ರಿಪ್ಪನ್‌ಪೇಟೆಗೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ, ಪರಿಶೀಲನೆ

| Published : Jul 18 2024, 01:43 AM IST

ರಿಪ್ಪನ್‌ಪೇಟೆಗೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ, ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ರಿಪ್ಪನಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎನ್.ನಟರಾಜ್ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಭೇಟಿ ನೀಡಿ ಪಟ್ಟಣ ಸುತ್ತಮುತ್ತಲ ಬಡಾವಣೆಗಳಲ್ಲಿ ಪರ್ಯಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ:

ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಡೆಂಘೀ ಪ್ರಕರಣದೊಂದಿಗೆ ಒಂದು ವಾರದಲ್ಲಿ ಎರಡು ಬಲಿ ಪಡೆದಿರುವ ರಿಪ್ಪನ್‍ಪೇಟೆಗೆ ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎನ್.ನಟರಾಜ್ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪಕಸಬಿ ಭೇಟಿ ನೀಡಿ ಪಟ್ಟಣ ಸುತ್ತಮುತ್ತಲ ಬಡಾವಣೆಗಳಲ್ಲಿ ಪರಿಶೀಲನೆ ನಡೆಸಿದರು.

ಪಟ್ಟಣದ ಗಾಂಧಿನಗರ, ಚೌಡೇಶ್ವರಿಬೀದಿ, ಸೇರಿದಂತೆ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮನೆಯ ಸುತ್ತಮುತ್ತ ಸ್ವಚ್ಚವಾಗಿಟ್ಟುಕೊಂಡು ಸೋಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳಲು ತಿಳಿಸಿ ಮುನ್ನಚ್ಚರಿಕಾ ಕ್ರಮದ ಬಗ್ಗೆ ಪಂಚಾಯಿತಿ ಆಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಕೈಗೊಳ್ಳುವಂತೆ ತಿಳಿಸಿದರು.

ಇಲಾಖೆ ಸಿಬ್ಬಂದಿವರ್ಗ ಲಾರ್ವ ಸಮೀಕ್ಷೆ ಮತ್ತು ಫಾಗಿಂಗ್ ಮಾಡಲು ಮನೆಗಳ ಬಳಿ ಬಂದಾಗ ಸಹಕರಿಸುವಂತೆ ಕೋರಿದರು.

ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಸುರೇಶ್, ಜಿಲ್ಲಾ ಅರೋಗ್ಯ ಮೇಲ್ವಿಚಾರಣಾಧಿಕಾರಿ ರಮೇಶ್ ಅಚಾರ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಂಜನೇಯ, ಗ್ರಾಪಂ ಆಭಿವೃದ್ಧಿ ಅಧಿಕಾರಿ ಮಧುಸೂದನ್, ಹಿರಿಯ ಆರೋಗ್ಯ ಕಾರ್ಯಕರ್ತೆ ಗಾಯಿತ್ರಿ, ಇನ್ನಿತರ ಅಸ್ಪತ್ರೆಯ ಸಿಬ್ಬಂದಿವರ್ಗ ಹಾಜರಿದ್ದರು.*ಮಹಾಮಾರಿ ಡೆಂಘೀಗೆ ಯುವಕ ಬಲಿ:

ಪಟ್ಟಣದ ವ್ಯಾಪ್ತಿಯಲ್ಲಿ ಡೆಂಘೀ ಜ್ವರ ಮರಣಮೃದಂಗ ಬಾರಿಸುತ್ತಿದ್ದು ಇದೇ ವಾರದಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿದೆ. ಇಲ್ಲಿನ ಹೊಸನಗರ ರಸ್ತೆ ನಿವಾಸಿ ಆಶಿಕ್ ರೆಸೂಲ್ (27) ಮೃತಪಟ್ಟ ದುರ್ಧೈವಿಯಾಗಿದ್ದಾನೆ. ಭಾನುವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅಶಿಕ ರಸೂಲ್‍ಗೆ ಶಿವಮೊಗ್ಗ ನಂಜಪ್ಪ ಅಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ