ಫೆ.11, 12ರಂದು ರಾಣಿಬೆನ್ನೂರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

| Published : Feb 07 2024, 01:50 AM IST

ಫೆ.11, 12ರಂದು ರಾಣಿಬೆನ್ನೂರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಮತ್ತು ತಾಲೂಕು ಕಸಾಪ ವತಿಯಿಂದ ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಫೆ.11 ಮತ್ತು 12ರಂದು ಹಾವೇರಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಜಿಲ್ಲಾ ಮತ್ತು ತಾಲೂಕು ಕಸಾಪ ವತಿಯಿಂದ ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಫೆ.11 ಮತ್ತು 12ರಂದು ಹಾವೇರಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ.

ಫೆ.11ರಂದು ಬೆಳಗ್ಗೆ 7.30ಕ್ಕೆ ಬೆಳಗ್ಗೆ 10ಕ್ಕೆ ಪಾಟೀಲ ಪುಟ್ಟಪ್ಪ-ಕೆ.ಎಫ್. ಪಾಟೀಲ ಸಭಾಮಂಟಪ, ಹುತಾತ್ಮ ಮೆಣಸಿನಹಾಳ ತಿಮ್ಮನಗೌಡರ ಮಹಾದ್ವಾರ, ಎಲ್.ಜಿ. ಹಾವನೂರ ಪ್ರವೇಶದ್ವಾರದ ಬಳಿ ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ರಾಷ್ಟçಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಪರಿಷತ್‌ ಧ್ವಜವನ್ನು ಹಾಗೂ ತಾಲೂಕು ಅಧ್ಯಕ್ಷ ವೀರೇಶ ಜಂಬಗಿ ನಾಡಧ್ವಜಾರೋಹಣ ನೆರವೇರಿಸುವರು.

ತಹಸೀಲ್ದಾರ ಎಚ್.ಎನ್. ಶಿರಹಟ್ಟಿ, ತಾಪಂ ಇಒ ಸುಮಲತಾ ಎಸ್.ಪಿ., ಬಿಇಒ ಎಂ.ಎಚ್. ಪಾಟೀಲ, ನಗರಸಭೆ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಬೆಳಗ್ಗೆ 8ಕ್ಕೆ ನಗರದ ಸಿದ್ಧೇಶ್ವರ ದೇವಸ್ಥಾನದ ಬಳಿಯಿಂದ ಸಮ್ಮೇಳನಾಧ್ಯಕ್ಷ ಜೆ.ಎಂ. ಮಠದ ಅವರ ದಿಬ್ಬಣ ಹೊರಡಲಿದ್ದು ಡಿವೈಎಸ್‌ಪಿ ಡಾ. ಗಿರೀಶ ಭೋಜಣ್ಣನವರ ದಿಬ್ಬಣಕ್ಕೆ ಚಾಲನೆ ನೀಡುವರು.

ಬೆಳಗ್ಗೆ 10ಕ್ಕೆ ನಗರದ ಎಪಿಎಂಸಿ ಸಮುದಾಯ ಭವನದ ನಿಜಶರಣ ಅಂಬಿಗರ ಚೌಡಯ್ಯ-ಹೆಳವನಕಟ್ಟೆ ಗಿರಿಯಮ್ಮ-ಹಾನಗಲ್ಲ ಕುಮಾರ ಶಿವಯೋಗಿಗಳ ಪ್ರಧಾನ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ.

ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಉದ್ಘಾಟಿಸುವರು. ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸುವರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಉಪಸ್ಥಿತರಿರುವರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.

ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ವಿಪ ಸದಸ್ಯರಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್ ವಿವಿಧ ಪುಸ್ತಕ ಬಿಡುಗಡೆಗೊಳಿಸುವರು.

ಚಿಕ್ಕಮಗಳೂರ ಸಾಹಿತಿ ಡಾ. ಎಚ್.ಎಸ್. ಸತ್ಯನಾರಾಯಣ ವಿಶೇಷ ಉಪನ್ಯಾಸ ನೀಡುವರು.

ಸಮ್ಮೇಳನಾಧ್ಯಕ್ಷ, ಹಿರಿಯ ಸಾಹಿತಿ ಜೆ.ಎಂ. ಮಠದ ಅವರಿಂದ ಸಮ್ಮೇಳನಾಧ್ಯಕ್ಷರ ನುಡಿ ಆಡುವರು.

ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ, ನಗರಸಭಾ ಸದಸ್ಯ ಹಾಗೂ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ಮಾಜಿ ಶಾಸಕ, ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಅರುಣಕುಮಾರ ಪೂಜಾರ, ಆರ್. ಶಂಕರ್, ಡಾ. ಬಸವರಾಜ ಕೇಲಗಾರ, ಏಕನಾಥ ಭಾನುವಳ್ಳಿ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಜರುಗುವುದು. 2 ದಿನ ವಿವಿಧ ವಿಷಯಗಳ ಕುರಿತು 9 ಗೋಷ್ಠಿಗಳು ನಡೆಯಲಿವೆ.

ಮಧ್ಯಾಹ್ನ 1ಕ್ಕೆ ಮೊದಲ ಗೋಷ್ಠಿ: ಕರ್ನಾಟಕ ವೈಭವಚರ್ಚೆಯಾಗುವ ವಿಷಯಗಳು: ಕನ್ನಡ ನುಡಿ ಪರಂಪರೆ, ಕರ್ನಾಟಕದ ಐತಿಹಾಸಿಕ ಪರಂಪರೆ, ಕರ್ನಾಟಕ 50 ಸಂಭ್ರಮ-ಸಂದಿಗ್ಧತೆಗಳು, ಮಧ್ಯಾಹ್ನ 2.3ಕ್ಕೆ ಎರಡನೇ ಗೋಷ್ಠಿ: ಜಿಲ್ಲೆಯ ಗತ-ವೈಭವ ಚರ್ಚೆಯಾಗುವ ವಿಷಯಗಳು: ಜಿಲ್ಲೆಯ ಚಳುವಳಿಗಳು, ಜಿಲ್ಲೆಯ ಜಾನಪದ ಪರಂಪರೆ ಮತ್ತು ಸಂಸ್ಕೃತಿ, ಜಿಲ್ಲೆಯ ಧಾರ್ಮಿಕ ಪರಂಪರೆಗಳು, ಜಿಲ್ಲೆಯ ಪ್ರವಾಸಿ ತಾಣಗಳು.ಮಧ್ಯಾಹ್ನ 4.30ಕ್ಕೆ ಮೂರನೇ ಗೋಷ್ಠಿ: ಸಮ್ಮೇಳನಾಧ್ಯಕ್ಷರ ಜೀವನ-ಸಾಧನೆಸಂಜೆ 5ಕ್ಕೆ ನಾಲ್ಕನೇ ಗೋಷ್ಠಿ: ಕವಿಗಳ ಕಲರವಸಂಜೆ 7ರಿಂದ ಸಾಂಸ್ಕೃತಿಕ ಕಲರವಫೆ.12ರಂದು ಬೆಳಗ್ಗೆ 9ಕ್ಕೆ ಐದನೇ ಗೋಷ್ಠಿ: ಚಿಣ್ಣರ ಚಿಲಿಪಿಲಿಬೆಳಗ್ಗೆ 10.30ಕ್ಕೆ ಆರನೇ ಗೋಷ್ಠಿ: ನಾರಿಶಕ್ತಿ-ಧೀಶಕ್ತಿಚರ್ಚೆಯಾಗುವ ವಿಷಯಗಳು: ಪ್ರಾಚೀನ ಕನ್ನಡ ಕಾವ್ಯದ ಸ್ತ್ರೀ ಪಾತ್ರಗಳು-ಆಧುನಿಕ ಬದುಕಿನೊಂದಿಗೆ ಮುಖಾಮುಖಿ, ದೃಶ್ಯಮಾಧ್ಯಮಗಳಲ್ಲಿ ಸ್ತಿಸ್ ಅಪಮೌಲ್ಯೀಕರಣ, ಭ್ರೂಣಹತ್ಯೆ ನೈತಿಕ ಅಧಃಪತನಮಧ್ಯಾಹ್ನ 12ಕ್ಕೆ ಏಳನೇ ಗೋಷ್ಠಿ: ದಮನಿತರ ಅಸ್ಮಿತೆಚರ್ಚೆಯಾಗುವ ವಿಷಯಗಳು: ಶೋಷಣೆ ಮತ್ತು ವಿಮೋಚನೆ, ದಮನಿತ ಶರಣರ ಪರಂಪರೆಮಧ್ಯಾಹ್ನ 1.30ಕ್ಕೆ ಎಂಟನೇ ಗೋಷ್ಠಿ: ವೈವಿಧ್ಯ ಚರ್ಚೆಯಾಗುವ ವಿಷಯಗಳು: ಜಿಲ್ಲೆಯ ಶಾಸನಗಳು ಹಾಗೂ ವಾಸ್ತುಶಿಲ್ಪ, ಹೊಸತಲೆಮಾರಿನ ಸಾಹಿತ್ಯಕ ಆಲೋಚನೆಗಳು, ರಾಜಕೀಯ ಮತ್ತು ಸಾಮಾಜಿಕ ಪರಿವರ್ತನೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ, ನೈತಿಕ ಜಾಗೃತಿ ಮತ್ತು ಯುವಕರು ಮಧ್ಯಾಹ್ನ 3.30ಕ್ಕೆ ಒಂಭತ್ತನೇ ಗೋಷ್ಠಿ: ಕೃಷಿ ಸೌರಭಚರ್ಚೆಯಾಗುವ ವಿಷಯಗಳು: ಆರೋಗ್ಯಯುಕ್ತ ಜೀವನಕ್ಕೆ ಸಾವಯವ ಕೃಷಿ, ಅನ್ನದಾತನ ಅಳಲುಗಳುಸಂಜೆ 4.30ಕ್ಕೆ ಬಹಿರಂಗ ಅಧಿವೇಶನಸಂಜೆ 5.30ಕ್ಕೆ ಸಮಾರೋಪ ಸಮಾರಂಭ ಸಂಜೆ 7ರಿಂದ ಸಾಂಸ್ಕೃತಿಕ ಕಲರವ