ನವಲಗುಂದ:
ಧಾರವಾಡ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುರಿತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಪಕ್ಷವನ್ನು ಬಲಪಡಿಸಿ ಜನರೊಂದಿಗೆ ಬೆರೆತು ಕಾರ್ಯ ಮಾಡುವ ಪ್ರಾಮಾಣಿಕ ಕಾರ್ಯಕರ್ತರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲು ಹೈಕಮಾಂಡ್‌ಗೆ ವರದಿ ನೀಡಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಸೈಯ್ಯದ್ ಅಜ್ಮತಉಲ್ಲಾ ಹುಸೈನಿ ಹೇಳಿದರು.ಅವರು ಎಐಸಿಸಿ ಹಾಗೂ ಕೆಪಿಸಿಸಿ ನಿರ್ದೇಶನದ ಮೇರೆಗೆ ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಘಟನ್ ಸೃಜನ್ ಸಭೆಯಲ್ಲಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರ ಕುರಿತಾಗಿ ಜರುಗಿದ ಸಭೆಯಲ್ಲಿ ಮಾತನಾಡಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಕ್ಷೇತ್ರಾದ್ಯಂತ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು, ಮುಂಬರುವ ಜಿಪಂ, ತಾಪಂ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ದೃಷ್ಟಿಯಿಂದ ಉತ್ಸಾಹಿಗಳ ತಂಡ ರಚಿಸಲಾಗುತ್ತಿದೆ. ಸಂಘಟನಾ ನಿರತ ವ್ಯಕ್ತಿಗಳು ಯಾರೇ ಆಗಲಿ ಅಂತಹವರಿಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ಪಕ್ಷ ನೀಡಲಿದೆ. ಎಲ್ಲ ಕಾರ್ಯಕರ್ತರು ಸಂಘಟಿತರಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ಮುಂದಾಗಬೇಕು ಎಂದರು.ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಉಸ್ತುವಾರಿ ಪಿ.ಕೆ. ನೀರಲಕಟ್ಟಿ, ವಿನೋದ ಅಸೂಟಿ, ಸುಪ್ರಿಯಾ ದತ್ತಕುಮಾರ ಪಾಟೀಲ, ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ದಮಾನಗೌಡ ಹಿರೇಗೌಡರ, ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ವಿಜಯಗೌಡ ಪಾಟೀಲ, ಚಂಬಣ್ಣ ಹಾಳದೋಟರ, ಶಾಂತಮ್ಮ ಗುಜ್ಜಳ, ಚಂದ್ರಶೇಖರ ಜುಟ್ಟಲ್, ವಿಕಾಸ ತದ್ದೆವಾಡಿ, ನಂದಿನಿ ಹಾದಿಮನಿ, ಉಸ್ಥಾನ ಬಬರ್ಚಿ, ರಾಜುಗೌಡ ಪಾಟೀಲ, ಪ್ರೇಮಾ ನಾಯ್ಕರ ಸೇರಿ ಹಲವರಿದ್ದರು.