ರಾಜ್ಯ ಬಾಲ ಭವನ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ. ಜಿಲ್ಲೆ ಸಹಯೋಗದಲ್ಲಿ 2026-27ನೇ ಸಾಲಿನ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಪ್ರಯುಕ್ತ 9 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಕದ್ರಿ ದ.ಕ. ಜಿಲ್ಲಾ ಬಾಲ ಭವನದಲ್ಲಿ ಶನಿವಾರ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ ಎಂ.ಎಸ್. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೋಲು ಮತ್ತು ಗೆಲುವಿನ ನಡುವೆ ಕೇವಲ ಒಂದು ಹೆಜ್ಜೆಯ ಅಂತರವಿದ್ದು, ಮುಂದಿನ ಪ್ರಯತ್ನದಲ್ಲಿ ಗೆಲುವು ನಮ್ಮದೇ ಎಂಬ ಆತ್ಮವಿಶ್ವಾಸ ಹಾಗೂ ಆಶಾಭಾವನೆಯೊಂದಿಗೆ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.

ಮಂಗಳೂರು: ರಾಜ್ಯ ಬಾಲ ಭವನ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ. ಜಿಲ್ಲೆ ಸಹಯೋಗದಲ್ಲಿ 2026-27ನೇ ಸಾಲಿನ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಪ್ರಯುಕ್ತ 9 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಕದ್ರಿ ದ.ಕ. ಜಿಲ್ಲಾ ಬಾಲ ಭವನದಲ್ಲಿ ಶನಿವಾರ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ ಎಂ.ಎಸ್. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೋಲು ಮತ್ತು ಗೆಲುವಿನ ನಡುವೆ ಕೇವಲ ಒಂದು ಹೆಜ್ಜೆಯ ಅಂತರವಿದ್ದು, ಮುಂದಿನ ಪ್ರಯತ್ನದಲ್ಲಿ ಗೆಲುವು ನಮ್ಮದೇ ಎಂಬ ಆತ್ಮವಿಶ್ವಾಸ ಹಾಗೂ ಆಶಾಭಾವನೆಯೊಂದಿಗೆ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.

ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಕೆ.ಎಂ., ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಶಕುಂತಲ, ಸ್ಪರ್ಧೆಗಳ ನಿರ್ಣಾಯಕರಾದ ಪ್ರಮೋದ್ ಉಳ್ಳಾಲ್, ಕಿರಣ್ ಕುಮಾರ್, ಸಾವಿತ್ರಿ ಎಂ, ಅನ್ನಪೂರ್ಣ ಬುಚ್ಚನ್, ವಿಶ್ವನಾಥ್, ಮಂಜುನಾಥ್ ನಾಯ್ಕ್, ಸುಧೀರ್ ಕುಮಾರ್ ಜಿ., ಉಮೇಶ್ ಕಾರಂತ್ ಹಾಗೂ ಮತ್ತಿತರರು ಇದ್ದರು.ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಾದ ಸೃಜನಾತ್ಮಕ ಪ್ರದರ್ಶನ ಕಲೆ, ಸೃಜನಾತ್ಮಕ ಬರವಣಿಗೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರ, ಸೃಜನಾತ್ಮಕ ಕಲೆ ಹೀಗೆ ಒಟ್ಟು 4 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಸ್ಪರ್ಧೆಗಳಲ್ಲಿ ಜಿಲ್ಲೆಯ ಒಟ್ಟು 79 ಸ್ಪರ್ಧಾಳುಗಳು ಭಾಗವಹಿಸಿದ್ದರು.ಸೃಜನಾತ್ಮಕ ಪ್ರದರ್ಶನ ಕಲೆ ವಿಭಾಗದಲ್ಲಿ ಕೆ.ಪ್ರಥಮ್ ಮಲ್ಯ, ಪ್ರಥಮ, ಹಿಮಾನಿ ದ್ವಿತೀಯ, ಯಶವಂತ ತೃತೀಯ. ವಿಜ್ಞಾನದಲ್ಲಿ ನೂತನ ಆವಿಷ್ಕಾರ ಸ್ಪರ್ಧೆಯಲ್ಲಿ ಶ್ರೇಷ್ಠ ನಾಯ್ಕ ವಿ. ಪ್ರಥಮ, ಪ್ರಥ್ವಿಕ್ ದ್ವಿತೀಯ, ಮಾನ್ವಿತ್ ಕುಲಾಲ್ ತೃತೀಯ. ಸೃಜನಾತ್ಮಕ ಬರವಣಿಗೆ ವಿಭಾಗದಲ್ಲಿ ಚಂದ್ರಿಕಾ ರಾಮು ಚವ್ಹಾಣ ಪ್ರಥಮ, ವಂದನಾ ಬಸವರಾಜ್ ಕರಿಗಾರ್ ದ್ವಿತೀಯ, ಅಯನ ಪಿರೇರಾ ತೃತೀಯ. ಸೃಜನಾತ್ಮಕ ಕಲೆ ವಿಭಾಗದಲ್ಲಿ ಆಶ್ನಾ ಲೈನಾ ಪಿರೇರಾ ಪ್ರಥಮ, ಎಂ.ವಿಕ್ರಮ್ ಶೆಣೈ ದ್ವಿತೀಯ, ಮನ್ವಿತ್ ಕೆ.ಎಲ್. ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ.