ಸಾರಾಂಶ
District In-charge Minister Darshanapur district tour
ಕನ್ನಡಪ್ರಭ ವಾರ್ತೆ ಯಾದಗಿರಿ
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರು ಆಗಸ್ಟ್ 15, ಹಾಗೂ ಆಗಸ್ಟ್ 16 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಪ್ರವಾಸವು ಕೆಳಗಿನಂತಿದೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಶ್ರೀಶೈಲ ಜಿ. ಬಿದರಕುಂದಿ ಅವರು ತಿಳಿಸಿದ್ದಾರೆ.ಆಗಸ್ಟ್ 15 ರಂದು ಬೆಳಿಗ್ಗೆ 7 ಗಂಟೆಗೆ ಕಲಬುರಗಿಯಿಂದ ನಿರ್ಗಮಿಸಿ ಬೆಳಿಗ್ಗೆ 8.30 ಗಂಟೆಗೆ ಆಗಮಿಸಿ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಬೆಳಿಗ್ಗೆ 11 ಗಂಟೆಗೆ ಯಾದಗಿರಿಯಿಂದ ನಿರ್ಗಮಿಸಿ ಬೆಳಿಗ್ಗೆ 11.30 ಗಂಟೆಗೆ ಶಹಾಪೂರ ಆಗಮಿಸಿ ನಗರದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ತದನಂತರ ಸಂಜೆ 5.30 ಗಂಟೆಗೆ ಕಲಬುರಗಿ ಪ್ರಯಾಣ ಬೆಳೆಸುವರು.
ಆಗಸ್ಟ್ 16ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿಯಿಂದ ನಿರ್ಗಮಿಸಿ ಬೆಳಿಗ್ಗೆ 10.30 ಗಂಟೆಗೆ ಆಗಮಿಸಿ ಶಹಾಪೂರ ನಗರದ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಹಾಗೂ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸಂಜೆ 5.30 ಗಂಟೆಗೆ ಕಲಬುರಗಿ ಪ್ರಯಾಣ ಬೆಳೆಸುವರು ಎಂದು ಅವರು ತಿಳಿಸಿದ್ದಾರೆ.------
ಫೋಟೊ: 14ವೈಡಿಆರ್5 : ಶರಣಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಉಸ್ತುವಾರು ಸಚಿವರು, ಯಾದಗಿರಿ.