ದಾವಣಗೆರೆ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ಡಿ.28ರಂದು ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆಯಲಿದೆ ಸಂಘದ ಅಧ್ಯಕ್ಷ ಟಿ.ಪರಮೇಶ ತಿಳಿಸಿದರು.
ದಾವಣಗೆರೆ: ದಾವಣಗೆರೆ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ಡಿ.28ರಂದು ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆಯಲಿದೆ ಸಂಘದ ಅಧ್ಯಕ್ಷ ಟಿ.ಪರಮೇಶ ತಿಳಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ 5ಕ್ಕೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನಿಧ್ಯದಲ್ಲಿ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ ಎಂದರು.ಜೆ.ಎಚ್.ಪಟೇಲ್ ಕಾಲೇಜಿನ ಕಾರ್ಯದರ್ಶಿ, ಕಾಂಗ್ರೆಸ್ ಮುಖಂಡ ಮುಸ್ತಾಫ್, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಯುವ ಉದ್ಯಮಿ ಶ್ರೀನಿವಾಸ ಟಿ.ದಾಸಕರಿಯಪ್ಪ ಸಂಘದ ಕಲಾವಿದರಿಗೆ ಗುರುತಿನ ಚೀಟಿ ವಿತರಿಸುವರು. ಭಾರತಿ ಆರ್ಕೆಸ್ಟ್ರಾದ ಹಿರಿಯ ಕಲಾವಿದೆ ಮೀನಾ ಆನಂದ ಕುಮಾರ, ನ್ಯೂ ಟಾಪ್ ಮೆಲೋಡಿ ಆರ್ಕೆಸ್ಟ್ರಾದ ಆರ್.ಆರ್.ತಿಪ್ಪೇಸ್ವಾಮಿ, ಶ್ರೀ ಗುರು ವಾದ್ಯವೃಂದದ ಚಿಂದೋಡಿ ಶಂಭುಲಿಂಗಪ್ಪ, ಗಾಯಕ ಎನ್.ಗಣೇಶ್‌ರನ್ನು ಸಂಘದಿಂದ ಸನ್ಮಾನಿಸಲಾಗುವುದು ಎಂದು ಹೇಳಿದರು.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ, ಕಾಂಗ್ರೆಸ್ ಮುಖಂಡರಾದ ಎ.ನಾಗರಾಜ, ಪಾಮೇನಹಳ್ಳಿ ನಾಗರಾಜ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಚಿನ್ನಾಭರವಣ ವರ್ತಕ ವಾಸುದೇವ ರಾಯ್ಕರ್, ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಭೈರವೇಶ್ವರ ಟ್ರಾನ್ಸಪೋರ್ಟ್‌ನ ಎಂ.ಆನಂದ್, ರಾಣೆಬೆನ್ನೂರಿನ ವಕೀಲ, ಕಲಾವಿದ ನಾಗರಾಜ ಕುಡುಪಲ್ಲಿ, ಆರ್.ಲಕ್ಷ್ಮಣ, ಎಲ್.ಎಂ.ಎಚ್.ಸಾಗರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ವಿವಿಧ ಸಂಘ-ಸಂಸ್ಥೆ-ಸಂಘಟನೆಗಳ ಪದಾಧಿಕಾರಿಗಳು, ಜನ ಪ್ರತಿನಿಧಿಗಳು, ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವರು. ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಆರ್ಕೆಸ್ಟ್ರಾ ಕಲಾವಿದರಿದ್ದೇವೆ. ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ರಂಗಮಂದಿರದ ಅವಶ್ಯಕತೆ ಇದೆ. ಆರ್ಕೆಸ್ಟ್ರಾ ಕಲಾವಿದರಿಗೆ ಸರ್ಕಾರದಿಂದ ವಸತಿ ಕಲ್ಪಿಸುವಂತೆ ಸಂಘದ ಮೂಲಕ ಮನವಿ ಅರ್ಪಿಸಿ, ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದ್ದೇವೆ ಎಂದರು.
ಸಂಘದ ಪದಾಧಿಕಾರಿಗಳು, ಕಲಾವಿದರಾದ ಶೋಭಾ, ರೂಪಾ, ಕವಿತಾ, ಧರ್ಮರಾಜ, ಮಂಜುನಾಥ್, ಸುನೀತಾ, ಸೌಮ್ಯ, ಇಂದುಶ್ರೀ, ಸುನೀತಾ ಇತರರು ಇದ್ದರು.