ನಾಳೆ ಜಿಲ್ಲಾ ಸೌಹಾರ್ದ ಸಹಕಾರಿ ಸಮ್ಮೇಳನ: ಬಿ.ಟಿ.ಗುರುರಾಜ್

| Published : Jan 10 2025, 12:48 AM IST

ನಾಳೆ ಜಿಲ್ಲಾ ಸೌಹಾರ್ದ ಸಹಕಾರಿ ಸಮ್ಮೇಳನ: ಬಿ.ಟಿ.ಗುರುರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಒಕ್ಕೂಟದ ಆಡಳಿತ ಮಂಡಳಿಯ ನಿರ್ಧಾರವೇ ಅಂತಿಮವಾಗಿರುತ್ತದೆ. ಸೌಹಾರ್ದ ಸಹಕಾರ ಸಂಘಗಳು ನೋಂದಣಿಯಾಗುವ ಸಮಯದಲ್ಲಿ ಆಗುವ ತೊಂದರೆಗಳು, ಆರ್ಥಿಕ ಸಹಾಯ ಹಾಗೂ ಬಹುಮುಖ್ಯವಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ಸದಸ್ಯತ್ವ ಪಡೆಯುವ ಬಗ್ಗೆ ಬಹಳ ದಿನಗಳಿಂದ ಸತತ ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿರಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಸೌಹಾರ್ದ ಸಹಕಾರ ಸಂಘಗಳ ಒಕ್ಕೂಟದ ಉದ್ಘಾಟನಾ ಸಮಾರಂಭ ಮತ್ತು ಜಿಲ್ಲಾ ಸೌಹಾರ್ದ ಸಹಕಾರಿ ಸಮ್ಮೇಳನ ಜ.11ರಂದು ಬೆಳಗ್ಗೆ 11 ಗಂಟೆಗೆ ನಗರದ ರೈತ ಸಭಾಂಗಣದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಟಿ.ಗುರುರಾಜ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ನೆರವೇರಿಸುವರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಶಯ ನುಡಿಗಳನ್ನಾಡುವರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ಅಧ್ಯಕ್ಷ ಬಿ.ನಂಜನಗೌಡ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವರು ಎಂದರು.

ಕ್ಯಾಲೆಂಡರ್ ಅನ್ನು ಶಾಸಕ ಪಿ.ರವಿಕುಮಾರ್ ಬಿಡುಗಡೆ ಮಾಡುವರು. ಸಹಕಾರಿಗಳಿಗೆ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸನ್ಮಾನ ಮಾಡುವರರು. ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ ಸಹಕಾರಿಗಳಿಗೆ ವಿಮೆಯ ಅನುಷ್ಠಾನವನ್ನು ಬಿಡುಗಡೆಗೊಳಿಸುವರು ಎಂದರು.

ಈ ಸಮ್ಮೇಳನದಲ್ಲಿ ಸಹಕಾರ ಕ್ಷೇತ್ರದಲ್ಲಿ ಬಳಸುವ ಪುಸ್ತಕಗಳು, ಗಣಕ ತಂತ್ರಜ್ಞಾನ, ಪಿಗ್ಮಿ ಮಿಷನ್, ಪಿಗ್ಮಿ ರೋಲ್‌ಗಳಿಗೆ ಸಂಬಂಧಿಸಿದ ಮಳಿಗೆಗಳು ಇರುತ್ತವೆ. ಅತಿ ಕಡಿಮೆ ಬಡ್ಡಿ ದರದಲ್ಲಿ ಸೌಹಾರ್ದ ಸಹಕಾರಿ ಸಂಘಗಳ ಮೂಲಕ ಸಾಲ ಸೌಲಭ್ಯ ದೊರಕಿಸಿಕೊಡಲಾಗುವುದು ಎಂದರು.

ಒಕ್ಕೂಟದ ಆಡಳಿತ ಮಂಡಳಿಯ ನಿರ್ಧಾರವೇ ಅಂತಿಮವಾಗಿರುತ್ತದೆ. ಸೌಹಾರ್ದ ಸಹಕಾರ ಸಂಘಗಳು ನೋಂದಣಿಯಾಗುವ ಸಮಯದಲ್ಲಿ ಆಗುವ ತೊಂದರೆಗಳು, ಆರ್ಥಿಕ ಸಹಾಯ ಹಾಗೂ ಬಹುಮುಖ್ಯವಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ಸದಸ್ಯತ್ವ ಪಡೆಯುವ ಬಗ್ಗೆ ಬಹಳ ದಿನಗಳಿಂದ ಸತತ ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿರಲಿಲ್ಲ. ಸೌಹಾರ್ದ ಸಹಕಾರಿಗಳು ಸಂಘಟಿತರಾಗದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ರಮೇಶ್, ಎಚ್.ಪಿ.ಪ್ರವೀಣ್, ಎಸ್.ಸಿದ್ದಲಿಂಗಯ್ಯ ಇತರರಿದ್ದರು.