ಸಾರಾಂಶ
ಹಿಂದೂ ವಿರೋಧಿ ಸರ್ಕಾರ ಅಂತಾ ಘೋಷಣೆ ಕೂಗಿ ಹಿಂದೂ ಭಕ್ತರ ಮೇಲೆ ಹಳೆಯ ಕೇಸ್ ಗಳನ್ನು ರೀ ಓಪನ್ ಮಾಡಿ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಇದು ತುಘಲಕ್ ದರ್ಬಾರ್ ಅಂತಾ ಆಕ್ರೋಶ
ಗದಗ: ಹುಬ್ಬಳ್ಳಿಯಲ್ಲಿ ರಾಮ ಜನ್ಮ ಭೂಮಿ ಹೋರಾಟಗಾರ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.ಪ್ರತಿಭಟನಾ ನಿರತ ಪದಾಧಿಕಾರಿಗಳು ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ತಡೆಯಲು ಮುಂದಾದ ಪೊಲೀಸರ ಮಧ್ಯೆ ನೂಕಾಟ, ತಳ್ಳಾಟ ಉಂಟಾಯಿತು.
ಪೊಲೀಸರು ಎಷ್ಟೇ ತಡೆಯಲು ಪ್ರಯತ್ನಿಸಿದರು ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಚೇಂಬರ್ ಗೆ ನುಗ್ಗಲು ಮುಂದಾದರು ಈ ವೇಳೆ ಗೇಟ್ ಬಂದ್ ಮಾಡಿ ಒಳ ಹೋಗದಂತೆ ತಡೆದರು.ಇದರಿಂದ ಮತ್ತಷ್ಟು ಕುಪಿತಗೊಂಡ ಕಾರ್ಯಕರ್ತರು ಸರ್ಕಾರದ ನಡೆಯನ್ನು ಬಲವಾಗಿ ಖಂಡಿಸಿ ಘೋಷಣೆ ಕೂಗಿದರು.
ಹಿಂದೂ ವಿರೋಧಿ ಸರ್ಕಾರ ಅಂತಾ ಘೋಷಣೆ ಕೂಗಿ ಹಿಂದೂ ಭಕ್ತರ ಮೇಲೆ ಹಳೆಯ ಕೇಸ್ ಗಳನ್ನು ರೀ ಓಪನ್ ಮಾಡಿ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಇದು ತುಘಲಕ್ ದರ್ಬಾರ್ ಅಂತಾ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಹಿಂದು ಕಾರ್ಯಕರ್ತರನ್ನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಶ್ರೀಪತಿ ಉಡುಪಿ, ಅಶೋಕ ಕುಡತಿನ್ನಿ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ವಿಜಯಲಕ್ಷ್ಮಿ ಮಾನ್ವಿ ಶಶಿಧರ ದಿಂಡೂರ, ರಾಜು ಕುರುಡಗಿ, ರವಿ ದಂಡೀನ, ಸಿದ್ದು ಪಲ್ಲೇದ, ಸುಧೀರ ಕಾಟಿಗಾರ ವಿಜಯಲಕ್ಷ್ಮಿ ಮಾನ್ವಿ ಸೇರಿದಂತೆ ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.