ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಗ್, ನೋಟ್‌ಬುಕ್‌ ವಿತರಣೆ

| Published : Jun 23 2024, 02:04 AM IST

ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಗ್, ನೋಟ್‌ಬುಕ್‌ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾವರ ತಾಲೂಕಿನ ಆರ್‌ಇಎಸ್ ಸಂಯುಕ್ತ ಪದವಿ ಪೂರ್ವ ವಿದ್ಯಾಲಯ ಹಳದಿಪುರದಲ್ಲಿ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣಾ ಸಮಾರಂಭವನ್ನು ಹಿರಿಯ ಪತ್ರಕರ್ತ ಜಿ ಯು ಭಟ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಆರ್‌ಇಎಸ್ ಸಂಯುಕ್ತ ಪದವಿ ಪೂರ್ವ ವಿದ್ಯಾಲಯ ಹಳದಿಪುರದಲ್ಲಿ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣಾ ಸಮಾರಂಭವನ್ನು ಹಿರಿಯ ಪತ್ರಕರ್ತ ಶಜಿ ಯು ಭಟ್ ದೀಪ ಬೆಳಗಿಸುವುದರ

ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ, ಆರ್‌ಇಎಸ್ ಪ್ರೌಢಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರ ಸಹಕಾರದಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸುಮಾರು ₹1,15000 ವೆಚ್ಚದಲ್ಲಿ ಸಮವಸ್ತ್ರ ಬ್ಯಾಗ್, ನೋಟ್

ಬುಕ್, ಛತ್ರಿ, ವಾಟರ್ ಬಾಟಲ್ ಫೀಜ್ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ ಎಂದರು. ಇದೆ ವೇಳೆ ಹಿರಿಯ ಪತ್ರಕರ್ತ ಜಿ.ಯು. ಭಟ್ಟ,ಅರ್ಬನ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ

ನಿರ್ದೇಶಕರು ಆರ್‌ಇ ಸೊಸೈಟಿ ಕಾರ್ಯದರ್ಶಿ ರಾಜೀವ್ ಜಿ. ಶಾನಭಾಗ್ ಅವರನ್ನು

ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಹಳದಿಪುರ ಆರ್ ಇ ಸೊಸೈಟಿ ಅಧ್ಯಕ್ಷರಾದ ಜೆ.ಸಿ. ನಾಯಕ ಮಾತನಾಡಿ, ಹಳ್ಳಿಗಾಡಿನ ನಮ್ಮ ಶಾಲೆ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ತಮ ಶಿಕ್ಷಣ ನೀಡುತ್ತ ಬಂದಿದೆ. ಇಲ್ಲಿನ ಶಿಕ್ಷಕರು ಹಗಲು ಇರುಳು ಎನ್ನದೆ 10ನೇ ತರಗತಿ ಮಕ್ಕಳಿಗೆ ರಾತ್ರಿ ಶಾಲೆ ಸ್ಪೆಷಲ್ ಕ್ಲಾಸ್ ಮತ್ತು

ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಶಾಲೆಗೆ ಕರೆಸಿ ಮಕ್ಕಳಿಗೆ ಕಠಿಣ ವಿಷಯಗಳನ್ನು

ಸುಲಭವಾಗಿ ಅರ್ಥೈಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತಿದೆ. ಇದರಿಂದ ನಮ್ಮ ಶಾಲೆಯ ಎಸ್‌

ಎಸ್‌ಎಲ್‌ಸಿ ಫಲಿತಾಂಶ ಪ್ರತೀ ವರ್ಷ ಹೆಚ್ಚಾಗುತ್ತಾ ಬಂದಿದೆ. ಎಲ್ಲ ಶಿಕ್ಷಕರಿಗೆ ಆಡಳಿತ ಮಂಡಳಿಯವರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ದೈಹಿಕ ಶಿಕ್ಷಣ ಪರೀಕ್ಷಕ ಅರುಣ್ ಕುಮಾರ್, ಆಡಳಿತ ಮಂಡಳಿಯ ಸದಸ್ಯರಾದ ಜಿ.ಜಿ. ಸಭಾಹಿತ, ರತ್ನಾಕರ್ ನಾಯ್ಕ, ದಾಮೋದರ್ ಜಿ. ನಾಯ್ಕ, ಅಶೋಕ ನಾಯ್ಕ, ವಿನಾಯಕ್ ಕೆ. ನಾಯ್ಕ, ಉಮಾ ರಾವ್ ,ಪ್ರಾಂಶುಪಾಲ ವಿ.ಎಸ್. ನಾಯ್ಕ ಉಪಸ್ಥಿತರಿದ್ದರು. ಶಾಲೆಯ ಮುಖ್ಯಾಧ್ಯಾಪಕ ಎಸ್.ಎಚ್. ಪೂಜಾರ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಎಂ.ಜಿ. ಶೆಟ್ಟಿ ವಂದಿಸಿದರು. ಚಂದ್ರಪ್ಪ ಅಣ್ಣಪ್ಪನವರ ಕಾರ್ಯಕ್ರಮ ನಿರೂಪಿಸಿದರು.