೧೦೦ ಗ್ರಾಂ ಪ್ಲಾಸ್ಟಿಕ್‌ಗೆ ವಾಲೆ, ಜುಮ್ಕಿ, ಮೂಗುತಿ ವಿತರಣೆ

| Published : Sep 21 2025, 02:00 AM IST

ಸಾರಾಂಶ

ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ಸ್ವಚ್ಛತೆ ಹಿ ಸೇವಾ ಕಾರ್ಯಕ್ರಮದಲ್ಲಿ ೧೦೦ ಗ್ರಾಂ ಪ್ಲಾಸ್ಟಿಕ್‌ ಪುರಸಭೆಗೆ ನೀಡಿದರೆ ವಿದ್ಯಾರ್ಥಿನಿಯರಿಗೆ ವಾಲೆ, ಜುಮ್ಕಿ, ಹೇರ್‌ ಬ್ಯಾಂಡ್‌, ಮೂಗುತಿ ಜೊತೆಗೆ ಅಲಂಕಾರಿಕ ವಸ್ತುಗಳನ್ನು ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ವಿತರಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ಸ್ವಚ್ಛತೆ ಹಿ ಸೇವಾ ಕಾರ್ಯಕ್ರಮದಲ್ಲಿ ೧೦೦ ಗ್ರಾಂ ಪ್ಲಾಸ್ಟಿಕ್‌ ಪುರಸಭೆಗೆ ನೀಡಿದರೆ ವಿದ್ಯಾರ್ಥಿನಿಯರಿಗೆ ವಾಲೆ, ಜುಮ್ಕಿ, ಹೇರ್‌ ಬ್ಯಾಂಡ್‌, ಮೂಗುತಿ ಜೊತೆಗೆ ಅಲಂಕಾರಿಕ ವಸ್ತುಗಳನ್ನು ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ವಿತರಿಸಿದರು.

ಪಟ್ಟಣದ ನೆಹರು ಪಾರ್ಕ್‌ನಲ್ಲಿ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಸ್ವಚ್ಛತೆ ಹಿ ಸೇವಾ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್‌ ಮುಕ್ತ ಮಾಡಲು ವಿದ್ಯಾರ್ಥಿನಿಯರಿಗೆ ಈ ರೀತಿಯ ಉಡುಗೊರೆ ನೀಡಲಾಯಿತು.

ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಮಾತನಾಡಿ, ಸ್ವಚ್ಛತೆ ಹಿ ಸೇವಾ ಕಾರ್ಯಕ್ರಮದಲ್ಲಿ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಸೈಕಲ್ ಜಾಥಾ ಹಾಗು ಶಾಲಾ ವಿದ್ಯಾರ್ಥಿಗಳಿಗೆ ಪೇಂಟಿಂಗ್ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು. ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರಕ್ಕೆ ಧಕ್ಕೆಯಾಗಲಿದೆ. ನೀವು ಮತ್ತು ನಿಮ್ಮ ಮನೆಯಲ್ಲಿ ಪ್ಲಾಸ್ಟಿಕ್‌ ಬಳಸದಂತೆ ಹೇಳುವ ಮೂಲಕ ಪರಿಸರ ಉಳಿವಿಗೆ ಕಾರಣರಾಗಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಮಧು ,ಪರಿಸರ ಅಭಿಯಂತರ ಮಹೇಶ್, ಆರೋಗ್ಯ ನೀರಿಕ್ಷಕ ಪರಮೇಶ್, ಮೇಸ್ತ್ರಿ ಸಿದ್ದರಾಜು, ಮೂರ್ತಿ, ಕುಮಾರ್ ಮತ್ತು ಪೌರ ಕಾರ್ಮಿಕರು ಇದ್ದರು.