓಆರ್‌ಎಸ್ ಮತ್ತು ಝಿಂಕ್ ಮೂಲಕ ಉಪಚರಿಸುವ ಕ್ರಮಗಳ ಕುರಿತು ತಾಯಿಂದಿಯರಿಗೆ ತಿಳಿಸಲಾಗುತ್ತಿದೆ. ಅಲ್ಲದೆ ಕೈತೊಳೆಯುವ ಪ್ರಾತ್ಯಕ್ಷಿಕೆ ಮತ್ತು ಕೈ ತೊಳೆಯುವುದರ ಮಹತ್ವವನ್ನು ಕುರಿತು ವಿವರಿಸಲಾಗುತ್ತದೆ ಎಂದು ಹೇಳಿದರು.ಡಿಎಚ್ಓ ಡಾ. ಧ್ಯಾನೇಶ್ವರ ನೀರಗುಡೆ ಮಾತನಾಡಿ, ಮೊದಲ ಆರು ತಿಂಗಳಲ್ಲಿ, ಮಗುವಿಗೆ ಕೇವಲ ತಾಯಿ ಹಾಲನ್ನು ಮಾತ್ರ ನೀಡಬೇಕು. ಅಡುಗೆ ಮಾಡುವ, ಬಡಿಸುವ ಮುನ್ನ ಮತ್ತು ಮಗುವಿನ ಮಲ ಶುಚಿ ಮಾಡಿದ ನಂತರ ಕೈಗಳನ್ನು ಸೋಪು ಬಳಸಿ ಚೆನ್ನಾಗಿ ತೊಳೆದುಕೊಳ್ಳಬೇಕು ಎಂದರು.ಮಕ್ಕಳ ತಜ್ಞ ಡಾ. ರವಿಕಾಂತ ಮಾತನಾಡಿ, ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕವು ಅತಿಸಾರ ಬೇಧಿಯಿಂದ ಮಕ್ಕಳ ಮರಣ ಹಾಗೂ ಬಳಲಿಕೆ ತಡೆಗಟ್ಟುವ ಸಲುವಾಗಿ ಆಚರಿಸಲಾಗುತ್ತಿದೆ. ಎಲ್ಲಾ ಮಕ್ಕಳ ತಾಯಂದಿರು ಈ ಯೋಜನೆಯ ಮಹತ್ವ ಅರಿತುಕೊಂಡು ಅನುಸರಿಸಬೇಕೆಂದರು.
ಮಕ್ಕಳ ತಜ್ಞರ ವಿಭಾಗದ ಮುಖ್ಯಸ್ಥೆ ಡಾ. ಶಾಂತಲಾ ಕೌಜಲಗಿ, ಜಿಲ್ಲಾ ಆ್‌ಚಿಎಚ್ ಅಧಿಕಾರಿ ಡಾ. ಶಿವಶಂಕರ.ಬಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಹೇಶ ಬಿರಾದರ ಮಾತನಾಡಿದರು.ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ. ಜಗದೀಶ ಕೋಟೆ, ಬೀದರ್ ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂಗಾರೆಡ್ಡಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಬಿರಾದರ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಶಿವಶಂಕರ ಬೇಮಳಗಿ, ಐಎಫ್ಎ ಲೋಕೇಶ, ಸಿಎಚ್ಓ ಗಂಗಾಧರ ಕಾಂಬಳೆ, ಡಿಎನ್ಓ ಭಾಗ್ಯಲಕ್ಷಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಓಂಕಾರ ಮಲ್ಲಿಗೆ, ಸಂಗೀತಾ, ಅಶೋಕ, ವಿನಾಯಕ, ಡಿಎನ್ಓ ಸುಸನ್ನಾ, ರವಿ, ದೇವಿದಾಸ, ತಾರಾದೇವಿ, ಚನ್ನಬಸವ, ಸನ್ನಿಪಾಲ್, ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಅಧಿಕಾರಿ, ಸಿಬ್ಬಂದಿ ಹಾಗೂ ಮಕ್ಕಳ ತಾಯಂದಿರು ಉಪಸ್ಥಿತರಿದ್ದರು.