ಸಾರಾಂಶ
- ಅ.31ರಂದು 8 ವರದಿಗಾರರಿಗೆ ಮಾಧ್ಯಮ ಪ್ರಶಸ್ತಿ, 8 ಹಿರಿಯರಿಗೆ ಗೌರವ: ಅಧ್ಯಕ್ಷ ನಾಗರಾಜ ಬಡದಾಳ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಕೊಡಮಾಡುವ ವಾರ್ಷಿಕ ಮಾಧ್ಯಮ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಮಾಧ್ಯಮ ರಂಗದಲ್ಲಿ ಸೇವೆ ಸಲ್ಲಿಸಿದ 8 ಪತ್ರಕರ್ತರು ಭಾಜನರಾಗಿದ್ದಾರೆ.ಪ್ರಶಸ್ತಿ, ಸನ್ಮಾನಕ್ಕೆ ಆಯ್ಕೆಯಾದ ಎಲ್ಲರಿಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಆ.31ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ ತಿಳಿಸಿದ್ದಾರೆ.
ವರದಿಗಾರರು:ವಾರ್ಷಿಕ ಮಾಧ್ಯಮ ಪ್ರಶಸ್ತಿ-2024ಕ್ಕೆ ವಿಜಯವಾಣಿಯ ಹಿರಿಯ ಉಪ ಸಂಪಾದಕ ಗಣೇಶ ಕಮಲಾಪುರ, ವಿಜಯ ಕರ್ನಾಟಕ ವರದಿಗಾರ ವಿನಾಯಕ ನಾಯ್ಕ ಪೂಜಾರಿ, ಕನ್ನಡ ಭಾರತಿ ದಿನಪತ್ರಿಕೆ ವರದಿಗಾರ್ತಿ ದೇವಿಕಾ ಸುನೀಲ್, ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಕೆ.ಆರ್.ಪುನೀತ್ ಆಪ್ತಿ, ಒನ್ ಕನ್ನಡ ನ್ಯೂಸ್ ಟಿವಿಯ ವೀಡಿಯೋ ಜರ್ನಲಿಸ್ಟ್ ಬಿ.ಹನುಮಂತ ರಾವ್, ದಾವಣಗೆರೆ ಶಿವ ದಿನಪತ್ರಿಕೆ ಸಂಪಾದಕ ಎಚ್.ನಿಂಗರಾಜ್, ಕನ್ನಡಪ್ರಭ ವರದಿಗಾರ ಚನ್ನಬಸವ ಶೀಲವಂತ್, ಕ್ರಾಂತಿಕೇಸರಿ ದಿನಪತ್ರಿಕೆ ವರದಿಗಾರ್ತಿ ಎ.ಬಿ. ರುದ್ರಮ್ಮ ಅವರನ್ನು ಮಾಧ್ಯಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಿರಿಯ ಪತ್ರಕರ್ತರು:ದಾವಣಗೆರೆ ಪತ್ರಿಕೋದ್ಯಮದಲ್ಲಿ ದಶಕಗಳ ಕಾಲ ಕಾರ್ಯನಿರ್ವಹಿಸಿ ಸೇವೆ ಸಲ್ಲಿಸಿದ 8 ಹಿರಿಯ ಪತ್ರಕರ್ತರಿಗೂ ಈ ಬಾರಿ ಜೀವಮಾನ ಸಾಧನೆಗಾಗಿ ಗೌರವ ಸನ್ಮಾನ ನಡೆಯಲಿದೆ. ಸನ್ಮಾನಕ್ಕೆ ಇಂದಿನ ಸುದ್ದಿ ದಿನಪತ್ರಿಕೆಯ ಸಂಪಾದಕ ವೀರಪ್ಪ ಎಂ. ಬಾವಿ, ಉದಯವಾಣಿ ನಿವೃತ್ತ ಮುಖ್ಯ ವರದಿಗಾರ ಎನ್.ಆರ್. ನಟರಾಜ, ಜನಮಿಡಿತ ಸಂಪಾದಕ ಜಿ.ಎಂ.ಆರ್. ಆರಾಧ್ಯ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ನಿವೃತ್ತ ಹಿರಿಯ ವರದಿಗಾರ ಎಂ. ಶಶಿಕುಮಾರ, ಟೈಮ್ಸ್ ಆಫ್ ಇಂಡಿಯಾ ನಿವೃತ್ತ ಹಿರಿಯ ವರದಿಗಾರ ಎಸ್.ಎ.ಗಂಗರಾಜು, ಮಲ್ನಾಡವಾಣಿ ಹಿರಿಯ ವರದಿಗಾರ ಐ.ಗುರುಶಾಂತಪ್ಪ, ಮಲ್ನಾಡವಾಣಿ ಹಿರಿಯ ವರದಿಗಾರ ಬಸವರಾಜ ಐರಣಿ, ಜನತಾವಾಣಿ ನಿವೃತ್ತ ಹಿರಿಯ ವರದಿಗಾರ ಬಕ್ಕೇಶ್ ನಾಗನೂರು ಭಾಜನರಾಗಿದ್ದಾರೆ.
- - --26ಕೆಡಿವಿಜಿ40ಃ: ಗಣೇಶ ಕಮ್ಲಾಪುರ
-26ಕೆಡಿವಿಜಿ41ಃ: ವಿನಾಯಕ ನಾಯ್ಕ ಪೂಜಾರಿ-26ಕೆಡಿವಿಜಿ42ಃ: ದೇವಿಕಾ ಸುನಿಲ್
-26ಕೆಡಿವಿಜಿ43ಃ: ಕೆ.ಆರ್.ಪುನೀತ್ ಆಪ್ತಿ-26ಕೆಡಿವಿಜಿ44ಃ: ಬಿ.ಹನುಮಂತರಾವ್
-B26ಕೆಡಿವಿಜಿ45ಃ: ಎಚ್.ನಿಂಗರಾಜ್-B26ಕೆಡಿವಿಜಿ46ಃ: ಚನ್ನಬಸವ ಶೀಲವಂತ್
-26ಕೆಡಿವಿಜಿ47ಃ: ಎ.ಬಿ. ರುದ್ರಮ್ಮ- - -
* ಹಿರಿಯ ಪತ್ರಕರ್ತರ ಫೊಟೋಗಳು...-26ಕೆಡಿವಿಜಿ48ಃ: ವೀರಪ್ಪ ಎಂ.ಭಾವಿ -26ಕೆಡಿವಿಜಿ49ಃ: ಎನ್.ಆರ್.ನಟರಾಜ -26ಕೆಡಿವಿಜಿ50ಃ: ಜಿ.ಎಂ.ಆರ್.ಆರಾಧ್ಯ -26ಕೆಡಿವಿಜಿ51ಃ: ಎಂ.ಶಶಿಕುಮಾರ -26ಕೆಡಿವಿಜಿ52ಃ: ಎಸ್.ಎ.ಗಂಗರಾಜು -26ಕೆಡಿವಿಜಿ53ಃ: ಐ.ಗುರುಶಾಂತಪ್ಪ-26ಕೆಡಿವಿಜಿ54ಃ: ಬಸವರಾಜ ಐರಣಿ -26ಕೆಡಿವಿಜಿ55ಃ: ಬಕ್ಕೇಶ ನಾಗನೂರು - - -