ಕನ್ನಡಪ್ರಭ ವಾರ್ತೆ ಹಾರೂಗೇರಿ ಪಟ್ಟಣದ ಜೈನ್ ಸಭಾಭವನದಲ್ಲಿ ಜ.10 ಹಾಗೂ 11 ರಂದು ನಡೆಯುತ್ತಿರುವ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ವಿಶಿಷ್ಟ ಮತ್ತು ವೈವಿಧ್ಯಪೂರ್ಣವಾಗಿ ನಡೆಯಲಿದ್ದು, ಯುವ ಸಾಹಿತಿಗಳು ಇದರ ಲಾಭವನ್ನು ಪಡೆದುಕೊಳ್ಳಬೇಕು ಕುಡಚಿ ಮತಕ್ಷೇತ್ರ ಶಾಸಕ ಮಹೇಂದ್ರ ತಮ್ಮನವರ ಎಂದು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಹಾರೂಗೇರಿ
ಪಟ್ಟಣದ ಜೈನ್ ಸಭಾಭವನದಲ್ಲಿ ಜ.10 ಹಾಗೂ 11 ರಂದು ನಡೆಯುತ್ತಿರುವ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ವಿಶಿಷ್ಟ ಮತ್ತು ವೈವಿಧ್ಯಪೂರ್ಣವಾಗಿ ನಡೆಯಲಿದ್ದು, ಯುವ ಸಾಹಿತಿಗಳು ಇದರ ಲಾಭವನ್ನು ಪಡೆದುಕೊಳ್ಳಬೇಕು ಕುಡಚಿ ಮತಕ್ಷೇತ್ರ ಶಾಸಕ ಮಹೇಂದ್ರ ತಮ್ಮನವರ ಎಂದು ಮನವಿ ಮಾಡಿದರು.ಪಟ್ಟಣದ ಎಂ.ಬಿ.ಪಾಟೀಲ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 17ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.ಸಾಹಿತಿ ಹಾಗೂ ರಾಯಬಾಗ ತಾಲೂಕು ಅಕ್ಷರ ದಾಸೋಹ ಅಧಿಕಾರಿ ಆರ್.ಎಂ.ಪಾಟೀಲ್ ಮಾತನಾಡಿ, ಹಾರೂಗೇರಿಯಲ್ಲಿ ಇದು 3ನೇ ಬಾರಿ ನಡೆಯುತ್ತಿರುವುದು ಹಾರೂಗೇರಿಗೊಂದು ಕಿರೀಟ ಪ್ರಾಯವಾಗಿದೆ. ಇದುವರೆಗೆ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ಒಂದೇ ಊರಿನಲ್ಲಿ 3 ಬಾರಿ ನಡೆದಿಲ್ಲ. ಆದರೆ, ಹಾರೂಗೇರಿಯಲ್ಲಿ ಇದು 3ನೇ ಬಾರಿ ನಡೆಯುತ್ತಿದ್ದೂ ಕನ್ನಡ ಅಭಿಮಾನಿಗಳಿಗೆ ಇದು ಸಂತಸವನ್ನುಂಟು ಮಾಡಿದೆ. ಸಾಹಿತ್ಯ ಕ್ಷೇತ್ರಕ್ಕೆ ಹಾರೂಗೇರಿ ತನ್ನದೇ ಆದ ಕೊಡುಗೆಯನ್ನು ಇದಕ್ಕೆ ಸಾಕ್ಷಿಯಾಗಿದೆ ಮತ್ತು ಈ ಸಮ್ಮೇಳನವು ಸರ್ವ ಧರ್ಮಗಳ ಸಮನ್ವಯವಾಗಲಿದೆ. ಯುವ ಸಾಹಿತಿಗಳಿಗೆ ಮತ್ತು ಕನ್ನಡ ಅಭಿಮಾನಿಗಳಿಗೆ ಸಾಹಿತ್ಯದ ಸಿಹಿ ನೀಡಲಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ರಾಯಬಾಗ ತಾಲೂಕು ಕನ್ನಡ ಪರಿಷತ್ತಿನ ಅಧ್ಯಕ್ಷ ಈರನಗೌಡ ಪಾಟೀಲ, ಅವಳೆ ಕುಮಾರ, ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರು, ಲಕ್ಷ್ಮಣ ಜಯಗೋಣಿ, ಅನುಸೂಯ ಮೂಲವಾಡ, ಸುರೇಶ್ ಐಹೊಳೆ, ವರ್ಧಮಾನ ಶಿರಹಟ್ಟಿ, ಜಿ.ಎಸ್.ದುಂಡಗಿ, ವಿ.ಬಿ.ಜೋಡಟ್ಟಿಬಿ.ಎಸ್.ಬಸರಗಿ, ಎಸ್.ಪಿ.ಮೋಕಾಸಿ, ಗೀತಾ ಮಾಳಶೆಟ್ಟಿ, ಪ್ರಾ.ಉಮೇಶ ಜಗದಾಳೆ, ಬಸವರಾಜ ಹಾರೂಗೇರಿ, ಎಸ್.ಬಿ.ಹಣಸಿ, ಅಬ್ಬಾಸ ಲ ತಿಪನ್ನವರ, ರಮೇಶ ಪಾಟೀಲ, ನೂರಾರು ಸಾಹಿತ್ಯಸಕ್ತರು ಉಪಸ್ಥಿತರಿದ್ದರು. ಸಾಹಿತಿ ಟಿ.ಎಸ್.ವೆಂಕಟಗುಡಿ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್..ಲಾಂಛನದಲ್ಲಿದೆ 16 ಸಮ್ಮೇಳನಾಧ್ಯಕ್ಷರ ಭಾವಚಿತ್ರ ಲಾಂಛನದಲ್ಲಿ ಹಿಂದೆ ನಡೆದ 16 ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾವಚಿತ್ರಗಳು ಮತ್ತು ಬೆಳಗಾವಿಯ ಹೆಮ್ಮೆಯ ಕಿತ್ತೂರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಯಬಾಗ ತಾಲೂಕಿನ ಗಣಿತ ಭಾಸ್ಕರ ಎಂದು ಪ್ರಖ್ಯಾತರಾದ ರಾಜಾದಿತ್ಯ ಹಾಗೂ ಹಾರೂಗೇರಿಯ ಕವಿ ಸಾಹಿತಿ ಅಲಭೈರವಿ ಮತ್ತು ಕ್ಷೇತ್ರದ ಶ್ರೀ ಚನ್ನಬೇಂದ್ರ ಅಜ್ಜನ ಭಾವಚಿತ್ರ ಮಧ್ಯದಲ್ಲಿ ಕ ಅಕ್ಷರದ ನಡುವೆ ತಾಯಿ ಭುವನೇಶ್ವರಿಯ ಭಾವಚಿತ್ರ ಅದರ ಕೆಳಗಡೆ ಈ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ವಿ.ಎಸ್.ಮಾಳಿ ಅವರ ಭಾವಚಿತ್ರ ಮತ್ತೆ ಕಲ್ಯಾಣ ಕಟ್ಟೋಣ ಎಂಬ ಧ್ಯೇಯ ವಾಕ್ಯವನ್ನು ಹೊಂದಿರುವ ವಿಶೇಷವಾದ ಲಾಂಛನವಾಗಿದೆ.