ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕಾಂಗ್ರೆಸ್‌ ವಶ

| Published : Jan 26 2024, 01:46 AM IST

ಸಾರಾಂಶ

ಜಿಲ್ಲಾ ಕೇಂದ್ರ ಸಹಕರ ಬ್ಯಾಂಕ್‌ ನಿರ್ದೇಶಕರ ಮಂಡಳಿಯ 13 ಸ್ಥಾನಗಳಿಗೆ ಐದು ವರ್ಷದ ಅವಧಿಗೆ ಗುರುವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಗರದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 13 ಸದಸ್ಯರ ಪೈಕಿ 11 ಜನ ಚುನಾವಣೆಯಲ್ಲಿ ಗೆದ್ದರೆ, ಜೆ.ಆರ್.ಷಣ್ಮುಖಪ್ಪ ಹಾಗೂ ವೇಣುಗೋಪಾಲ ರೆಡ್ಡಿ ಅವಿರೋಧ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿಯಮಿತದ 13 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ನೇತೃತ್ವದಲ್ಲಿ 10 ಮಂದಿ ನಿರ್ದೇಶಕರಾಗಿ ಆಯ್ಕೆಯಾಗುವುದರೊಂದಿಗೆ ಡಿಸಿಸಿ ಬ್ಯಾಂಕನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತ್ತೆ ತನ್ನ ತೆಕ್ಕೆಗೆ ಪಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕೇವಲ 3 ಸ್ಥಾನ ಮಾತ್ರ ಗೆಲ್ಲಲು ಶಕ್ತರಾಗಿದ್ದಾರೆ.

ಜಿಲ್ಲಾ ಕೇಂದ್ರ ಸಹಕರ ಬ್ಯಾಂಕ್‌ ನಿರ್ದೇಶಕರ ಮಂಡಳಿಯ 13 ಸ್ಥಾನಗಳಿಗೆ ಐದು ವರ್ಷದ ಅವಧಿಗೆ ಗುರುವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಗರದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 13 ಸದಸ್ಯರ ಪೈಕಿ 11 ಜನ ಚುನಾವಣೆಯಲ್ಲಿ ಗೆದ್ದರೆ, ಜೆ.ಆರ್.ಷಣ್ಮುಖಪ್ಪ ಹಾಗೂ ವೇಣುಗೋಪಾಲ ರೆಡ್ಡಿ ಅವಿರೋಧ ಆಯ್ಕೆಯಾಗಿದ್ದಾರೆ.

ಎ ವರ್ಗದ ದಾವಣಗೆರೆ ತಾಲೂಕು ಭಾಗ-1 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಡೆಲಿಗೇಟರ್‌ಗಳ ಚುನಾವಣಾ ಕ್ಷೇತ್ರದಿಂದ ಬಿ.ಶೇಖರಪ್ಪ, ದಾವಣಗೆರೆ ತಾಲೂಕು-2ಕ್ಕೆ ಬಿ.ಕರಿಬಸಪ್ಪ, ಹರಿಹರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಡೆಲಿಗೇಟರುಗಳ ಚುನಾವಣಾ ಕ್ಷೇತ್ರದಿಂದ ಡಿ.ಕುಮಾರ, ಚನ್ನಗಿರಿ ತಾಲೂಕು ಭಾಗ-1ರಿಂದ ಜಿ.ಎನ್.ಸ್ವಾಮಿ, ಚನ್ನಗಿರಿ ಭಾಗ-2ರಿಂದ ಜಿ.ಎಸ್.ಸಂತೋಷ್‌, ಹೊನ್ನಾಳಿ ತಾಲೂಕಿನಿಂದ ಡಿ.ಎಸ್‌.ಸುರೇಂದ್ರ, ನ್ಯಾಮತಿ ತಾಲೂಕಿನಿಂದ ಡಿ.ಜಿ.ವಿಶ್ವನಾಥ ಆಯ್ಕೆಯಾಗಿದ್ದಾರೆ.

ಸಿ ವರ್ಗ ದಾವಣಗೆರೆ ಜಿಲ್ಲೆ ಪಟ್ಟಣ ಸಹಕಾರ ಬ್ಯಾಂಕ್‌ಗಳು, ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಕೃಷಿ ಅಭಿವೃದ್ಧಿ ಸಹಕಾರಿ ಬ್ಯಾಂಕ್ ಗಳ ಡೆಲಿಗೇಟರ್‌ಗಳ ಕ್ಷೇತ್ರದಿಂದ ಕೋಗುಂಡಿ ಬಕ್ಕೇಶಪ್ಪ, ಡಿ ವರ್ಗ ಭಾಗ-1 ಹಾಲು ಉತ್ಪಾದಕರ ಸಹಕಾರ ಸಂಘಗಘಳ ಡೆಲಿಗೇಟುಗಳ ಕ್ಷೇತ್ರದಿಂದ ಸುರೇಶ ಕೆಂಚಮ್ಮನಹಳ್ಳಿ, ಡಿ ವರ್ಗ ಭಾಗ-2 ಹಾಲು ಉತ್ಪಾದಕರ ಸಹಕಾರ ಸಂಘಗಳ ಡೆಲಿಗೇಟುಗಳ ಕ್ಷೇತ್ರದಿಂದ ಎಚ್‌.ಕೆ.ಬಸಪ್ಪ, ಇ ವರ್ಗದಿಂದ ದಾವಣಗೆರೆ ಜಿಲ್ಲೆ ಇತರೆ ಸಹಕಾರ ಸಂಘಗಳ ಡೆಲಿಗೇಟರ್‌ಗಳ ಚುನಾವಣಾ ಕ್ಷೇತ್ರದಿಂದ ಮುದೇಗೌಡ್ರ ಗಿರೀಶ ಜಯ ಸಾಧಿಸಿದ್ದಾರೆ. ದಾವಣಗೆರೆ ‘ಬಿ’ ವರ್ಗದಿಂದ ಜೆ.ಆರ್.ಷಣ್ಮುಖಪ್ಪ ಹಾಗೂ ವೇಣುಗೋಪಾಲ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಿ.ನಜ್ಮಾ ತಿಳಿಸಿದ್ದಾರೆ.

..........................

ಎಸ್ಸೆಸ್ಸೆಂ ಸಾರಥ್ಯದಲ್ಲಿ ಗೆದ್ದ 10 ನಿರ್ದೇಶಕರು

ಕಾಂಗ್ರೆಸ್ ಬೆಂಬಲಿತ ದಾವಣಗೆರೆ ‘ಎ’ ವರ್ಗ ಭಾಗ-2 ಬಿ.ಕರಿಬಸಪ್ಪ, ಹರಿಹರ ‘ಎ’ವರ್ಗ ಡಿ.ಕುಮಾರ್, ಚನ್ನಗಿರಿ ‘ಎ’ ವರ್ಗ ಭಾಗ 2 ಜಿ.ಎಸ್.ಸಂತೋಷ್, ಹೊನ್ನಾಳಿ ಭಾಗ-1 ಡಿ.ಎಸ್.ಸುರೇಂದ್ರ, ಭಾಗ-2 ಡಿ.ಜೆ.ವಿಶ್ವನಾಥ, ದಾವಣಗೆರೆ ‘ಬಿ’ ವರ್ಗ ಜೆ.ಆರ್.ಷಣ್ಮುಖಪ್ಪ (ಅವಿರೋಧ), ದಾವಣಗೆರೆ ‘ಸಿ’ ವರ್ಗ ಕೋಗುಂಡಿ ಬಕ್ಕೇಶಪ್ಪ, ದಾವಣಗೆರೆ ಜಿಲ್ಲಾ ‘ಇ’ ವರ್ಗದಿಂದ ಮುದೇಗೌಡ್ರ ಗಿರೀಶ, ದಾವಣಗೆರೆ, ಜಗಳೂರು, ಹರಿಹರ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಸುರೇಶ್ ಕೆಂಚಮ್ಮನಹಳ್ಳಿ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಎಚ್.ಕೆ.ಬಸಪ್ಪ ಕಂಚುಗಾರನಹಳ್ಳಿ ಚುನಾಯಿತರಾಗಿರುತ್ತಾರೆ. ಆಯ್ಕೆಯಾದ ಎಲ್ಲಾ ನಿರ್ದೇಶಕರ ಹಾಗೂ ಮತ ಚಲಾಯಿಸಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯಲು ಸಹಕರಿಸಿದ ಎಲ್ಲಾ ಸಹಕಾರಿ ಬಂಧುಗಳು, ಸಹಕಾರ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಮಾಯ ಕೊಂಡ ಕೆ.ಎಸ್.ಬಸವಂತಪ್ಪ, ಹೊನ್ನಾಳಿ ಡಿ.ಜಿ.ಶಾಂತನಗೌಡ, ಚನ್ನಗಿರಿ ಶಿವಗಂಗಾ ವಿ. ಬಸವರಾಜ್, ಜಗಳೂರು ಬಿ.ದೇವೆಂದ್ರಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದ್ದಾರೆ.................

ಕ್ಯಾಪ್ಷನ್,

25ಕೆಡಿವಿಜಿ10-ದಾವಣಗೆರೆ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ಬೆಂಬಲಿಗರಿಗೆ ಸೂಚನೆ ನೀಡುತ್ತಿರುವುದು.

.........

25ಕೆಡಿವಿಜಿ11-ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ.