ಸಾರಾಂಶ
ಗುಂಡುಗಟ್ಟಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸ್ಥಳೀಯ ಮುತ್ತಿನ ತೋಟದ ಮಾಲೀಕರಾದ ರಾಜೇಂದ್ರ ಹಾಗೂ ಸಾಧನ ಅವರು ಟ್ರ್ಯಾಕ್ ಸೂಟ್ ಅನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಗುಂಡುಗುಟ್ಟಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸ್ಥಳೀಯ ಮುತ್ತಿನ ತೋಟದ ಮಾಲೀಕರಾದ ರಾಜೇಂದ್ರ ಹಾಗೂ ಸಾಧನ ಅವರು ಟ್ರ್ಯಾಕ್ ಸೂಟ್ ಅನ್ನು ನೀಡಿದರು.ಇದೇ ವೇಳೆ ಮುತ್ತಿನ ತೋಟದ ವ್ಯವಸ್ಥಾಪಕರಾದ ಪ್ರದೀಪ್ ಅವರು ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿದರು. ಇದೇ ವೇಳೆ ಮಾತನಾಡಿದ ರಾಜೇಂದ್ರ ಅವರು, ಈ ಭಾಗದಲ್ಲಿ ಹೆಚ್ಚಾಗಿ ಕೂಲಿಕಾರ್ಮಿಕರ ಮಕ್ಕಳೇ ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ. ಅವರ ಭವಿಷ್ಯದ ದೃಷ್ಟಿಯಿಂದ ಮಕ್ಜಳಲ್ಲಿ ಇನ್ನಷ್ಟು ಓದಿನಲ್ಲಿ ಆಸಕ್ತಿ ಮೂಡುವ ದೃಷ್ಟಿಯಿಂದ ನಮ್ಮಿಂದಾದ ಸಣ್ಣ ಸಹಾಯ ಮಾಡುತ್ತಿದ್ದೇವೆ ಎಂದರು.ಈ ಸಂದರ್ಭ ಶಾಲೆ ಮುಖ್ಯ ಶಿಕ್ಷಕಿ ಗೌರಮಣಿ ಮತ್ತು ಶಿಕ್ಷಕಿ ಪೂರ್ಣಿಮಾ ಅವರು ಇದ್ದರು.