ಜಿಲ್ಲಾ ಮಟ್ಟದ ಗೌಡ ಜನಾಂಗಗಳ ಕೇರಂ ಪಂದ್ಯಾಟ ಗೌಡ ಸಮಾಜ ಕಾರುಗುಂದದಲ್ಲಿ ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಗೌಡ ಸಮಾಜ ಕಾರುಗುಂದ ಮತ್ತು ಚೇರಂಬಾಣೆ ಗೌಡ ಯುವ ವೇದಿಕೆ ಕಾರುಗುಂದ ಆಶ್ರಯದಲ್ಲಿ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಗೌಡ ಜನಾಂಗಗಳ ಕೇರಂ ಪಂದ್ಯಾಟ ಗೌಡ ಸಮಾಜ ಕಾರುಗುಂದದಲ್ಲಿ ಆಯೋಜಿಸಲಾಯಿತು.ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹರಪ್ಪನಹಳ್ಳಿ ರವೀಂದ್ರ, ಎಡಿಕೇರಿ ಪ್ರಸನ್ನ ಕುಶಾಲಪ್ಪ, ಕೊಡುಪಾಲು ಎಸ್. ಗಣಪತಿ, ಕಡ್ಲೇರ ತುಳಸಿ ಮೋಹನ್, ಕೇಕಡ ದಿನೇಶ್ ಮತ್ತು ಬೆಳ್ಯನ ಚಂದ್ರಪ್ರಕಾಶ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕಾರ್‍ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು.
ಕ್ರೀಡಾಕೂಟದ ವಿಜೇತರು: ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ಪ್ರಥಮ- ಇಂದ್ರೇಶ್ ಕುದುಕುಳಿ ಮತ್ತು ಡಬಲ್ಸ್ ನಲ್ಲಿ ಪ್ರಥಮ- ಭರತ್ ಕಾವೇರಿ ಮನೆ.ಮಕ್ಕಳ ಡಬಲ್ಸ್ ವಿಭಾಗದಲ್ಲಿ ಪ್ರಥಮ- ಗೌರವ್ ಕುದುಕುಳಿ. ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ-ದ್ರುವ ಸುಳ್ಯಕೋಡಿ.