ಸಾರಾಂಶ
ಬಂಗಾರಪ್ಪ ಅಭಿಮಾನಿಗಳ ವತಿಯಿಂದ ಸಚಿವ ಮಧು ಬಂಗಾರಪ್ಪ ಜನ್ಮದಿನವನ್ನು ಸಸಿ ವಿತರಿಸುವ ಮೂಲಕ ಆಚರಿಸಲಾಗುವುದು. ಮಾ.11ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಸಸಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಶ್ರೀಗಂಧ, ಸಾಗುವಾನಿ, ತೆಂಗು ಸೇರಿ ವಿವಿಧ ಜಾತಿಯ ಸಸಿಗಳ ನೀಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್ ಶಿಕಾರಿಪುರದಲ್ಲಿ ಹೇಳಿದ್ದಾರೆ.
ಶಿಕಾರಿಪುರ: ಬಂಗಾರಪ್ಪ ಅಭಿಮಾನಿಗಳ ವತಿಯಿಂದ ಸಚಿವ ಮಧು ಬಂಗಾರಪ್ಪ ಜನ್ಮದಿನವನ್ನು ಸಸಿ ವಿತರಿಸುವ ಮೂಲಕ ಆಚರಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್ ಹೇಳಿದರು.
ಶುಕ್ರವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.11ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಸಸಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಶ್ರೀಗಂಧ, ಸಾಗುವಾನಿ, ತೆಂಗು ಸೇರಿ ವಿವಿಧ ಜಾತಿಯ ಸಸಿಗಳ ನೀಡಲಾಗುವುದು ಎಂದರು.ಕಸಬಾ ಬ್ಯಾಂಕ್ ಅಧ್ಯಕ್ಷ ಬಡಗಿ ಪಾಲಾಕ್ಷಪ್ಪ ಮಾತನಾಡಿ, ಬರಗಾಲ ಸಂದರ್ಭದಲ್ಲಿ ದಿ. ಎಸ್. ಬಂಗಾರಪ್ಪ ಜನರಿಗೆ ಬಿತ್ತನೆಬೀಜ, ಅಕ್ಕಿ, ಗೋದಿ ವಿತರಿಸಿ ಕಷ್ಟಕ್ಕೆ ನೆರವಾದರು. ಅವರಂತೆ ಅವರ ಮಗ ಸಚಿವ ಮಧು ಬಂಗಾರಪ್ಪ ಸಹ ಜನರ ಕಷ್ಟಕ್ಕೆ ಸ್ಪಂದಿಸುವ ನಾಯಕನಾಗಲಿ. ಅವರ ಜನ್ಮದಿನಕ್ಕೆ ಸಸಿ ವಿತರಿಸಿ ಪ್ರಕೃತಿ ಕಾಪಾಡುವ ಜತೆ ಅವರ ಭವಿಷ್ಯ ಪ್ರಜ್ವಲಿಸಲಿ ಎಂದು ಹಾರೈಸುತ್ತೇವೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸಿ, ಸಸಿ ಪಡೆದು ಶುಭ ಹಾರೈಸಬೇಕು ಎಂದು ಮನವಿ ಮಾಡಿದರು.
ಬನ್ನೂರು ಚರಣ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ದೇಶದ ಭವಿಷ್ಯಕ್ಕೆ ಒಳ್ಳೆ ವಿದ್ಯಾರ್ಥಿಗಳನ್ನು ನೀಡುವ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಒಳ್ಳೆ ಕೆಲಸದ ಮೂಲಕ ಭವಿಷ್ಯದಲ್ಲಿ ಮುಖ್ಯಮಂತ್ರಿ ಆಗಲಿ. ಸಸಿ ವಿತರಣೆಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶುಭ ಹಾರೈಸುವಂತೆ ಕೋರಿದರು.ಬಂಗಾರಪ್ಪ ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು.
- - - -8ಕೆಎಸ್.ಕೆಪಿ3:ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್ ಮಾತನಾಡಿದರು.