ವಿಕಲಚೇತನರು ದೇವರ ಮಕ್ಕಳಿದ್ದಂತೆ, ಅವರ ಬಗ್ಗೆ ಎಲ್ಲರೂ ಸಾಮಾಜಿಕ ಕಳಕಳಿ ಹೊಂದಬೇಕು, ಅವರಿಗೆ ಸಮಾನತೆ, ಸಾಮಾಜಿಕ ದೃಢತೆ, ಮಾನಸಿಕ ಧೈರ್ಯ ತುಂಬುವ ಕೆಲಸ ಎಲ್ಲರಿಂದಾಗಬೇಕು. ಸಮಾಜದಲ್ಲಿ ಅವರಿಗೆ ಇರುವ ಸೌಲಭ್ಯಗಳು ದೊರೆಯುವಂತಾಗಬೇಕು. ವಿಶ್ವ ವಿಕಲಚೇತನರ ದಿನಾಚರಣೆ ಸಲುವಾಗಿ ಡಿಸೆಂಬರ್ ೨ ರಂದು ಜಿಲ್ಲಾಹಂತದ ವಿಕಲಚೇತನರ ಕ್ರೀಡಾಕೂಟ ನಡೆಯುತ್ತಿದ್ದು, ಹಿನ್ನೆಲೆಯಲ್ಲಿ ಇಲ್ಲಿನ ೪೦ ಮಕ್ಕಳಿಗೆ ಟ್ರ್ಯಾಕ್ ಸೂಟ್ ವಿತರಣೆ ಮಾಡಲಾಗಿದೆ. ಎಲ್ಲ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ತರುವಂತಾಗಬೇಕು. ಇಲ್ಲಿನ ಮಕ್ಕಳಿಗೆ ಅವಶ್ಯಕ ವಸ್ತುಗಳ ಅಗತ್ಯತೆ ತಿಳಿಸಿದರೆ ಯುವ ಕಾಂಗ್ರೆಸ್ ನೆರವು ನೀಡಲು ಸಿದ್ಧವಿದ್ದು, ವಿಕಲಚೇತನರನ್ನು ನಮ್ಮೊಳಗಿನ ಒಬ್ಬರನ್ನಾಗಿ ಕಾಣುವುದು ನಮ್ಮೆಲ್ಲರ ಆದ್ಯತೆಯಾಗಬೇಕೆಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಡಿಸೆಂಬರ್ ೩ರ ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಚನ್ನರಾಯಪಟ್ಟಣ ತಾಲೂಕು ಯುವ ಕಾಂಗ್ರೆಸ್ ಸಮಿತಿಯು ತಾಲೂಕಿನ ಬರಗೂರು ಹ್ಯಾಂಡ್‌ಪೋಸ್ಟ್‌ನಲ್ಲಿರುವ ವಿದ್ಯಾರಣ ಸಂಸ್ಥೆಯ ಅವಕಾಶ ಬುದ್ಧಿಮಾಂದ್ಯ ಹಾಗೂ ವಿಕಲಚೇತನ ವಸತಿ ಪಾಠಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿದರು.ಅವಕಾಶ ಬುದ್ದಿ ವಿಕಲಚೇತನ ವಸತಿಯುತ ಪಾಠಶಾಲೆಯಲ್ಲಿರುವ ೪೦ ಮಕ್ಕಳಿಗೆ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎ.ಜೆ.ವೇಣುಗೋಪಾಲ್ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮರುವನಹಳ್ಳಿ ನೇತೃತ್ವದಲ್ಲಿ ಯುವ ಕಾಂಗ್ರೆಸ್ಸಿಗರು ಮಕ್ಕಳಿಗೆ ಕೇಕ್ ತಿನ್ನಿಸಿ, ಟ್ರ್ಯಾಕ್ ಸೂಟ್ ಸಮವಸ್ತ್ರಗಳನ್ನು ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಎ.ಜೆ.ವೇಣುಕುಮಾರ್, ವಿಕಲಚೇತನರು ದೇವರ ಮಕ್ಕಳಿದ್ದಂತೆ, ಅವರ ಬಗ್ಗೆ ಎಲ್ಲರೂ ಸಾಮಾಜಿಕ ಕಳಕಳಿ ಹೊಂದಬೇಕು, ಅವರಿಗೆ ಸಮಾನತೆ, ಸಾಮಾಜಿಕ ದೃಢತೆ, ಮಾನಸಿಕ ಧೈರ್ಯ ತುಂಬುವ ಕೆಲಸ ಎಲ್ಲರಿಂದಾಗಬೇಕು. ಸಮಾಜದಲ್ಲಿ ಅವರಿಗೆ ಇರುವ ಸೌಲಭ್ಯಗಳು ದೊರೆಯುವಂತಾಗಬೇಕು. ವಿಶ್ವ ವಿಕಲಚೇತನರ ದಿನಾಚರಣೆ ಸಲುವಾಗಿ ಡಿಸೆಂಬರ್ ೨ ರಂದು ಜಿಲ್ಲಾಹಂತದ ವಿಕಲಚೇತನರ ಕ್ರೀಡಾಕೂಟ ನಡೆಯುತ್ತಿದ್ದು, ಹಿನ್ನೆಲೆಯಲ್ಲಿ ಇಲ್ಲಿನ ೪೦ ಮಕ್ಕಳಿಗೆ ಟ್ರ್ಯಾಕ್ ಸೂಟ್ ವಿತರಣೆ ಮಾಡಲಾಗಿದೆ. ಎಲ್ಲ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ತರುವಂತಾಗಬೇಕು. ಇಲ್ಲಿನ ಮಕ್ಕಳಿಗೆ ಅವಶ್ಯಕ ವಸ್ತುಗಳ ಅಗತ್ಯತೆ ತಿಳಿಸಿದರೆ ಯುವ ಕಾಂಗ್ರೆಸ್ ನೆರವು ನೀಡಲು ಸಿದ್ಧವಿದ್ದು, ವಿಕಲಚೇತನರನ್ನು ನಮ್ಮೊಳಗಿನ ಒಬ್ಬರನ್ನಾಗಿ ಕಾಣುವುದು ನಮ್ಮೆಲ್ಲರ ಆದ್ಯತೆಯಾಗಬೇಕೆಂದರು.ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮರುವನಹಳ್ಳಿ, ಚನ್ನರಾಯಪಟ್ಟಣ ಬ್ಲಾಕ್ ಉಪಾಧ್ಯಕ್ಷ ಸಚ್ಚಿನ್. ಹಿರಿಸಾವೆ ಬ್ಲಾಕ್ ಕಾಂಗ್ರೆಸ್ ಮುಖಂಡ ನವೀನ್‌ಬಾಬು, ಮುಖಂಡರಾದ ನವೀನ್ ವಳಗೇರಹಳ್ಳಿ, ಜೀವನ್, ವೇಣು, ಮಂಜುನಾಥ್, ಸಂತೋಷ್, ಉದ್ಯಮಿ ಅನಿಲ್‌ಕುಮಾರ್. ಸೇರಿ ಇತರರು ಇದ್ದರು.