ಜಿಲ್ಲೇಲಿ ಮಾದೇಗೌಡರ ಕುಟುಂಬಕ್ಕೆ ವಿಶೇಷ ಗೌರವವಿದೆ: ಶಾಸಕ ರಮೇಶ್‌ ಬಂಡಿಸಿದ್ದೇಗೌಡ

| Published : Jun 14 2024, 01:03 AM IST

ಜಿಲ್ಲೇಲಿ ಮಾದೇಗೌಡರ ಕುಟುಂಬಕ್ಕೆ ವಿಶೇಷ ಗೌರವವಿದೆ: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಆಶಯ್‌ ಮಧು ತಾತನಂತೆ ಕ್ರೀಯಾಶೀಲರಾಗಿದ್ದಾರೆ. ಮುಂದೆ ಉತ್ತಮ ರಾಜಕಾರಣಿಯಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಜಿ.ಮಾದೇಗೌಡರ ಕುಟುಂಬ ರಾಜಕಾರಣ ಮಾಡುವುದಕ್ಕೆ ಒಂದು ನೈತಿಕ ಹಕ್ಕಿದೆ. ಜೊತೆಗೆ ಕ್ಷೇತ್ರದಲ್ಲಿ ತಮ್ಮದೆಯಾದ ಪಡೆಗಳನ್ನು ಸೃಷ್ಟಿಸಿಕೊಂಡಿದೆ. ಕಾರ್ಯಕರ್ತರು ಈ ಕುಟುಂಬಕ್ಕೆ ಎಂತಹ ತ್ಯಾಗ ಮಾಡಲು ಸಿದ್ಧವಿರುವುದು ಕೆಲವೊಂದು ವಿಚಾರಗಳಲ್ಲಿ ಕಂಡಿದ್ದೇನೆ .

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ದಿ.ಜಿ.ಮಾದೇಗೌಡರ ಕುಟುಂಬಕ್ಕೆ ತಮ್ಮದೆಯಾದ ಗೌರವ, ಸ್ಥಾನಮಾನಗಳಿವೆ ಎಂದು ಶ್ರೀರಂಗಪಟ್ಟಣ ಶಾಸಕ ಹಾಗೂ ಸೆಸ್ಕಾಂ ನಿಗಮ ಮಂಡಳಿ ಅಧ್ಯಕ್ಷ ರಮೇಶ್‌ ಬಂಡಿಸಿದ್ದೇಗೌಡ ಶ್ಲಾಘಿಸಿದರು. ಭಾರತೀನಗರದಲ್ಲಿ ಜನ್ಯ ಎಂಟರ್ ಪ್ರೈಸಸ್‌ನ ಇವಿ ಚಾರ್ಜಿಂಗ್ ಸ್ಟೇಷನ್ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ದಿ.ಜಿ.ಮಾದೇಗೌಡರು, ಪುತ್ರ ಮಧು ಜಿ. ಮಾದೇಗೌಡರು ಭಾರತೀ ವಿದ್ಯಾಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಗ್ರಾಮೀಣ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ ಎಂದರು.

ಆಶಯ್‌ ಮಧು ತಾತನಂತೆ ಕ್ರೀಯಾಶೀಲರಾಗಿದ್ದಾರೆ. ಮುಂದೆ ಉತ್ತಮ ರಾಜಕಾರಣಿಯಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಜಿ.ಮಾದೇಗೌಡರ ಕುಟುಂಬ ರಾಜಕಾರಣ ಮಾಡುವುದಕ್ಕೆ ಒಂದು ನೈತಿಕ ಹಕ್ಕಿದೆ. ಜೊತೆಗೆ ಕ್ಷೇತ್ರದಲ್ಲಿ ತಮ್ಮದೆಯಾದ ಪಡೆಗಳನ್ನು ಸೃಷ್ಟಿಸಿಕೊಂಡಿದೆ. ಕಾರ್ಯಕರ್ತರು ಈ ಕುಟುಂಬಕ್ಕೆ ಎಂತಹ ತ್ಯಾಗ ಮಾಡಲು ಸಿದ್ಧವಿರುವುದು ಕೆಲವೊಂದು ವಿಚಾರಗಳಲ್ಲಿ ಕಂಡಿದ್ದೇನೆ ಎಂದು ಹೇಳಿದರು.

ಶಾಸಕ ಮಧು ಜಿ.ಮಾದೇಗೌಡ, ರಮೇಶ್‌ ಬಂಡಿಸಿದ್ದೇಗೌಡ, ಆಶಯ್‌ ಮಧು ಅವರನ್ನು ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಅಭಿನಂದಿಸಿ ಗೌರವಿಸಿದರು. ಭಾರತೀನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಂ.ನಂಜೇಗೌಡ. ಜನ್ಯ ಎಂಟರ್ ಪ್ರೈಸಸ್ ಮಾಲೀಕ ಡಿ.ಪಿ.ಪ್ರಮೋದ್, ತಾಪಂ ಮಾಜಿ ಸದ್ಯ ಗಿರೀಶ್, ಆರ್.ಸಿದ್ದಪ್ಪ, ಮುಖಂಡರಾದ ಜಗದೀಶ್, ಪ್ರಸನ್ನ, ಕರಡಕೆರೆ ಹನುಮಂತೇಗೌಡ, ಬಿದರಹೊಸಹಳ್ಳಿ ಕಿರಣ್, ದಯಾನಂದ್ ಸೇರಿ ಹಲವರಿದ್ದರು.