ಕನಕಗಿರಿಯ ವಿವಿಧೆಡೆ ಶ್ರೀರಾಮನ ಅಕ್ಷತೆ ವಿತರಣೆ ಕಾರ್ಯಕ್ರಮ

| Published : Jan 06 2024, 02:00 AM IST / Updated: Jan 06 2024, 10:42 AM IST

ಕನಕಗಿರಿಯ ವಿವಿಧೆಡೆ ಶ್ರೀರಾಮನ ಅಕ್ಷತೆ ವಿತರಣೆ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಕಲಶವನ್ನು ಮನೆ ಮನೆಗೆ ತಲುಪಿಸುವ ಅಭಿಯಾನಕ್ಕೆ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಅಯ್ಯನಗೌಡರೆಡ್ಡಿ ಅಳ್ಳಳ್ಳಿ ಚಾಲನೆ ನೀಡಿದರು.

ಕನಕಗಿರಿ: ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಕಲಶವನ್ನು ಮನೆ ಮನೆಗೆ ತಲುಪಿಸುವ ಅಭಿಯಾನಕ್ಕೆ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಅಯ್ಯನಗೌಡರೆಡ್ಡಿ ಅಳ್ಳಳ್ಳಿ ಚಾಲನೆ ನೀಡಿದರು.

ನಂತರ ಮಾತನಾಡಿ ಅವರು, ಜ.೨೨ರಂದು ಉದ್ಘಾಟನೆಗೊಳ್ಳುವ ಅಯೋಧ್ಯೆಯ ಶ್ರೀರಾಮಮಂದಿರದಿಂದ ಮಂತ್ರಾಕ್ಷತೆ ಕಲಶವನ್ನು ದೇಶದಾದ್ಯಂತ ಸಂಘ ಪರಿವಾರದ ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಈ ಮಹತ್ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗಿ ಪ್ರತಿ ಮನೆಗೂ ಮಂತ್ರಾಕ್ಷತೆ ತಲುಪಿಸುತ್ತಿದ್ದೇವೆ. 

ಕನಕಗಿರಿ, ನವಲಿ ಹಾಗೂ ಹುಲಿಹೈದರ ಹೋಬಳಿ ಕೇಂದ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮಂತ್ರಾಕ್ಷತೆ ತಲುಪಿಸುವ ಕಾರ್ಯ ನಡೆದಿದೆ. ತಾಲೂಕಿನ ಎಲ್ಲ ಗ್ರಾಮಗಳನ್ನು ತಲುಪಿ ಮನೆ-ಮನೆಗೆ ತೆರಳಿ ಅಕ್ಷತೆ ನೀಡುತ್ತಿದ್ದೇವೆ ಎಂದರು. ಯುವ ಮುಖಂಡ ಗುರುಶಾಂತಪ್ಪ ಮಾತನಾಡಿ, ಹಳ್ಳಿ-ಹಳ್ಳಿಗೂ ಶ್ರೀರಾಮನ ಮಂತ್ರಾಕ್ಷತೆ ತಲುಪಿಸುವುದು ಪುಣ್ಯದ ಕೆಲಸವಾಗಿದೆ. ಜ.೨೨ಕ್ಕೆ ಪ್ರತಿ ಮನೆಯಲ್ಲಿಯೂ ಭಕ್ತಿಯಿಂದ ದೀಪ ಹಚ್ಚಿ ಹೇಳಿದರು.

ಪ್ರಮುಖರಾದ ರಂಗಪ್ಪ ಯಡ್ಡೋಣಿ, ಹನುಮೇಶ ಬೊಮ್ಮಸಾಗರ, ಸೋಮನಾಥ ತಳವಾರ, ಶರಣಪ್ಪ ಸೂಳಿಕೇರಿ, ಮಾರುತಿ ಬೊಮ್ಮಸಾಗರ, ಮಾರುತಿ ಸುಣಗಾರ, ನಿರುಪಾದಿ ನಾಯಕ, ವಿರಪನಗೌಡ, ಬಸವರಾಜ ವಕ್ರ, ಪರಶುರಾಮ ಉಪ್ಪಾರ, ತಿಮ್ಮಣ್ಣ, ಮಂಜು ಹೂಗಾರ, ಬಸವರಾಜ ಭಜಂತ್ರಿ, ಸಂಪತಕುಮಾರ, ಸೂರಜ, ಜೀವಣ್ಣ, ಬಸವರಾಜ ನಾಯಕ ಉಪಸ್ಥಿತರಿದ್ದರು.