30ರಂದು ‘ಜಿಲ್ಲಾ ಮಟ್ಟದ ಯುವಜನೋತ್ಸವ’

| Published : Nov 14 2024, 12:48 AM IST

ಸಾರಾಂಶ

ಕೊಡಗು ಜಿಲ್ಲಾ ಮಟ್ಟದ ಯುವಜನೋತ್ಸವವು ನ. 30ರಂದು ನಡೆಯಲಿದೆ. ಕೊಡಗು ಜಿಲ್ಲೆಯ ಯುವಕ ಯುವತಿಯರು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ, ಸೋಮವಾರಪೇಟೆ ಮತ್ತು ವಿರಾಜಪೇಟೆ, ಫೀಲ್ಡ್ ಮಾರ್ಷಲ್ ಕೆಂ.ಎಂ. ಕಾರ್ಯಪ್ಪ ಕಾಲೇಜು ಇವುಗಳ ಸಹಯೋಗದೊಂದಿಗೆ ಕೊಡಗು ‘ಜಿಲ್ಲಾ ಮಟ್ಟದ ಯುವಜನೋತ್ಸವ’ ಕಾರ್ಯಕ್ರಮವು ನ.30ರಂದು ನಗರದ ಫೀಲ್ಡ್ ಮಾರ್ಷಲ್ ಕೆಂ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಲಿದೆ.

ವಿಷಯಾಧಾರಿತ ಸ್ಪರ್ಧೆ: ವಿಜ್ಞಾನ ಮೇಳ ಗುಂಪು ಸ್ಪರ್ಧೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಧುನಿಕತೆ ವಿಷಯದ ಬಗ್ಗೆ ಪ್ರದರ್ಶನವಿರಬೇಕು. ಇದರಲ್ಲಿ ನಾವಿನ್ಯತೆಗೆ ಪ್ರಾತಿನಿಧ್ಯ ನೀಡಲಾಗುವುದು ಸಕ್ರಿಯ ಮಾದರಿ ತಯಾರಿಕೆಯ ಪ್ರದರ್ಶನವಿರಬೇಕು. ಪ್ರಥಮ 7 ಸಾವಿರ, ದ್ವಿತೀಯ 5 ಸಾವಿರ, ತೃತೀಯ 3 ಸಾವಿರ ರು. ಬಹುಮಾನ ನೀಡಲಾಗುತ್ತದೆ. ವೈಯಕ್ತಿಕ ಸ್ಪರ್ಧೆಗಳು ಬೇರೆ ಪ್ರತ್ಯೇಕವಾಗಿದೆ. ಗುಂಪು ಸ್ಪರ್ಧೆ: ಜನಪದ ನೃತ್ಯ (ತಂಡ) ಸಾಂಸ್ಕೃತಿಕ ಉತ್ಸವ: 10 ಜನ ಇರಬೇಕು. 15 ನಿಮಿಷ, ಯಾವುದೇ ರೀತಿಯ ರೀಮಿಕ್ಸ್ ಅಥವಾ ಮೂಲ ಹಾಡಿನ ಬದಲಾವಣೆಗೆ ಅವಕಾಶ ಇರುವುದಿಲ್ಲ. ಮೂಲ ಜಾನಪದ ಗೀತೆಯನ್ನು ಮಾತ್ರ ಪರಿಗಣಿಸತಕ್ಕದು. ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಮಾತ್ರ ಇರಬೇಕು.

ಜನಪದ ಗೀತೆ(ತಂಡ): 10 ಜನ ಇರಬೇಕು. 7 ನಿಮಿಷ ಕಾಲಾವಕಾಶ ಇರುತ್ತದೆ. ಯಾವುದೇ ರೀತಿಯ ರಿಮಿಕ್ಸ್ ಅಥವಾ ಮೂಲ ಹಾಡಿನ ಬದಲಾವಣೆಗೆ ಅವಕಾಶ ಇರುವುದಿಲ ಮೂಲ ಜಾನಪದ ಗೀತೆಯನ್ನು ಮಾತ್ರ ಪರಿಗಣಿಸಬೇಕು. ಕನ್ನಡ/ ಆಂಗ್ಲ/ ಹಿಂದಿ ಭಾಷೆಯಲ್ಲಿ ಮಾತ್ರ ಇರಬೇಕು.

ವೈಯಕ್ತಿಕ ಸ್ಪರ್ಧೆಗಳು: 15 ನಿಮಿಷ ಅವಧಿಯ ಜನಪದ ಗೀತೆ (ವೈಯಕ್ತಿಕ), ಕಥೆ ಬರೆಯುವುದು ಯುವ ಬರಹಗಾರರ ಸ್ಪರ್ಧೆ ಮತ್ತು ಕವಿತೆ ಬರೆಯುವುದು ಯುವ ಬರಹಗಾರರ ಸ್ಪರ್ಧೆ (ವೈಯಕ್ತಿಕ) 60 ನಿಮಿಷ . ಆಂಗ್ಲ/ ಹಿಂದಿ ಭಾಷೆಯಲ್ಲಿ ಮಾತ್ರ ಇರಬೇಕು. ವಿಷಯವು ಆಕ್ರಮಣಕಾರಿಯಾಗಿರಬಾರದು ಈಗಾಲೇ ಪ್ರಕಟವಾಗಿರಬಾರದು. ಅಕ್ಷರಗಳು ಸ್ಪಷ್ಟವಾಗಿರಬೇಕು. ಯಾವುದೇ ಜಾತಿ/ಪಂಥ/ಧರ್ಮ ಜನಾಂಗವನ್ನು ಹಾಗೂ ಸೂಕ್ತವಲ್ಲದ ವಿಷಯ ಒಳಗೊಂಡಿರಬಾರದು (1000 ಪದಗಳಿಗೆ ಮೀರಬಾರದು).

ಪೋಸ್ಟರ್ ಮೇಕಿಂಗ್ ಯುವ ಕಲಾವಿದ ಸ್ಪರ್ಧೆ (ಚಿತ್ರಕಲೆ) ವೈಯಕ್ತಿಕ ಸ್ಪರ್ಧೆ, 90 ನಿಮಿಷ ಅವಧಿ ಇರುತ್ತದೆ. ಭಾಷಣ ವೈಯಕ್ತಿಕ ಸ್ಪರ್ಧೆಯಾಗಿದೆ. ಆಯ್ದ ವಿಷಯಗಳ ಬಗ್ಗೆ ಭಾಷಣ ಮಾಡಬೇಕು. ತಿರ್ಮಾನವು ಭಾಷಣದ ನಿಖರತೆ, ಹರಿವು, ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸುವ ಅಂಶಗಳು, ಶಬ್ಧ/ ಪದಗಳು ಪುನರಾವರ್ತನೆ ಆಗದಿರುವುದು. ವಿಷಯದ ಬಗ್ಗೆ ಅರಿವು ಮತ್ತು ಆತ್ಮವಿಶ್ವಾಸ ಹೊಂದಿರುವುದರ ಮೇಲೆ ಅವಲಂಬಿಸಿರುತ್ತದೆ.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಯುವಕ, ಯುವತಿಯರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿದೆ. ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವವರ ವಯೋಮಿತಿಯು 15 ರಿಂದ 29 ವರ್ಷಗಳಾಗಿರಬೇಕು. ಹಾಗೂ ವಯೋಮಿತಿಯ ಬಗ್ಗೆ ಯಾವುದಾದರು ದಾಖಲೆ ಅಥವಾ ಆಧಾರ್ ಕಾರ್ಡ್ ದೃಢೀಕರಣ ಪ್ರತಿ ಮತ್ತು ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿಯನ್ನು ಕಡ್ಡಾಯವಾಗಿ ತರುವುದು. ಇಲ್ಲವಾದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬೆಳಗ್ಗೆ 9.30ರ ಒಳಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ. ವಿಸ್ಮಯಿ ಅವರು ತಿಳಿಸಿದ್ದಾರೆ.

ವೈಯಕ್ತಿಕ ಮತ್ತು ತಂಡದ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆಯುತ್ತಾರೆ.

ಭಾಗವಹಿಸುವ ತಂಡಗಳಿಗೆ ಸಾಮಾನ್ಯದರದ ಪ್ರಯಾಣ ಭತ್ಯೆ ನೀಡಲಾಗುವುದು.

ಹೆಚ್ಚಿನ ವಿವರಗಳಿಗೆ ಪಿ.ಪಿ.ಸುಕುಮಾರ್, ಅಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ, ಕೊಡಗು ಮೊ. 9481213920, 9591137275. ದಿಲೀಪ್‌ಕುಮಾರ್, ಅಧ್ಯಕ್ಷರು, ತಾಲೂಕು ಯುವ ಒಕ್ಕೂಟ, ಮಡಿಕೇರಿ- 8618568173 ಹಾಗೂ ಸಾಬಾ ಸುಬ್ರಮಣಿ, ಕಾರ್ಯಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ, ಕೊಡಗು- 9845571290 ಅವರನ್ನು ಸಂಪರ್ಕಿಸಬಹುದು