ಜಿಲ್ಲಾ ಸಹಕಾರ ಯೂನಿಯನ್‌: 14 ಸ್ಥಾನಕ್ಕೆ ಅವಿರೋಧ ಆಯ್ಕೆ

| Published : Jun 23 2024, 02:04 AM IST

ಜಿಲ್ಲಾ ಸಹಕಾರ ಯೂನಿಯನ್‌: 14 ಸ್ಥಾನಕ್ಕೆ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಬಾವಿ ಶಾಸಕ ಹಾಗೂ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಜೂ. 28 ರಂದು ನಡೆಯಬೇಕಿದ್ದ ಜಿಲ್ಲಾ ಸಹಕಾರ ಯೂನಿಯನ್‌ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ 14 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅರಭಾವಿ ಶಾಸಕ ಹಾಗೂ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಜೂ. 28 ರಂದು ನಡೆಯಬೇಕಿದ್ದ ಜಿಲ್ಲಾ ಸಹಕಾರ ಯೂನಿಯನ್‌ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ 14 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ.

ಒಟ್ಟು 16 ಸ್ಥಾನಗಳಿಗೆ 26 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರಗಳನ್ನು ಹಿಂಪಡೆಯುವ ಕಡೆಯ ದಿನವಾದ ಶನಿವಾರ 7 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದರಿಂದ 14 ಸ್ಥಾನಗಳಿಗೆ ಅವಿರೋಧವಾಗಿ ನಡೆಯಿತು. ಉಳಿದ 2 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದ್ದು, ಸವದತ್ತಿ ಹಾಗೂ ರಾಮದುರ್ಗ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರದಿಂದ ಚುನಾವಣೆ ನಡೆಯಲಿದೆ.

ಅವಿರೋಧ ಆಯ್ಕೆಯಾದವರು:

ಬೆಳಗಾವಿ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಬೆಂಡಿಗೇರಿಯ ಸಂತೋಷ ಶಿವಲಿಂಗಪ್ಪ ಅಂಗಡಿ, ಖಾನಾಪೂರ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಇಟಗಿಯ ಸಂಜೀವ ಸದೆಪ್ಪ ಸೋನಪ್ಪನ್ನವರ, ಹುಕ್ಕೇರಿ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಪರಕನಟ್ಟಿಯ ಬಸವರಾಜ ಸಿದ್ದಪ್ಪ ಸುಲ್ತಾನಪೂರಿ, ಬೈಲಹೊಂಗಲ ಹಾಗೂ ಕಿತ್ತೂರ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಮದನಭಾವಿಯ ಶಂಕರಗೌಡ ಫಕೀರಗೌಡ ದೊಡ್ಡಗೌಡರ, ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ತುಕ್ಕಾನಟ್ಟಿಯ ಶಿವಪ್ಪ ಯಲ್ಲಪ್ಪ ಮರ್ದಿ, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಚಿಕ್ಕೋಡಿಯ ಜಗದೀಶ ಮಲ್ಲಿಕಾರ್ಜುನ ಕವಟಗಿಮಠ, ರಾಯಬಾಗ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಕಂಕಣವಾಡಿಯ ಲಕ್ಷ್ಮೀಕಾಂತ ಮುರಾರರಾವ ದೇಸಾಯಿ, ಅಥಣಿ ಹಾಗೂ ಕಾಗವಾಡ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಹುಲಗಬಾಳಿಯ ಶಂಕರಗೌಡ ರಾಮಗೌಡ ಪಾಟೀಲ, ಪಟ್ಟಣ ಸಹಕಾರ ಬ್ಯಾಂಕ್‍ಗಳ ಕ್ಷೇತ್ರದಿಂದ ಬೆಳಗಾವಿಯ ಬಾಳಪ್ಪ ಬಸಪ್ಪ ಕಗ್ಗಣಗಿ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಮೆಳವಂಕಿಯ ಬಸಗೌಡ ದುಂಡನಗೌಡ ಪಾಟೀಲ, ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಕ್ಷೇತ್ರದಿಂದ ಉಮೇಶ ಬಸನಗೌಡ ಪಾಟೀಲ, ಪತ್ತಿನ ಸಹಕಾರ ಸಂಘಗಳ ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಮೂಡಲಗಿಯ ವರ್ಧಮಾನ ಗುಂಡಪ್ಪ ಬೋಳಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಹೊಸೂರಿನ ಈಶ್ವರಚಂದ್ರ ಬಸಪ್ಪ ಇಂಗಳಗಿ, ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಹಳ್ಳೂರಿನ ಬಸಪ್ಪ ಗುರುಪಾದಪ್ಪ ಸಂತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸವದತ್ತಿ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಬಸನಗೌಡ ವೀರನಗೌಡ ಪಾಟೀಲ, ಮಲ್ಲನಗೌಡ ಚನ್ನಪ್ಪ ಗೌಡತಿ, ಸುರೇಶ ಭೀಮಪ್ಪ ಮ್ಯಾಕಲ್ ಮತ್ತು ರಾಮದುರ್ಗ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ನಿಂಗಪ್ಪ ಭೀಮರಾಯಪ್ಪ ದಂಡಿನದುರ್ಗಿ ಮತ್ತು ನಿಂಗಪ್ಪ ಶಂಕರೆಪ್ಪ ಚಿಂಚಲಿ ಅವರು ಕಣದಲ್ಲಿದ್ದು, ಸವದತ್ತಿ ಮತ್ತು ರಾಮದುರ್ಗ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ರಿಟರ್ನಿಂಗ್‌ ಅಧಿಕಾರಿ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜೀತ ಶಿರಹಟ್ಟಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲೆಯ ಸಚಿವರು, ಶಾಸಕರು ಹಾಗೂ ಎಲ್ಲ ಸಹಕಾರಿಗಳ ಸಹಕಾರದಿಂದ ಜಿಲ್ಲಾ ಸಹಕಾರ ಯೂನಿಯನ್‍ಗೆ ಆಡಳಿತ ಮಂಡಳಿಗೆ ಎರಡು ಸ್ಥಾನಗಳು ಹೊರತುಪಡಿಸಿ ಉಳಿದ 14 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಅದಕ್ಕಾಗಿ ಎಲ್ಲ ಮಹನೀಯರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸಹಕಾರಿ ತತ್ವದ ಮೇಲೆ ನಂಬಿಕೆಯನ್ನಿಟ್ಟು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಶ್ರಮಿಸಿರುವ ಜಿಲ್ಲೆಯ ಯಾವತ್ತೂ ಸಹಕಾರಿಗಳಿಗೆ ಆಭಾರಿಯಾಗಿರುವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಈ ಯೂನಿಯನ್‍ಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಹಕಾರ ರಂಗದ ಅಭಿವೃದ್ದಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ.

- ಬಾಲಚಂದ್ರ ಜಾರಕಿಹೊಳಿ

ಶಾಸಕರು ಹಾಗೂ ಬೆಮುಲ್ ಅಧ್ಯಕ್ಷರು.