ಕಾಂಗ್ರೆಸ್‌ ಕಾರ್ಯಕರ್ತರಿಂದ ನೀರು, ಕಲ್ಲಂಗಡಿ, ಮಜ್ಜಿಗೆ ಹಂಚಿಕೆ..!

| Published : Apr 02 2024, 01:05 AM IST

ಕಾಂಗ್ರೆಸ್‌ ಕಾರ್ಯಕರ್ತರಿಂದ ನೀರು, ಕಲ್ಲಂಗಡಿ, ಮಜ್ಜಿಗೆ ಹಂಚಿಕೆ..!
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರು ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ಆಗಮಿಸುವ ಸಮಯದಲ್ಲಿ ಬಿಸಿಲ ಝಳಕ್ಕೆ ಜನರು ತತ್ತರಿಸದಂತೆ ಅಲ್ಲಲ್ಲಿ ನೀರು, ಕಲ್ಲಂಗಡಿ, ಮಜ್ಜಿಗೆ ಹಂಚಿಕೆ ಮಾಡಲಾಯಿತು. ಮಿನಿ ಟೆಂಪೋಗಳಲ್ಲಿ ಮಜ್ಜಿಗೆ, ನೀರಿನ ಬಾಟಲಿಗಳನ್ನಿಟ್ಟುಕೊಂಡು ಕೇಳಿದವರಿಗೆಲ್ಲಾ ನೀಡುತ್ತಾ ದಾಹ ತಣಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರು ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ಆಗಮಿಸುವ ಸಮಯದಲ್ಲಿ ಬಿಸಿಲ ಝಳಕ್ಕೆ ಜನರು ತತ್ತರಿಸದಂತೆ ಅಲ್ಲಲ್ಲಿ ನೀರು, ಕಲ್ಲಂಗಡಿ, ಮಜ್ಜಿಗೆ ಹಂಚಿಕೆ ಮಾಡಲಾಯಿತು.

ಮಿನಿ ಟೆಂಪೋಗಳಲ್ಲಿ ಮಜ್ಜಿಗೆ, ನೀರಿನ ಬಾಟಲಿಗಳನ್ನಿಟ್ಟುಕೊಂಡು ಕೇಳಿದವರಿಗೆಲ್ಲಾ ನೀಡುತ್ತಾ ದಾಹ ತಣಿಸುತ್ತಿದ್ದರು. ರಸ್ತೆ ಪಕ್ಕದಲ್ಲಿ ಕಲ್ಲಂಗಡಿ ಮಾರಾಟ ಮಾಡುವವರ ಬಳಿ ಇದ್ದ ಎಲ್ಲ ಹಣ್ಣುಗಳಿಗೂ ಹಣ ಕೊಟ್ಟು ಯಾರಿಗೂ ಇಲ್ಲ ಎನ್ನದಂತೆ ನೀಡುವಂತೆ ಸೂಚಿಸಿದ್ದರು. ಅದರಂತೆ ಕೆಲ ಗಂಟೆಗಳ ಕಾಲ ಅರ್ಧ ಹಣ್ಣನ್ನು ಒಬ್ಬೊಬ್ಬರಿಗೆ ನೀಡುತ್ತಿದ್ದವರು ನಂತರದಲ್ಲಿ ಉಂಡೆ ಹಣ್ಣನ್ನೇ ಹಂಚಿದರು. ಕಲ್ಲಂಗಡಿಯನ್ನು ಹಿಡಿದುಕೊಂಡು ನೀರಿನ ಬಾಟಲಿ, ಮಜ್ಜಿಗೆಯೊಂದಿಗೆ ನೂರಾರು ಜನರು ಮೆರವಣಿಗೆಯಲ್ಲಿ ಸಾಗುತ್ತಾ ಬಂದರು. ಮಜ್ಜಿಗೆ, ನೀರಿನ ಬಾಟಲಿಗಳಿಗೆ ಜನರು ಮುಗಿಬಿದ್ದು ಪಡೆದುಕೊಳ್ಳುತ್ತಿದ್ದುದು ಕಂಡುಬಂದಿತು.ಮಂಡ್ಯ ನಗರಕ್ಕೆ ಬಂದ ಶ್ರೀರಂಗಪಟ್ಟಣ ಕಾಂಗ್ರೆಸ್‌ ಕಾರ್ಯಕರ್ತರು

ಶ್ರೀರಂಗಪಟ್ಟಣ:

ಮಂಡ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಪಟ್ಟಣದಿಂದ ನೂರಾರು ವಾಹನಗಳಲ್ಲಿ ಕಾರ್ಯಕರ್ತರು ಮಂಡ್ಯ ನಗರಕ್ಕೆ ಪ್ರಯಾಣಿಸಿದರು.

ತಾಲೂಕಿನ ಬೆಳಗೊಳ ಹೋಬಳಿಯ ಕೆಆರ್‌ಎಸ್, ಬೆಳಗೊಳ, ಹೊಸ ಅನಂದೂರು, ಹುಲಿಕೆರೆ, ಹೊಸಹಳ್ಳ, ಪಾಲಹಳ್ಳಿ ಸೇರಿದಂತೆ ಇತರೆ ಗ್ರಾಮಗಳು, ಶ್ರೀರಂಗಪಟ್ಟಣ ನಗರ ಹಾಗೂ ಕಸಬಾ ಹೋಬಳಿಯ ಮೇಳಾಪುರ ನಗುವನಹಳ್ಳಿ, ಚಂದಗಾಲು, ಮಹದೇವಪುರ ಚಿಕ್ಕಂಕನಹಳ್ಳಿ, ಕೆ.ಶೆಟ್ಟಹಳ್ಳಿ ಹೋಬಳಿಯ ಸಬ್ಬನಕುಪ್ಪೆ, ಟಿಎಂ.ಹೊಸೂರು, ನೀಲನಕೊಪ್ಪಲು, ಎಂ.ಶೆಟ್ಟಹಳ್ಳಿ ಅಚ್ಚಪ್ಪನ ಕೊಪ್ಪಲು ದರಸಗುಪ್ಪೆ ಹಾಗೂ ಅರಕೆರೆ ಹೋಬಳಿ, ಕೊತ್ತತ್ತಿ ಮೊದಲ ವೃತ್ತ, ಎರಡನೇ ವೃತ್ತ ಈ ಭಾಗದ ಗ್ರಾಮಗಳಿಂದ ಮಂಡ್ಯಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತೆರಳಲು ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ತಮ್ಮ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.