ಬಾಳೆಹೊನ್ನೂರು: ಸಮೀಪದ ಬಿದರೆ ಗ್ರಾಪಂ ವ್ಯಾಪ್ತಿಯ ಗುಂಡಿಹೊಂಬಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಗಂಧದ ಗುಡಿ ಬಳಗದಿಂದ ವಿವಿಧ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಬಾಳೆಹೊನ್ನೂರು: ಸಮೀಪದ ಬಿದರೆ ಗ್ರಾಪಂ ವ್ಯಾಪ್ತಿಯ ಗುಂಡಿಹೊಂಬಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಗಂಧದ ಗುಡಿ ಬಳಗದಿಂದ ವಿವಿಧ ಸಾಮಾಗ್ರಿಗಳನ್ನು ವಿತರಿಸಲಾಯಿತು.

ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪೆನ್ನು, ಪುಸ್ತಕ, ವಾಟರ್ ಬಾಲ್, ನೋಟ್ ಪುಸ್ತಕ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.

ಕಳೆದ ತಿಂಗಳು ಗಂಧದ ಗುಡಿ ಬಳಗದಿಂದ ಶಾಲೆಗೆ ಹಾಗೂ ಕೊಠಡಿಗಳಿಗೆ ವಿವಿಧ ಬಣ್ಣದ ಚಿತ್ತಾರ ಬರೆದು ಅಂದಗೊಳಿಸಲಾಗಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಖಾಂಡ್ಯ ಶೌರ್ಯ ವಿಪತ್ತು ಘಟಕದ ಯೋಜನೆಯಂತೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿ ಅಭಿಯಾನದಡಿ ಗಂಧದ ಗುಡಿ ಬಳಗದಿಂದ ಸರ್ಕಾರಿ ಶಾಲೆಗಳಿಗೆ ವಿವಿಧ ಸವಲತ್ತುಗಳನ್ನು ನೀಡಲಾಗುತ್ತಿದೆ.

ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ವಿ.ಸಿ.ರಘುಪತಿ ಬಿದರೆ, ಶಿಕ್ಷಕ ಬಿ.ಡಿ.ಚಂದ್ರೇಗೌಡ, ಅಂಗನವಾಡಿ ಮೇಲ್ವಿಚಾರಕಿ ಗಿರಿಜಾ, ಸಹಾಯಕಿ ಮಮತಾ, ನಾಗರತ್ನ, ಕಮಲ ಮತ್ತಿತರರು ಹಾಜರಿದ್ದರು.೧೨ಬಿಹೆಚ್‌ಆರ್ ೪:

ಬಾಳೆಹೊನ್ನೂರು ಸಮೀಪದ ಬಿದರೆ ಗುಂಡಿಹೊಂಬಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಗಂಧದ ಗುಡಿ ಬಳಗದಿಂದ ವಿವಿಧ ಸಾಮಾಗ್ರಿಗಳನ್ನು ವಿತರಿಸಲಾಯಿತು. ವಿ.ಸಿ.ರಘುಪತಿ, ಬಿ.ಡಿ.ಚಂದ್ರೇಗೌಡ, ಗಿರಿಜಾ, ಮಮತಾ ಇದ್ದರು.