ಡೆಂಘೀ ಕುರಿತು ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಫೌಜಿಯಾ ಚಾಲನೆ

| Published : Jul 20 2024, 12:52 AM IST

ಸಾರಾಂಶ

ಪ್ರತಿಯೊಂದು ಮನೆ ಮನೆಗಳಿಗೆ ಭೇಟಿ ನೀಡಿ ಬ್ಯಾರಲ್, ಹಾಗೂ ನೀರಿನ ಮಾದರಿಗಳ ನೀರುಗಳನ್ನು ಪರಿಶೀಲಿಸಿದರು. ನೀರನ್ನು ತೊಟ್ಟೆಯಲ್ಲಿ ಅಥವಾ ಬ್ಯಾರಲ್‍ಗಳಲ್ಲಿ ತೆರೆದು ಇಡುವುದರಿಂದ ಈಡಿಸ್ ಸೊಳ್ಳೆ ಮೊಟ್ಟೆ ಇಟ್ಟು ತನ್ನ ಸಂತತಿ ಉತ್ಪತ್ತಿಯಾಗಿಸುತ್ತದೆ ಎಂದು ಡಿಸಿ ಫೌಜಿಯಾ ತರನ್ನುಮ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು, ಕಲಬುರಗಿ ಡೆಂಘೀ ವಿರೋಧ ಮಾಸಾಚರಣೆ 2024 ‘ಪ್ರತಿ ಶುಕ್ರವಾರ’ ನಡೆಯುವ ಡೆಂಘೀ ನಿಯಂತ್ರಣ ಅಭಿಯಾನದ ಅಂಗವಾಗಿ ಡಿಸಿ ಫೌಜಿಯಾ ತರನ್ನುಮ್‌ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.

ಶುಕ್ರವಾರ ನಗರದ ಬಸ್ ಡಿಪೋ ನಂ. 3 ಎದುರು ಇರುವ ಡಾ.ಬಿ.ಆರ್. ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಆಯೋಜಿಸಿದ ಅಭಿಯಾನಕ್ಕೆ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಲಾರ್ವಾ ಸಮೀಕ್ಷೆಗೆ ಚಾಲನೆ ನೀಡಿದರು.

ಪ್ರತಿಯೊಂದು ಮನೆ ಮನೆಗಳಿಗೆ ಭೇಟಿ ನೀಡಿ ಬ್ಯಾರಲ್, ಹಾಗೂ ನೀರಿನ ಮಾದರಿಗಳ ನೀರುಗಳನ್ನು ಪರಿಶೀಲಿಸಿದರು. ನೀರನ್ನು ತೊಟ್ಟೆಯಲ್ಲಿ ಅಥವಾ ಬ್ಯಾರಲ್‍ಗಳಲ್ಲಿ ತೆರೆದು ಇಡುವುದರಿಂದ ಈಡಿಸ್ ಸೊಳ್ಳೆ ಮೊಟ್ಟೆ ಇಟ್ಟು ತನ್ನ ಸಂತತಿ ಉತ್ಪತ್ತಿಯಾಗಿಸುತ್ತದೆ ಎಂದು ತಿಳಿಸಿದರು.

ಪ್ರತಿ ಡೆಂಘೀ ಪ್ರಕರಣಗಳ ಮನೆಯ ಒಳಗೆ ಧೂಮಿಕರಣ ಮಾಡಿಸಲಾಗುತ್ತಿದೆ. ಮನೆ ಮನೆ ಜ್ವರದ ಸಮೀಕ್ಷೆ ಮಾಡಿ ಪ್ರಾಥಮಿಕ ಹಂತದಲ್ಲೇ ಕಂಡುಕೊಳ್ಳಲಾಗುತ್ತಿದೆ ಎಂದು ಡಿವಿವಿಡಿಸಿಪಿ ಡಾ. ಬಸವರಾಜ ಗುಳಗಿ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದರು.

ತಾಲೂಕಾ ಆರೋಗ್ಯಾಧಿಕಾರಿ ಡಾ. ಮಾರುತಿ ಕಾಂಬಳೆ, ನಗರ ಆರೋಗ್ಯಾಧಿಕಾರಿ. ಡಾ.ಬಾಬುರಾವ ಚವ್ಹಾಣ, ಡಾ. ವೀಣಾ ಪಾಟೀಲ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೋಡ, ಹಿರಿಯ ಪ್ರಾಯೋಗ ಶಾಲೆ ತಾಂತ್ರಜ್ಞ ಅಧಿಕಾರಿ ಚಂದ್ರಕಾಂತ ಏರಿ, ಕಾರ್ಣಿಕ ಕೋರೆ, ಶಾಂತಾ ಕಾಶಪ್ಪ, ಗುಲಾಮ್ಮ್ ಹಾಗೂ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.