27, 28ರಂದು ಕಲಾಕುಂಚದಿಂದ ಜಿಲ್ಲಾ, ರಾಜ್ಯ ಪ್ರಶಸ್ತಿ ಪ್ರದಾನ

| Published : Jul 25 2024, 01:29 AM IST

27, 28ರಂದು ಕಲಾಕುಂಚದಿಂದ ಜಿಲ್ಲಾ, ರಾಜ್ಯ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಹಯೋಗದಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜು.27 ಹಾಗೂ ಜು.28ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ದಾವಣಗೆರೆಯಲ್ಲಿ ಹೇಳಿದ್ದಾರೆ.

- “ಕನ್ನಡ ಕೌಸ್ತುಭ ", "ಸರಸ್ವತಿ ಪುರಸ್ಕಾರ ", "ಕನ್ನಡ ಕುವರ-ಕುವರಿ'''''''' ಪ್ರಶಸ್ತಿ ವಿತರಿಸಿ ಪುರಸ್ಕಾರ: ಗಣೇಶ ಶೆಣೈ ಮಾಹಿತಿ

- - -

- - -

- ಜು.27ರಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರಿಂದ ಕಾರ್ಯಕ್ರಮ ಉದ್ಘಾಟನೆ

- ಮುಖ್ಯ ಅತಿಥಿಗಳಾಗಿ ಕಲಾಕುಂಚ ಕೇರಳದ ಗಡಿನಾಡ ಶಾಖೆ ಅಧ್ಯಕ್ಷೆ ಜಯಲಕ್ಷ್ಮೀ ಕಾರಂತ್ ಭಾಗಿ

- ಜು.28ರಂದು ಬೆಂಗಳೂರಿನ ಜನಸಿರಿ ಫೌಂಡೇಷನ್ ಸಂಸ್ಥಾಪಕರೂ, ಸಾಹಿತಿ ನಾಗಲೇಖರಿಂದ ಸಮಾರಂಭ ಉದ್ಘಾಟನೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಹಯೋಗದಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜು.27 ಹಾಗೂ ಜು.28ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಗರದ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಪರಿಪೂರ್ಣ ಅಂಕ ಪಡೆದ ಮಕ್ಕಳಿಗೆ ರಾಜ್ಯಮಟ್ಟದ “ಕನ್ನಡ ಕೌಸ್ತುಭ " ರಾಜ್ಯ ಪ್ರಶಸ್ತಿ, ಒಟ್ಟು ಅಂಕ 625ಕ್ಕೆ 600ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ "ಸರಸ್ವತಿ ಪುರಸ್ಕಾರ ", ರಾಜ್ಯ ಪ್ರಶಸ್ತಿ, 125ಕ್ಕೆ 120 ರಿಂದ 124 ರವರೆಗೆ ಅಂಕ ಪಡೆದ ಮಕ್ಕಳಿಗೆ "ಕನ್ನಡ ಕುವರ-ಕುವರಿ'''''''' ಜಿಲ್ಲಾ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಜು.27ರಂದು ಬೆಳಗ್ಗೆ 10 ಗಂಟೆಗೆ ನಿವೃತ್ತ ಸರ್ವೋಚ್ಚ ನ್ಯಾಯಾಲಯ ನ್ಯಾಯಾಧೀಶರು, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಕೆ.ಎಚ್. ಮಂಜುನಾಥ ವಹಿಸುವರು. ಮುಖ್ಯ ಅತಿಥಿಗಳಾಗಿ ಕಲಾಕುಂಚ ಕೇರಳದ ಗಡಿನಾಡ ಶಾಖೆ ಅಧ್ಯಕ್ಷೆ ಜಯಲಕ್ಷ್ಮೀ ಕಾರಂತ್, ದಾವಣಗೆರೆಯ ಶ್ರೀಮತಿ ಮೋತಿ ಗೌರಮ್ಮ ಮೋತಿ ಪಿ.ರಾಮರಾವ್ ಚಾರಿಟೆಬಲ್ ಟ್ರಸ್ಟ್‌ ಅಧ್ಯಕ್ಷ ಮೋತಿ ಪರಮೇಶ್ವರ ರಾವ್ ಗೌರವ ಉಪಸ್ಥಿತಿಯಲ್ಲಿ ಕಲಾಕುಂಚ ಗೌರವ ಸಲಹೆಗಾರ ಬಿ.ಶಾಂತಪ್ಪ ಪೂಜಾರಿ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ಪಾಲ್ಗೊಳ್ಳುವರು ಎಂದರು.

ಜು.28ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಜನಸಿರಿ ಫೌಂಡೇಷನ್ ಸಂಸ್ಥಾಪಕರೂ, ಸಾಹಿತಿ ನಾಗಲೇಖ ಸಮಾರಂಭ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಕೆ.ಎಚ್. ಮಂಜುನಾಥ್ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಕಲಾಕುಂಚ ಕೇರಳದ ಗಡಿನಾಡ ಶಾಖೆಯ ಸಹ ಕಾರ್ಯದರ್ಶಿ ಹಿರಿಯ ಸಾಹಿತಿ ಜಯಲಕ್ಷ್ಮೀ ರಾಮಚಂದ್ರ ಹೊಳ್ಳ, ಬೆಂಗಳೂರಿನ ದೂರದರ್ಶನ ಕೇಂದ್ರದ ಚಂದನ ವಾಹಿನಿಯ ನಿರೂಪಕ, ಯುವ ಸಾಹಿತಿ ಎಚ್.ರಾಜಶೇಖರ, ಕಲಾಕುಂಚ ಮಹಿಳಾ ವಿಭಾಗದ ಗೌರವಾಧ್ಯಕ್ಷೆ ವಸಂತಿ ಮಂಜುನಾಥ, ಕರ್ನಾಟಕದಲ್ಲಿ 2023- 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಪರಿಪೂರ್ಣ ಅಂಕ ಪಡೆದ ಶೈಕ್ಷಣಿಕ ಯುವ ಸಾಧಕಿ, ಬೆಂಗಳೂರಿನ ಟಿ.ಎಸ್. ಭಾವನ ಭಾಗವಹಿಸುವರು ಎಂದರು.

ಪ್ರಶಸ್ತಿ ಪುರಸ್ಕೃತ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬೆಳಗ್ಗೆ ಅತಿಥಿಗಳೊಂದಿಗೆ ಮಂಗಳ ವಾದ್ಯ, ಪೂರ್ಣಕುಂಭ ಮೂಲಕ ಸ್ವಾಗತಿಸಿ, ವೇದಿಕೆಯಲ್ಲಿ ಗಣ್ಯರಿಂದ ಸನ್ಮಾನ ಪತ್ರ ವಿತರಿಸಿ, ಗೌರವಿಸಲಾಗುವುದು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಾಕುಂಚ ಅಧ್ಯಕ್ಷ ಕೆ.ಎಚ್. ಮಂಜುನಾಥ, ವಸಂತಿ ಮಂಜುನಾಥ, ಕೆ.ಸಿ. ಉಮೇಶ್, ಜ್ಯೋತಿ ಗಣೇಶ್ ಶೆಣೈ, ಬಿ.ಶಾಂತಪ್ಪ ಪೂಜಾರಿ, ಹೇಮಾ ಶಾಂತಪ್ಪ ಪೂಜಾರಿ ಇದ್ದರು.

- - - -24ಕೆಡಿವಿಜಿ33ಃ:

ದಾವಣಗೆರೆಯಲ್ಲಿ ಕಲಾಕುಂಚ ಸಂಸ್ಥೆಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿರುವ ಕುರಿತು ಸಾಲಿಗ್ರಾಮ ಗಣೇಶ ಶೆಣೈ ಮಾಹಿತಿ ನೀಡಿದರು.