ಪಿತ್ರಾರ್ಜಿತ ಆಸ್ತಿ ಕೊಡಿಸಲು ಜಿಲ್ಲಾಡಳಿತ ಸ್ಪಂದಿಸಲಿ: ಯಶವಂತಪ್ಪ

| Published : Jan 02 2025, 12:30 AM IST

ಸಾರಾಂಶ

ನಿವೃತ್ತ ನ್ಯಾಯಾಧೀಶರೊಬ್ಬರ ಪ್ರಭಾವದಿಂದಾಗಿ ಪಿತ್ರಾರ್ಜಿತ ಆಸ್ತಿಗೆ ಸಮಸ್ಯೆಗೆ ಸಿಲುಕಿದೆ. ನ್ಯಾಯುತವಾಗಿ ನಮಗೆ ಸೇರಬೇಕಾದ ಪಿತ್ರಾರ್ಜಿತ ಆಸ್ತಿ ಪಡೆಯಲು ಕೆಲವರು ಅಡ್ಡಿಯಾಗಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಚನ್ನಗಿರಿ ತಾಲೂಕು ನಲ್ಕುದುರೆ ಗ್ರಾಮದ ರೈತ ಯಶವಂತಪ್ಪ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

- ನಾಗಪ್ಪನ ಮಕ್ಕಳು ಇಡೀ ಆಸ್ತಿ ಅನುಭವಿಸುತ್ತಿರುವ ಆರೋಪ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ನಿವೃತ್ತ ನ್ಯಾಯಾಧೀಶರೊಬ್ಬರ ಪ್ರಭಾವದಿಂದಾಗಿ ಪಿತ್ರಾರ್ಜಿತ ಆಸ್ತಿಗೆ ಸಮಸ್ಯೆಗೆ ಸಿಲುಕಿದೆ. ನ್ಯಾಯುತವಾಗಿ ನಮಗೆ ಸೇರಬೇಕಾದ ಪಿತ್ರಾರ್ಜಿತ ಆಸ್ತಿ ಪಡೆಯಲು ಕೆಲವರು ಅಡ್ಡಿಯಾಗಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಚನ್ನಗಿರಿ ತಾಲೂಕು ನಲ್ಕುದುರೆ ಗ್ರಾಮದ ರೈತ ಯಶವಂತಪ್ಪ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

ನಲ್ಕುದುರೆ ಗ್ರಾಮದ ರಿ.ಸ.ನಂ. ವ್ಯಾಪ್ತಿಯಲ್ಲಿ 1.35 ಎಕರೆ ಜಮೀನು ಹಾಗೂ ಮನೆ ಸಮೀಪದ 20 ಗುಂಟೆ ಕಣ ಪಿತ್ರಾರ್ಜಿತ ಆಸ್ತಿಯಾಗಿದೆ. ಸರ್ಕಾರಿ ಕಚೇರಿ, ನ್ಯಾಯಾಲಯಗಳನ್ನು ಅಲೆದರೂ ತಮಗೆ ನ್ಯಾಯ ಸಿಕ್ಕಿಲ್ಲ. ಇನ್ನಾದರೂ ಜಿಲ್ಲಾಧಿಕಾರಿ, ಚನ್ನಗಿರಿ ತಹಸೀಲ್ದಾರರು ಈ ಬಗ್ಗೆ ಗಮನಹರಿಸಿ. ಆಸ್ತಿಯನ್ನು ಸರಿಯಾದ ರೀತಿ ಹಂಚಿಕೆ ಆಗುವಂತೆ ಮಾಡಿ, ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.

ಮುತ್ತಜ್ಜ ಕಾಳಪ್ಪ ಅವರಿಗೆ ಕ್ಯಾತಪ್ಪ ಹಾಗೂ ನಾಗಪ್ಪ ಎಂಬ ಇಬ್ಬರು ಮಕ್ಕಳು. ಪಿತ್ರಾರ್ಜಿತ ಆಸ್ತಿಯಲ್ಲಿ ಆ ಇಬ್ಬರೂ ಪಾಲುದಾರರಾಗಿದ್ದಾರೆ. ಆದರೆ, ನಾಗಪ್ಪನ ಮಕ್ಕಳು ಮಾತ್ರ ಇಡೀ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಕ್ಯಾತಪ್ಪನವರ ಮಕ್ಕಳು, ಮೊಮ್ಮಕ್ಕಳಾದ ನಮಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಭಾಗ, ಪಾಲು ನೀಡಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಕುಟುಂಬದ ಮೌನೇಶ, ಕಾಂತೇಶ, ಪ್ರವೀಣ ಇದ್ದರು.

- - - -29ಕೆಡಿವಿಜಿ65.ಜೆಪಿಜಿ:

ದಾವಣಗೆರೆಯಲ್ಲಿ ಚನ್ನಗಿರಿ ತಾಲೂಕು ನಲ್ಕುದುರೆ ಯಶವಂತಪ್ಪ ಸುದ್ದಿಗೋಷ್ಠಿ ನಡೆಸಿ, ನ್ಯಾಯ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.