ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆಯಿತು.

ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಜಯಂತಿ ಹಾಗೂ ಪ್ರಥಮ ದರ್ಜೆ ಸಹಾಯಕರು ದೇಚಮ್ಮ, ಕೊಡಗು ವಿದ್ಯಾಲಯ ಶಾಲೆಯ ಶಿಕ್ಷಕರಾದ ಪೊನ್ನಮ್ಮ, ವಿಸ್ಮಯ ಮತ್ತು ಸಂತ ಜೋಸೆಫರ ಶಾಲೆ ಶಿಕ್ಷಕರಾದ ಆಲೀಸ್ ಹಾಗೂ ಪುಟಾಣಿ ಮಕ್ಕಳಿಂದ ಮಕ್ಕಳ ದಿನಾಚರಣೆಯಲ್ಲಿ ಗಿಡಕ್ಕೆ ನೀರೇರೆಯುವ ಮೂಲಕ ಉದ್ಘಾಟಿಸಲಾಯಿತು.

9-16 ವರ್ಷದ ಮಕ್ಕಳಿಗೆ ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ ನೃತ್ಯ ಹಾಗೂ ವಿಜ್ಞಾನದಲ್ಲಿ ನೂತನ ಆವಿಷ್ಕಾರ 4 ವಿಭಾಗಗಳಲ್ಲಿ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ವಂದನಾರ್ಪಣೆ ಹಾಗೂ ನಿರೂಪಣೆಯನ್ನು ಪೂಜಾ ನಡೆಸಿಕೊಟ್ಟರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ಸಿಬ್ಬಂದಿ ಹರೀಶ್, ದರ್ಶನ್, ಕಾವ್ಯ, ಕೇಶಿನಿ, ಕೃಷ್ಣ. ಗಾಯತ್ರಿ, ನವ್ಯ ಇತರರು ಹಾಜರಿದ್ದರು.

ವಿಜೇತ ಮಕ್ಕಳ ಹೆಸರು: ವಿಜ್ಞಾನದಲ್ಲಿ ನೂತನ ಆವಿಷ್ಕಾರ ಗಗನ್ ದೀಪ್ ಸಂತ ಜೋಸೆಫರ ಶಾಲೆ ಮಡಿಕೇರಿ ಹಾಗೂ ಅಮೃತ್ ಹೆಚ್.ಎಲ್. ಪಿಎಂ ಶ್ರೀ ಶಾಲೆ ಮಡಿಕೇರಿ, ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ ವರುಣ ಬಿ ಎಚ್ ಸಂತ ಜೋಸೆಫರ ಹಾಗೂ ಅನಘ ಬಿ.ಎಸ್. ಸಂತ ಜೋಸೆಫರ ಶಾಲೆ ಮಡಿಕೇರಿ, ಸೃಜನಾತ್ಮಕ ಬರವಣಿಗೆಯಲ್ಲಿ ಆಕಾಂಕ್ಷ ಎಂಎಸ್ ಸಂತ ಜೋಶರ ಶಾಲೆ ಹಾಗೂ ಕಾವ್ಯ ವೈ ಯು ಪಿ ಎಂ ಶ್ರೀ ಶಾಲೆ ಮಡಿಕೇರಿ ಹಾಗೂ ಸೃಜನಾತ್ಮಕ ಕಲೆಯಲ್ಲಿ ಚಂದನ್ ಪಿ.ಆರ್. ಪಿಎಂ ಶ್ರೀ ಶಾಲೆ ಮಡಿಕೇರಿ, ಪೃಥ್ವಿ ಕೊಡಗು ವಿದ್ಯಾಲಯ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ಹಾಗೂ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.